This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Politics News

*ಪೌಷ್ಠಿಕತೆಯಿಂದ ಸದೃಡ ಸಮಾಜ ನಿರ್ಮಾಣ ಸಾಧ್ಯ

ಪೌಷ್ಠಿಕತೆಯಿಂದ ಸದೃಡ ಸಮಾಜ ನಿರ್ಮಾಣ ಸಾಧ್ಯ : ಅವರಾದಿ

ನಿಮ್ಮ ಸುದ್ದಿ ಬಾಗಲಕೋಟೆ

ಸಮಾಜದ ಜೀವಾಳವಾಗಿರುವ ಮಹಿಳೆ ಮತ್ತು ಮಕ್ಕಳ ಆರೋಗ್ಯ ಕಾಳಜಿ ಮುಖ್ಯವಾಗಿದ್ದು, ಅಪೌಷ್ಟಿಕತೆ ತೊಡೆದು ಹಾಕಿದಲ್ಲಿ ಮಾತ್ರ ಸದೃಡ ಸಮಾಜ ನಿರ್ಮಾಣ ಸಾದ್ಯವೆಂದು ನಗರಸಭೆ ಉಪಾದ್ಯಕ್ಷ ಬಸವರಾದ ಅವರಾದಿ ಹೇಳಿದರು.

ನಗರಸಭೆ ಸಭಾಭವನದಲ್ಲಿಂದು ತಾಲೂಕಾ ಆಡಳಿತ, ನಗರಸಭೆ, ಶಿಶು ಅಭಿವೃದ್ದಿ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಯೋಗದಲ್ಲಿ ರಾಷ್ಟ್ರೀಯ ಪೊಷಣ್ ಅಭಿಯಾನದ ಪೋಷನ್ ಪಕ್ವಾಡ್ ಅಂಗವಾಗಿ ಹಮ್ಮಿಕೊಂಡ ತಾಲೂಕಾ ಮಟ್ಟದ ಪೌಷ್ಠಿಕ ಆಹಾರ ಮೇಳ, ಪೌಷ್ಠಿಕ ಆಹಾರ ಕುರಿತ ರಂಗೋಲಿ ಸ್ಪರ್ಧೆ ಹಾಗೂ ಅಡುಗೆ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತಮ ಆರೋಗ್ಯ ಮತ್ತು ಪೌಷ್ಠಿಕ ಆಹಾರ ಸೇವನೆಯ ಪ್ರಾಮುಖ್ಯತೆ ಬಗ್ಗೆ ಗ್ರಾಮೀಣ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮುಂದಾಗಬೇಕು. ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಭಾಗದ ಮಕ್ಕಳಲ್ಲಿ ಅಪೌಷ್ಠಿಕತೆ ಹೆಚ್ಚಾಗಿ ಕಂಡುಬರುತ್ತಿದೆ. ಅಪೌಷ್ಠಿಕತೆ ತೊಡೆದು ಹಾಕಲು ಸರಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಈ ಯೋಜನೆಗಳ ಲಾಭವನ್ನು ಮಹಿಳೆಯರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ನಗರಸಭೆ ಪೌರಾಯುಕ್ತ ಮುನಿಷಾಮಪ್ಪ ಮಾತನಾಡಿ ಹುಟ್ಟಿದ ಮಗುವಿಗೆ ತಾಯಿಯ ಎದೆ ಹಾಲು ಮುಖ್ಯವಾಗಿದೆ. ಕೆಲವೊಂದು ತಾಯಂದಿರು ಮಕ್ಕಳಿಗೆ ಎದೆ ಹಾಲು ಕುಡಿಸಿದರೆ ತಮ್ಮ ಸೌಂದರ್ಯ ಕಡಿಮೆಯಾಗುತ್ತದೆ ಎಂಬ ಭ್ರಮೆಯಿಂದ ಎದೆ ಹಾಲನ್ನು ಕುಡಿಸಲು ಹಿಂಜರಿಯುತ್ತಾರೆ. ಇದರಿಂದ ಮಕ್ಕಳ ಅಪೌಷ್ಠಿಕತೆಗೆ ಕಾರಣವಾಗುತ್ತದೆ. ಆದ್ದರಿಂದ ಹುಟ್ಟಿದ ಮಗುವಿಗೆ ಎದೆ ಹಾಲು ಉತ್ತಮ ಪೌಷ್ಠಿಕ ಆಹಾರವಾಗಿದೆ ಎಂದರು.

ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ ಮಾತನಾಡಿ ಸರಕಾರ ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಪೋಷಣ್ ಪಕ್ವಾಡ್, ಬೇಟಿ ಪಡಾವೋ ಬೇಟಿ ಬಚಾವೋ ಉತ್ತಮ ಯೋಜನೆಯಾಗಿದೆ ಎಂದು ತಿಳಿಸಿದರು.

ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಬಿ.ಜಿ.ಹುಬ್ಬಳ್ಳಿ ಮಾತನಾಡಿ ನಮ್ಮ ಪೂರ್ವಿಕರ ಆಹಾರ ಕ್ರಮಗಳನ್ನು ಮುಂದುವರಿಸಿದ್ದರೆ ಇಂದು ಪೋಷಣ ಅಭಿಯಾನದಂತಹ ಕಾರ್ಯಕ್ರಮ ರೂಪಿಸುವ ಅಗತ್ಯವಿರಲಿಲ್ಲ. ತಿಂಗಳಲ್ಲಿ ಎರಡು ದಿನ ಸಿಹಿ ತಿನ್ನಲೆಂದೇ ಹುಣ್ಣಿ ಮತ್ತು ಅಮವಾಸೆಗಳಂದು ಮನೆಯಲ್ಲಿ ಸಿಹಿ ಅಡಿಗೆ ಮಾಡುತ್ತಾರೆ. ಸಾಂಪ್ರದಾಯಿಕವಾಗಿ ದೊರೆಯುವ ಕಾಳು, ತರಕಾರಿ ಹಣ್ಣಯಗಳ ಮೂಲಕ ಪೌಷ್ಠಿಕತೆ ಪಡೆಯಬಹುದಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ ಮಾತನಾಡಿ ಅಪೌಷ್ಠಿಕತೆ ಕೊರತೆಯಿಂದ ರಕ್ತಹೀನತೆಗೆ ಒಳಗಾಗಿ ತಾಯಿ ಹಾಗೂ ಶಿಸು ಮರಣಗಳು ಸಂಭವಿಸುತ್ತವೆ. ಮಹಿಳೆ ಗರ್ಭಿಣಿ ಸಂದರ್ಭದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಅಂಗವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರ ಜವಾಬ್ದಾರಿ ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.

ಉಪನ್ಯಾಸಕರಾಗಿ ಆಗಮಿಸಿದ್ದ ಕಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಗಂಗಮ್ಮ ಪಾಟೀಲ ಮಾತನಾಡಿ ಗರ್ಭಿಣಿ ಸಂದರ್ಭದಲ್ಲಿ ಮಹಿಳೆಯರು ಎಚ್ಚರ ವಹಿಸಬೇಕು. ಸರಕಾರಿ ಆಸ್ಪತ್ರೆಗಳಲ್ಲಿ ನೀಡುವ ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ, ಸ್ಥಳೀಯವಾಗಿ ದೊರೆಯುವ ಹೇರಳ ಪೌಷ್ಠಿಕಾಂಶವಿರುವ ನುಗ್ಗೆ ಸೊಪ್ಪು, ನುಗ್ಗೆಕಾಯಿ, ಹಣ್ಣು, ಹಸಿರು ತರಕಾರಿ, ಸಿರಿಧಾನ್ಯಗಳ ಬಳಕೆ ಮಾಡುವ ಮೂಲಕ ಅಪೌಷ್ಠಿಕತೆ ನಿವಾರಣೆ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಪ್ರಾರಂಭದಲ್ಲಿ ಶಿಶು ಅಭಿವೃದ್ದಿ ಯೋಜನಾಧಿಕಾರಿ ಶಿಲ್ಪಾ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನಗರಸಭೆಯ ಸಭಾಪತಿ ರವಿ ದಾಮಜಿ ಸೇರಿದಂತೆ ನಗರಸಭೆ ಸದಸ್ಯರು, ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ, ಬೇಟಿ ಬಚಾವೋ ಬೇಟಿ ಪಡಾವೋ ಸ್ಟಿಕರ್ ಬಿಡುಗಡೆ ಮಾಡಲಾಯಿತು. ಅಡುಗೆ ಮತ್ತು ರಂಗೋಲಿ ಸ್ಫರ್ದೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ಸಹ ನೀಡಲಾಯಿತು. ಪೌಷ್ಠಿಕ ಆಹಾರ ಮೇಳವನ್ನು ಪ್ರದರ್ಶನ ವೀಕ್ಷಿಸಲಾಯಿತು.

ವಿವಿಧ ಸ್ಪರ್ಧೆಗಳ ವಿಜೇತರು

ಪೋಷನ್ ಪಕ್ವಾಡ್ ಅಂಗವಾಗಿ ಹಮ್ಮಿಕೊಂಡ ಪುರುಷರ ಅಡುಗೆ ಸ್ಪರ್ಧೆಯಲ್ಲಿ ಸಂತೋಷ ಕತ್ತಿ (ಪ್ರಥಮ), ಪ್ರವೀಣ ಬೂದಿಹಾಳ (ದ್ವಿತೀಯ), ರಮೇಶ ವಾಲಿಕಾರ (ತೃತೀಯ) ಪಡೆದುಕೊಂಡರೆ, ರಂಗೋಲಿ ಸ್ಪರ್ಧೆಯಲ್ಲಿ ಜಯಶ್ರೀ ತೇಲಿ (ಪ್ರಥಮ), ಕಾವ್ಯಶ್ರೀ ರಾಜನಾಳ (ದ್ವೀತೀಯ) ಹಾಗೂ ಕೌಶಲ್ಯ ನಾಗರಾಳ (ತೃತೀಯ) ಬಹುಮಾನ ಪಡೆದುಕೊಂಡರು.

Nimma Suddi
";