This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Politics News

ಪ್ರಪ್ರಥಮ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ದಿಟ್ಟ ಮಹಿಳೆ ಚನ್ನಮ್ಮ: ಚರಂತಿಮಠ

ನಿಮ್ಮ ಸುದ್ದಿ ಬಾಗಲಕೋಟೆ

ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿದ ಮೊದಲ ದಿಟ್ಟ ಮಹಿಳೆ ಕಿತ್ತೂರು ರಾಣಿ ಚನ್ನಮ್ಮಳ ತತ್ವಾದರ್ಶಗಳು ಸಮಾಜಕ್ಕೆ ಮಾದರಿ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.

ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜಿಲ್ಲಾ ಪಂಚಾಯತ ನೂತನ ಸಭಾ ಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಕಿತ್ತೂರ ಚನ್ನಮ್ಮಾಜಿ 243ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ನಾಡಿನ ಧೀರ ಮಹಿಳೆ ಬ್ರಿಟಿಷರ ವಿರುದ್ಧ ಛಲ ಬಿಡದೆ ಹೋರಾಡಿದ ವೀರ ಮಹಿಳೆ. ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಝಾನ್ಸಿ ರಾಣಿ, ಓನಕೆ ಒಬ್ಬವ ಅನೇಕ ವನಿತೆಯರ ಪಾತ್ರ ಪ್ರಮುಖವಾಗಿದೆ ಎಂದರು.

ದೇಶಕ್ಕಾಗಿ, ಸಮಾಜಕ್ಕಾಗಿ ಅಭಿವೃದ್ಧಿಗಾಗಿ ಹೋರಾಡಿದ ಮಹಾನರ ಜಯಂತಿ ಆಚರಿಸುವುದರಿಂದ ಇತಿಹಾಸದ ಪುಟಗಳಲ್ಲಿ ಇವರು ಸದಾ ಅಜರಾಮರಾಗಿರುತ್ತಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‍ನ ಸದಸ್ಯ ಹಣಮಂತ ನಿರಾಣಿ ಮಾತನಾಡಿ, ದೇಶಕ್ಕಾಗಿ ಸಮಾಜಕ್ಕಾಗಿ ತಮ್ಮನ್ನು ತಾವು ಅರ್ಪಿಸಿ ಸೇವೆ ಸಲ್ಲಿಸಿದ ಅನೇಕ ಮಹಾನ್ ವ್ಯಕ್ತಿಗಳ ಜಯಂತಿಯನ್ನು ಸಾರ್ವಜನಿಕವಾಗಿ ಆಚರಿಸುವುದು ಶ್ಲಾಘನೀಯ. ದಿಟ್ಟ ನಿರ್ಧಾರದಿಂದ ಬ್ರಿಟಿಷರಿಂದ ಕಿತ್ತೂರು ಕೋಟೆ ರಕ್ಷಿಸಿದ ಮಹಿಳೆ ರಾಣಿ ಚನ್ನಮ್ಮ. ಈ ಸಮಾಜಕ್ಕೆ ಇವರ ಧೈರ್ಯ ಸಾಕ್ಷಿ. ಇಂದಿನ ದಿನ ಮಾತ್ರವಲ್ಲದೆ ಕಿತ್ತೂರು ಹಾಗೂ ಅದರ ಸಾಮಥ್ರ್ಯ ಇತಿಹಾಸವಾಗಬೇಕೆಂದು ಅವರು ಹೇಳಿದರು.

ಉಪನ್ಯಾಸಕರಾಗಿ ಆಗಮಿಸಿದ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ನಾಗರತ್ನ ಭಾವಿಕಟ್ಟಿ ಮಾತನಾಡಿ, 286 ಊರುಗಳನ್ನು ಒಳಗೊಂಡ ಕಿತ್ತೂರನ್ನು ಉಳಿಸಿಕೊಳ್ಳಲು ಪುರುಷರಂತೆ ಹೋರಾಡಿದ ವೀರ ವನಿತೆ. ಭಾರತದಲ್ಲಿ ಸಿಪಾಯಿ ದಂಗೆಗೆ ಮೊದಲೇ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಹಚ್ಚಿದ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಚೆನ್ನಮ್ಮ. ಬಿಲ್ಲುವಿದ್ಯೆ, ಖಡ್ಗ, ವೇದ-ಉಪನಿಷತ್ತುಗಳನ್ನು ಪಾರಂಗತ ಮಾಡಿಕೊಂಡ ಕನ್ನಡದ ಪುತ್ರಿ ಚೆನ್ನಮ್ಮ. ಬ್ರಿಟಿಷರ ಒಡೆದಾಳುವ ನೀತಿಯನ್ನು ಎದುರಿಸಿ ಹಿಂದೂ ಪ್ರದೇಶಗಳನ್ನು ಒಂದುಗೂಡಿಸಿ ಹೋರಾಡಿದ ಕಿತ್ತೂರು ಸಂಸ್ಥಾನದ ರಾಣಿ. ಕಪ್ಪು ಕಾಣಿಕೆ ಬ್ರಿಟಿಷರಿಗೆ ನೀಡುವುದು, ದತ್ತು ಪುತ್ರರಿಗೆ ಹಕ್ಕಿಲ್ಲ ಎಂಬ ಕಾಯ್ದೆಗಳ ವಿರುದ್ಧ ಪ್ರಶ್ನಿಸಿ ಹೋರಾಡಿದ ಪ್ರಪ್ರಥಮ ಮಹಿಳೆ ಇವರಾಗಿದ್ದು ಇಂದಿಗೂ ಇವರ ಹೆಸರು ಇತಿಹಾಸದ ಪುಟಗಳಲ್ಲಿ ಜೀವಂತವಾಗಿದೆ ಎಂದರು.

