ತೈಲ ಬೆಲೆ ಏರಿಕೆಗೆ ಆಕ್ರೋಶ
ನಿಮ್ಮ ಸುದ್ದಿ ಬಾಗಲಕೋಟೆ
ಮಹಾಮಾರಿ ಕೊರೊನ ಸೋಂಕಿನ ಪರಿಣಾಮವಾಗಿ ಕೆಲಸ ಇಲ್ಲದೇ ಸಾರ್ವಜನಿಕರು ತತ್ತರಿಸಿದ್ದು ಪೆಟ್ರೋಲ್, ಡಿಸೇಲ್ ದರದ ಹೆಚ್ಚಳದಿಂದ ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ ಎಂದು ಗುಡೂರ ಗ್ರಾಪಂನ ಮಾಜಿ ಅಧ್ಯಕ್ಷ ಖಾಜೇಸಾಬ ಬಾಗವಾನ ಹೇಳಿದರು.
ಜಿಲ್ಲೆಯ ಇಳಕಲ್ ತಾಲೂಕಿನ ಗುಡೂರ ಎಸ್ ಸಿ ಗ್ರಾಮದ ಪದ್ಮಶ್ರೀ ಪೆಟ್ರೋಲ್ ಬಂಕ್ ಆವರಣದಲ್ಲಿ ನಡೆದ ಗುಡೂರ ಎಸ್ ಸಿ ಜಿಲ್ಲಾ ಪಂಚಾಯತ ಕ್ಷೇತ್ರದ ಮುಂಖಡರು ಕಾರ್ಯಕರ್ತರ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ೧೦೦ ನಾಟೌಟ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು
ಜನರು ಈಗಾಗಲೇ ಸಾಕಷ್ಟು ನೋವಿನಲ್ಲಿದ್ದಾರೆ. ಒಪ್ಪೊತ್ತಿನ ಊಟಕ್ಕೂ ಕಂಗಾಲಾಗಿದ್ದಾರೆ. ಇಂತಹ ಸಂದರ್ಭಗಳಲ್ಲಿ ಪೆಟ್ರೋಲ್ ಡಿಸೇಲಗಳ ಬೆಲೆ ಏರಿಕೆಯ ಮೂಲಕ ಜನಸಾಮಾನ್ಯರ ಜೇಬಿಗೆ ಕನ್ನ ಹಾಕುತ್ತಿರುವುದು ಸಮಂಜಸವಲ್ಲ. ಕೇಂದ್ರ ಸರ್ಕಾರವು ಬೆಲೆ ಏರಿಕೆಗೆ ಕಡಿವಾಣ ಹಾಕಿ ಪ್ರತಿಯೊಬ್ಬ ನಾಗರಿಕರ ಶ್ರೇಯಸ್ಸನ್ನು ಬಯಸಬೇಕು ಎಂದು ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ಅಪ್ಪಾಸಾಬ ನಾಡಗೌಡ ಪರಸಪ್ಪ ದಿಡ್ಡಿಬಾಗಿಲು ಮಕ್ತುಮ ಬಾಗವಾನ ಮಂಜುನಾಥ ಗೌಡರ ಮೈಬೂಬ್ ಸಾಬ್ ಆರಿ ಮೊಮ್ಮದ್ ಕೋಲಾರ್ ಮುಸ್ತಕ್ ಕೋಡಿಹಾಳ ಸೇರಿದಂತೆ ಗುಡೂರ ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರು ಸದಸ್ಯರು ಇತರರಿದ್ದರು.