ನಿಮ್ಮ ಸುದ್ದಿ ಬೆಂಗಳೂರು
ಖಾತೆ ಹಂಚಿಕೆ ಬೆನ್ನಲ್ಲೇ ಸಚಿವರ ಅಸಮಾಧಾನ ಭುಗಿಲೆದ್ದಿದ್ದು, ನೂತನ ಸಚಿವ ಎಂಟಿಬಿ ನಾಗರಾಜ್ ತಮಗೆ ಅಬಕಾರಿ ಖಾತೆ ಬೇಡ ಬೇರೆ ಖಾತೆ ನಿಡಿ ಎಂದು ಪಟ್ಟು ಹಿಡಿದಿದ್ದಾರೆ.
ಖಾತೆ ಬದಲಾವಣೆ ಮಾಡುವವರೆಗೂ ಸಂಪುಟ ಸಭೆಗೆ ಬರುವುದಿಲ್ಲ ಎಂದಿರುವ ಎಂಟಿಬಿ ನಾಗರಾಜ್, ತನಗೆ ವಸತಿ ಖಾತೆ ನೀಡಿ, ಇಲ್ಲವಾದಲ್ಲಿ ಅದಕ್ಕಿಂತ ಉತ್ತಮ ಖಾತೆಯನ್ನು ಕೊಡಿ. ಆದರೆ ಅಬಕಾರಿ ಖಾತೆ ತನಗೆ ಬೇಡ. ಖಾತೆ ಬದಲಾವಣೆ ಮಾಡುವವರೆಗೂ ಸರ್ಕಾರಿ ಸೌಲಭ್ಯವನ್ನೂ ಬಳಸಿಕೊಳ್ಳಲ್ಲ ಎಂದು ಹೇಳಿದ್ದಾರೆ.
ಈ ನಡುವೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಸಮಾಧಾನಿತ ಸಚಿವರ ಗೈರು ಹಾಜರಿಯಲ್ಲೇ ಸಂಪುಟ ಸಭೆ ಆರಂಭಿಸಿದ್ದಾರೆ. ಎಂಟಿಬಿ ನಾಗರಾಜ್, ಕೆ.ಗೋಪಾಲಯ್ಯ ಸೇರಿದಂತೆ ನಾಲ್ವರು ಅಸಮಾಧಾನಿತ ಸಚಿವರು ಸಭೆಗೆ ಗೈರಾಗಿದ್ದಾರೆ ಎಂದು ತಿಳಿದುಬಂದಿದೆ