ರಾಣಿ ಚನ್ನಮ್ಮಳ ಜೀವನ, ಸಾಹಸ ಮತ್ತು ಧೈರ್ಯ ಇಂದಿನ ಯುವಪೀಳಿಗೆಗೆ ಮಾದರಿ. ಮೊಟ್ಟಮೊದಲ ಸ್ವಾತಂತ್ರ್ಯ ಕಿಚ್ಚು ಹಚ್ಚಿದ ಚೆನ್ನಮ್ಮಳ ಜಯಂತಿಯನ್ನು ರಾಜ್ಯಮಟ್ಟದಲ್ಲಿ ಅಷ್ಟೇ ಅಲ್ಲದೆ ರಾಷ್ಟ್ರಮಟ್ಟದಲ್ಲಿಯೂ ಸಹ ಸರಕಾರದಿಂದ ಆಚರಿಸಬೇಕು. ಹಾಗೂ ಪಠ್ಯಕ್ರಮದಲ್ಲಿ ಚೆನ್ನಮ್ಮಳ ಜೀವನ ಚರಿತ್ರೆ ಅಳವಡಿಸಬೇಕು ಎಂದು ಬೇಡಿಕೆ ಇಟ್ಟರು.

ರಾಜ್ಯದಲ್ಲಿ 25 ಜನರಿಗೆ ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಲಾಗುತ್ತಿದ್ದು, ಇದನ್ನು ಪ್ರತಿ ಜಿಲ್ಲೆಯ ಐದು ಜನರಿಗೆ ನೀಡಬೇಕು ಎಂದು ಒತ್ತಾಯಿಸಿದ ಅವರು ರಾಣಿ ಚನ್ನಮ್ಮಳ ಜೀವನ, ಸಾಧನೆ, ವಿಜಯೋತ್ಸವದ ಕುರಿತು ಸವಿಸ್ತಾರವಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕøತರಾದ ಬಸವೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರಾದ ಜೆ.ಬಿ.ದಾನಶೆಟ್ಟಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕಿತ್ತೂರ ರಾಣಿ ಚೆನ್ನಮ್ಮ ಹಾಗೂ ಬ್ರಿಟಿಷ ಅಧಿಕಾರಿ ಟ್ಯಾಕರೇಯ ಸಂಭಾಷಣೆಯನ್ನು ಏಕಭಿನಯ ಪಾತ್ರದ ಮೂಲಕ ವಿದ್ಯಾರ್ಥಿನಿ ವೈಷ್ಣವಿ ಶೀಲವಂತ ಎಲ್ಲರ ಗಮನ ಸೆಳೆದಳು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ವೀರಶೈವ ಪಂಚಮಸಾಲಿ ಸಮಾಜದ ಮುಖಂಡರು, ಎಲ್ಲಾ ಇಲಾಖೆ ಅಧಿಕಾರಿಗಳು, ಗಣ್ಯರು, ಸಿಬ್ಬಂದಿ ವರ್ಗದವರು ಮತ್ತಿತ್ತರರು ಉಪಸ್ಥಿತರಿದ್ದರು. ಶಿಕ್ಷಣ ಇಲಾಖೆಯ ಜಿಲ್ಲಾ ಸಂಯೋಜನಾ ಅಧಿಕಾರಿ ಜಾಸ್ಮೀನ ಕಿಲ್ಲೆದಾರ ಸ್ವಾಗತಿಸಿದರು. ಶಂಕರಲಿಂಗ್ ದೇಸಾಯಿ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಹೇಮಾವತಿ.ಎನ್., ವಂದಿಸಿದರು.