This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

National News

ಆರ್​ಬಿಐಗೆ ಛೀಮಾರಿ ಹಾಕಿದ ಕೋರ್ಟ್: ಬ್ಯಾಂಕುಗಳು ತಮ್ಮ ಇಷ್ಟದಂತೆ ಬಡ್ಡಿ ಹಾಕಿದ್ರೆ ನೀವೇನ್ ಮಾಡುತ್ತಿರುತ್ತೀರಿ?

ಆರ್​ಬಿಐಗೆ ಛೀಮಾರಿ ಹಾಕಿದ ಕೋರ್ಟ್: ಬ್ಯಾಂಕುಗಳು ತಮ್ಮ ಇಷ್ಟದಂತೆ ಬಡ್ಡಿ ಹಾಕಿದ್ರೆ ನೀವೇನ್ ಮಾಡುತ್ತಿರುತ್ತೀರಿ?

ಅಲಾಹಾಬಾದ್ : ಬ್ಯಾಂಕು ಸಾಲ ನೀಡಿದ ಬಳಿಕ ಬಡ್ಡಿ ದರ ಹೆಚ್ಚಳ ಮಾಡುವ ಮುಂಚೆ ಗ್ರಾಹಕರಿಗೆ ಮಾಹಿತಿ ನೀಡಿ ಸಮ್ಮತಿ ಪಡೆಯಬೇಕು ಎಂದು ಆರ್​ಬಿಐ ನಿಯಮ ಹೇಳುತ್ತಿದ್ದು, ಬಹಳಷ್ಟು ಬ್ಯಾಂಕುಗಳು ಗ್ರಾಹಕರಿಗೆ ಗಮನಕ್ಕೆ ತಾರದೆಯೇ ಬಡ್ಡಿದರ ಪರಿಷ್ಕರಿಸಿ ಜಾರಿಗೆ ತರುವುದುಂಟು. ಇಂತಿಷ್ಟು ಬಡ್ಡಿ ಎಂಬ ತಿಳಿವಳಿಕೆಯಲ್ಲಿರುವ ಗ್ರಾಹಕರಿಗೆ ಅಂತಿಮವಾಗಿ ಸಾಲದ ಹೊರೆ ಬಹಳ ದೊಡ್ಡದಾಗಿ ಹೋಗಿರುತ್ತದೆ,

ಹೀಗಿರುವಾಗ ಇಂಥದ್ದೊಂದು ಘಟನೆ ಕೋರ್ಟ್ ಮೆಟ್ಟಿಲೇರಿದ್ದು, ಉತ್ತರಪ್ರದೇಶದ ಅಲಹಾಬಾದ್ ಉಚ್ಚ ನ್ಯಾಯಾಲಯದ ಕಣ್ಣು ಬಿಸಿಯಾಗುವಂತೆ ಮಾಡಿದ್ದು, ನಿಗದಿತ ದರಕ್ಕಿಂತ ಹೆಚ್ಚು ಬಡ್ಡಿ ವಸೂಲಿ ಮಾಡಿದ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಮತ್ತು ಬಡ್ಡಿದರದ ಅನ್ಯಾಯಗಳನ್ನು ಕಂಡೂಕಾಣದಂತೆ ಸುಮ್ಮನಿರುವ ಆರ್​ಬಿಐಗೆ ಹೈಕೋರ್ಟ್ ನ್ಯಾಯಪೀಠ ಛೀಮಾರಿ ಹಾಕಿದೆ ಎಂದು ಮಾಹಿತಿ ಬೇಳಕಿಗೆ ಬಂದಿದೆ.

ಮನಮೀತ್ ಸಿಂಗ್ ಎಂಬುವವರು ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್​ನಿಂದ 9 ಲಕ್ಷ ರೂ ಸಾಲ ಪಡೆದಿರುತ್ತಾರೆ. ಫ್ಲೋಟಿಂಗ್ ರೇಟ್ (floating rate) ಆಯ್ಕೆ ಮಾಡಿಕೊಳ್ಳುತ್ತಿದ್ದು, ಬಡ್ಡಿದರ ಶೇ. 12.5ರಷ್ಟಿರುತ್ತದೆ. ಪೂರ್ಣ ಸಾಲ ಮರುಪಾವತಿ ಮಾಡಿ ನೋ ಡ್ಯೂ ಸರ್ಟಿಫಿಕೇಟ್ ಮತ್ತು ಅಡವಿಟ್ಟಿದ್ದ ಆಸ್ತಿಪತ್ರಗಳನ್ನು ಪಡೆಯುತ್ತಾರೆ.ಆದರೆ, ಮನಮೀತ್ ಸಿಂಗ್ ತಮ್ಮ ಲೋನ್ ಅಕೌಂಟ್ ಅನ್ನು ಪರಿಶೀಲಿಸಿದಾಗ ವಾಸ್ತವ ಗೊತ್ತಾಗುತ್ತದೆ. ಅವರ ಬ್ಯಾಂಕ್ ಖಾತೆಯಿಂದ ಲೋನ್ ಖಾತೆಗೆ ಒಟ್ಟು 27 ಲಕ್ಷ ರೂ ಮುರಿದುಕೊಂಡಿರಲಾಗುತ್ತದೆ.

ಶೇ. 12.5ರಷ್ಟು ಬಡ್ಡಿದರದಲ್ಲಿ 17 ಲಕ್ಷ ರೂ ಹಣವನ್ನು ಮುರಿದುಕೊಳ್ಳಬೇಕಿದ್ದು, ಬ್ಯಾಂಕ್ 10 ಲಕ್ಷದಷ್ಟು ಹೆಚ್ಚು ಹಣ ಡೆಬಿಟ್ ಮಾಡಿರುತ್ತದೆ. ಅಂದರೆ, ಶೇ. 16-18ರಷ್ಟು ಬಡ್ಡಿದರವನ್ನು ಸಾಲಕ್ಕೆ ವಿಧಿಸಲಾಗಿರುತ್ತದೆ. ಬ್ಯಾಂಕಿಂಗ್ ಓಂಬುಡ್ಸ್​ಮ್ಯಾನ್ ಅವರಿಗೆ ಮನಮೀತ್ ಸಿಂಗ್ ದೂರು ಕೊಡುತ್ತಾರೆ. ಬ್ಯಾಂಕ್​ನ ಲಿಖಿತ ಉತ್ತರದ ಪ್ರತಿಯನ್ನು ಸಿಂಗ್​ಗೆ ನೀಡಿ ಆ ಕೇಸ್ ಸಮಾಪ್ತಿ ಮಾಡಲಾಗುತ್ತದೆ ಎಂದು ಮಾಹಿತಿ ಕಂಡು ಬಂದಿದೆ.