ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಅವರು ಚಿತ್ರರಂಗದಲ್ಲಿ ಬೆಸ್ಟ್ ಜೋಡಿಯಾಗಿ ಗುರುತಿಸಿಕೊಂಡಿದ್ದು, ಅವರಿಬ್ಬರನ್ನು ತೆರೆಮೇಲೆ ಜೊತೆಯಾಗಿ ನೋಡಲು ಫ್ಯಾನ್ಸ್ ಇಷ್ಟಪಡುತ್ತಾರೆ ಇದು ಸಮಾನ್ಯವಾಗಿ ಎಲ್ಲರಿಗು ತಿಳಿದಿರುವ ವಿಷಯ.
ಅಲ್ಲದೇ ರಿಯಲ್ ಲೈಫ್ನಲ್ಲಿ ಕೂಡ ಅವರು ಮದುವೆ ಆಗಲಿ ಎಂಬುದು ಅಭಿಮಾನಿಗಳ ಆಸೆ. ತಾವಿಬ್ಬರು ಪರಸ್ಪರ ಪ್ರೀತಿಸುತ್ತಿದ್ದೇವೆ ಎಂದು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಎಲ್ಲಿಯೂ ಹೇಳಿಕೊಂಡಿಲ್ಲ. ಹಾಗಿದ್ದರೂ ಕೂಡ ತಮ್ಮ ಬದುಕಿನಲ್ಲಿ ವಿಜಯ್ ದೇವರಕೊಂಡ ಓರ್ವ ಸ್ಪೆಷಲ್ ವ್ಯಕ್ತಿ ಎಂದು ರಶ್ಮಿಕಾ ಹೇಳಿದ್ದು ಬೆಳಕಿಗೆ ಬಂದಿದೆ.
. ಅಲ್ಲದೇ, ಅವರನ್ನು ವಿಜು ಎಂದು ಕೂಡ ಪ್ರೀತಿಯಿಂದ ಕರೆದಿದ್ದು, ವಿ ಆರ್ ಯುವ’ ನಡೆಸಿದ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಬಗ್ಗೆ ಮಾತನಾಡಿದ್ದಾರೆ. ‘ನಾನು ಮತ್ತು ವಿಜು ಒಂದು ರೀತಿಯಲ್ಲಿ ಒಟ್ಟಿಗೆ ಬೆಳೆದವರು. ಈಗ ನಾನು ಮಾಡುತ್ತಿರುವ ಎಲ್ಲದರಲ್ಲೂ ಅವರ ಕೊಡುಗೆ ಇದೆ ಎಂದರು.
ಎಲ್ಲ ಕೆಲಸದಲ್ಲೂ ನಾನು ಅವರ ಸಲಹೆ ಪಡೆಯುತ್ತೇನೆ. ಅವರ ಅಭಿಪ್ರಾಯ ನನಗೆ ಬೇಕು. ಎಲ್ಲದಕ್ಕೂ ಯೆಸ್ ಎನ್ನುವ ವ್ಯಕ್ತಿ ಅವರಲ್ಲ. ಇದು ಒಳ್ಳೆಯದು, ಇದು ಕೆಟ್ಟದು, ಇದರ ಬಗ್ಗೆ ನನಗೆ ಹೀಗೆ ಅನಿಸುತ್ತಿದೆ ಅಂತ ಅವರು ತಮ್ಮ ಅಭಿಪ್ರಾಯ ತಿಳಿಸುತ್ತಾರೆ’ ಎಂದು ರಶ್ಮಿಕಾ ಮಂದಣ್ಣ ತಿಳಿಸಿದ್ದಾರೆ.