This is the title of the web page
This is the title of the web page

Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Politics News

ಸದನದಲ್ಲಿ ಸಿಡಿ ಪ್ರದರ್ಶಿಸಿದ ಕಾಂಗ್ರೆಸ್

ನಿಮ್ಮ ಸುದ್ದಿ ಬೆಂಗಳೂರು

ಕಾಂಗ್ರೆಸ್ ನಿಂದ ಸಿಡಿ ಹೋರಾಟ ಮುಂದುವರೆದಿದ್ದು ಕಲಾಪದ ಎರಡನೇ ದಿನವೂ ಹೋರಾಟ ಮುಂದುವರೆದಿದೆ.

ಸೋಮವಾರ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಸದನದಲ್ಲಿ ಸಿಡಿ ಪ್ರದರ್ಶಿಸಿ ಪ್ರತಿಭಟನೆಗೆ ಮುಂದಾದರು.

ಸಿಡಿಗಳನ್ನು ಹಿಡಿದು ಕಲಾಪದಲ್ಲಿ ಪ್ರದರ್ಶಿಸುವುದರೊಂದಿಗೆ ಸಿಡಿ ಸರಕಾರಕ್ಕೆ ಧಿಕ್ಕಾರ ಎಂದು ಕೂಗಿ ಸದನದ ಬಾವಿಗಿಳಿದರು.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ರೀತಿ ಸಿಡಿ ಹಿಡಿದು ಪ್ರತಿಭಟಿಸುವುದು ಸರಿಯಲ್ಲ. ಕಾಂಗ್ರೆಸ್ ಸದಸ್ಯರು ಪ್ರಶ್ನೋತ್ತರ ಕಲಾಪಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಸ್ಪೀಕರ್ ಮನವಿಗೆ ಬಗ್ಗದ ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರಿಸಿದಾಗ ಕಲಾಪ 10 ನಿಮಿಷ ಮುಂದೂಡಲಾಯಿತು.

Nimma Suddi
";