This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

National News

ಸಿನಿ ಸುದ್ದಿ: ಎಲ್ಲ ಕೆಲಸದಲ್ಲೂ ನಾನು ಅವರ ಸಲಹೆ ಪಡೆಯುತ್ತೇನೆ, ಅವರ ಅಭಿಪ್ರಾಯ ನನಗೆ ಬೇಕು. : ದೇವರಕೊಂಡ ಬಗ್ಗೆ ರಶ್ಮಿಕಾ ಓಪನ್​ ಮಾತು

ಸಿನಿ ಸುದ್ದಿ: ಎಲ್ಲ ಕೆಲಸದಲ್ಲೂ ನಾನು ಅವರ ಸಲಹೆ ಪಡೆಯುತ್ತೇನೆ, ಅವರ ಅಭಿಪ್ರಾಯ ನನಗೆ ಬೇಕು. : ದೇವರಕೊಂಡ ಬಗ್ಗೆ ರಶ್ಮಿಕಾ ಓಪನ್​ ಮಾತು

ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್​ ದೇವರಕೊಂಡ ಅವರು ಚಿತ್ರರಂಗದಲ್ಲಿ ಬೆಸ್ಟ್​ ಜೋಡಿಯಾಗಿ ಗುರುತಿಸಿಕೊಂಡಿದ್ದು, ಅವರಿಬ್ಬರನ್ನು ತೆರೆಮೇಲೆ ಜೊತೆಯಾಗಿ ನೋಡಲು ಫ್ಯಾನ್ಸ್​ ಇಷ್ಟಪಡುತ್ತಾರೆ ಇದು ಸಮಾನ್ಯವಾಗಿ ಎಲ್ಲರಿಗು ತಿಳಿದಿರುವ ವಿಷಯ.

ಅಲ್ಲದೇ ರಿಯಲ್​ ಲೈಫ್​ನಲ್ಲಿ ಕೂಡ ಅವರು ಮದುವೆ ಆಗಲಿ ಎಂಬುದು ಅಭಿಮಾನಿಗಳ ಆಸೆ. ತಾವಿಬ್ಬರು ಪರಸ್ಪರ ಪ್ರೀತಿಸುತ್ತಿದ್ದೇವೆ ಎಂದು ವಿಜಯ್​ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಎಲ್ಲಿಯೂ ಹೇಳಿಕೊಂಡಿಲ್ಲ. ಹಾಗಿದ್ದರೂ ಕೂಡ ತಮ್ಮ ಬದುಕಿನಲ್ಲಿ ವಿಜಯ್​ ದೇವರಕೊಂಡ ಓರ್ವ ಸ್ಪೆಷಲ್​ ವ್ಯಕ್ತಿ ಎಂದು ರಶ್ಮಿಕಾ ಹೇಳಿದ್ದು ಬೆಳಕಿಗೆ ಬಂದಿದೆ.

. ಅಲ್ಲದೇ, ಅವರನ್ನು ವಿಜು ಎಂದು ಕೂಡ ಪ್ರೀತಿಯಿಂದ ಕರೆದಿದ್ದು, ವಿ ಆರ್​ ಯುವ’ ನಡೆಸಿದ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ಅವರು ವಿಜಯ್​ ದೇವರಕೊಂಡ ಬಗ್ಗೆ ಮಾತನಾಡಿದ್ದಾರೆ. ‘ನಾನು ಮತ್ತು ವಿಜು ಒಂದು ರೀತಿಯಲ್ಲಿ ಒಟ್ಟಿಗೆ ಬೆಳೆದವರು. ಈಗ ನಾನು ಮಾಡುತ್ತಿರುವ ಎಲ್ಲದರಲ್ಲೂ ಅವರ ಕೊಡುಗೆ ಇದೆ ಎಂದರು.

ಎಲ್ಲ ಕೆಲಸದಲ್ಲೂ ನಾನು ಅವರ ಸಲಹೆ ಪಡೆಯುತ್ತೇನೆ. ಅವರ ಅಭಿಪ್ರಾಯ ನನಗೆ ಬೇಕು. ಎಲ್ಲದಕ್ಕೂ ಯೆಸ್​ ಎನ್ನುವ ವ್ಯಕ್ತಿ ಅವರಲ್ಲ. ಇದು ಒಳ್ಳೆಯದು, ಇದು ಕೆಟ್ಟದು, ಇದರ ಬಗ್ಗೆ ನನಗೆ ಹೀಗೆ ಅನಿಸುತ್ತಿದೆ ಅಂತ ಅವರು ತಮ್ಮ ಅಭಿಪ್ರಾಯ ತಿಳಿಸುತ್ತಾರೆ’ ಎಂದು ರಶ್ಮಿಕಾ ಮಂದಣ್ಣ ತಿಳಿಸಿದ್ದಾರೆ.

";