This is the title of the web page
This is the title of the web page

Live Stream

January 2025
S M T W T F S
 1234
567891011
12131415161718
19202122232425
262728293031  

| Latest Version 9.4.1 |

Politics News

ಮಾರ್ಚ್‌ 9ರಂದು ‘ಕರ್ನಾಟಕ ಬಂದ್‌’ಗೆ ಕರೆ ನೀಡಿದ ಕಾಂಗ್ರೆಸ್‌

ಮಾರ್ಚ್‌ 9ರಂದು ‘ಕರ್ನಾಟಕ ಬಂದ್‌’ಗೆ ಕರೆ ನೀಡಿದ ಕಾಂಗ್ರೆಸ್‌

ನಿಮ್ಮ ಸುದ್ದಿ ತುಮಕೂರು

ಮಾರ್ಚ್‌ ರಂದು ಕರ್ನಾಟಕದಾದ್ಯಂತ ಬಂದ್‌ಗೆ ಕಾಂಗ್ರೆಸ್‌ ನಾಯಕ ಡಿಕೆ ಶಿವಕುಮಾರ್‌ ಅವರು ಕರೆ ನೀಡಿದ್ದಾರೆ.

ಅವರು ಇಂದು ಕೊರಟಗೆರೆಯಲ್ಲಿ ನಡೆದ ಪಾರ್ಟಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತ ಈ ಬಗ್ಗೆ ತಿಳಿಸಿದರು. ಮಾರ್ಚ್ 9ರಂದು ಬೆಳಗ್ಗೆ 9 ರಿಂದ ಬೆಳಗ್ಗೆ 11 ಗಂಟೆಯವರೆಗೆ ರಾಜ್ಯಾದ್ಯಂತ ಬಂದ್​ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕರೆ ಕೊಟ್ಟಿದ್ದಾರೆ.

2 ಗಂಟೆ ಕಾಲ ಅಂಗಡಿ ಮುಂಗಟ್ಟು ಮುಚ್ಚಿ ಬಂದ್​ಗೆ ಸಹಕರಿಸಲು ಮನವಿ ಮಾಡಿಕೊಂಡಿದ್ದಾರೆ.

ಇದೇ ವೇಳೆ ಅವರು ಮಾತನಾಡಿ, ಬಂದ್ ವೇಳೆ ಯಾರಿಗೂ ತೊಂದರೆ ನೀಡಲ್ಲ. ಶಾಂತಿ ರೀತಿಯಿಂದ ಪ್ರತಿಭಟನೆ ಮಾಡಬೇಕು. ವ್ಯಾಪಾರವನ್ನ ಎರಡು ಗಂಟೆಗಳ‌ ಕಾಲ ಅಂಗಡಿ ಮುಗ್ಗಟ್ಟು ಬಂದ್ ಮಾಡಿ ಬೆಂಬಲ ನೀಡುವಂತೆ ಮನವಿ ಮಾಡಿದರು.

ಇನ್ನೂ ಸಮಾರಂಭಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಗೈರು ಆಗಿದ್ದು, ಎದ್ದು ಕಾಣುತಿತ್ತು. ಅವರು ಅರಸೀಕೆರೆಯಲ್ಲಿ ಸಂಗೋಳ್ಳಿ ರಾಯಣ ಪ್ರತಿಮೆ ಅನಾವರಣಾ ಕಾರ್ಯಕ್ರಮಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

ಈ ನಡುವೆ ಸಭೆಗೆ ಕಾಂಗ್ರೆಸ್‌ ನಾಯಕರುಗಳು ಕೊರಟಗೆರೆ ವಿಧಾನಸಭೆಯ ನಾನಾ ಊರುಗಳಿಗೆ ಜನತೆಯನ್ನು ಕರೆ ತರಲು ಬಸ್‌ಗಳ ವ್ಯವಸ್ಥೆಯನ್ನು ಮಾಡಿದ್ದು ಕೂಡ ಕಂಡು ಬಂದಿತು. ಇದೇ ವೇಳೆ ಕೊರಟಗೆರೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕಾಂಗ್ರೆಸ್‌ ರಾಜೀವ ಭವನ ಕಟ್ಟಡವನ್ನು ಕೂಡ ಲೋಕರ್ಪಾಣೆ ಮಾಡಲಾಯಿತು.

Nimma Suddi
";