ನಿಮ್ಮ ಸುದ್ದಿ ಬಾಗಲಕೋಟೆ
ಸಾರ್ವಜನಿಕ ಬಡಾವಣೆಗಳ ವಿನ್ಯಾಸಕ್ಕೆ ಹಾಗೂ ಕೆಜೆಪಿ ಅನುಮೋದನೆಗೆ ಬಂದ ಅರ್ಜಿಗಳ ಮೇರೆಗೆ ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಸದಸ್ಯರು ಸ್ಥಳ ಪರಿಶೀಲನೆ ನಡೆಸಿದರು.
ಬುಡಾ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ ನೇತೃತ್ವದಲ್ಲಿ ಸದಸ್ಯರಾದ ರಾಜು ನಾಯ್ಕರ, ಜಯಂತ ಕುರಂದವಾಡ, ಐಕೂರ, ಚಂದ್ರಪ್ರಕಾಶ ಚೌಧರಿ, ನಾಮನಿರ್ದೇಶಿತ ಸದಸ್ಯೆ ಸವಿತಾ ಲೆಂಕೆಣ್ಣವರ, ಬುಡಾ ಅಧಿಕಾರಿಗಳಾದ ರಂಜನಾ, ವಿಕ್ರಂ ಅವರು ಸಾರ್ವಜನಿಕ ಬಡಾವಣೆಗಳ ವಿನ್ಯಾಸಕ್ಕೆ ಹಾಗೂ ಕೆಜೆಪಿ ಅನುಮೋದನೆಗೆ ಬಂದ ಸ್ಥಳ ಪರಿಶೀಲನೆ ನಡೆಸಿದರು.
ಬುಡಾ ಕಚೇರಿಯಲ್ಲಿ ಕೆಜೆಪಿಗೆ ಸಂಬಂಧಿಸಿದಂತೆ ೧೨ ಅರ್ಜಿ ಬಂದ ಹಿನ್ನೆಲೆಯಲ್ಲಿ ಬುಡಾ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ ನೇತೃತ್ವದಲ್ಲಿ ನಗರದ ಹೊರ ವಲಯದಲ್ಲಿರುವ ಗೃಹ ಮಂಡಳಿ ಸಮೀಪ ಸೇರಿ ೮ಕ್ಕೂ ಹೆಚ್ಚು ಕಡೆ ಕೆಜೆಪಿ ಹಾಗೂ ವಿನ್ಯಾಸದ ಕುರಿತು ಬಡಾವಣೆಗಳನ್ನು ಖುದ್ದು ಭೇಟಿ ನೀಡಿ ಅಲ್ಲಿಯ ಮೂಲ ಸೌಕರ್ಯ ಹಾಗೂ ಅನುಮೋದನೆ ಕೊಡಲು ಯೋಗ್ಯವಿದೆಯೋ ಇಲ್ಲವೋ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಕಲೆ ಹಾಕಲಾಯಿತು ಎಂದು ಬುಡಾ ಸದಸ್ಯ ರಾಜು ನಾಯ್ಕರ ಹೇಳಿದರು.