This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Politics News

ಖರ್ಗೆ ಅವರೇ ಪ್ರಧಾನಿಯಾಗಬೇಕು ಎಂದು ಯಾರಾದರೂ ಪ್ರಸ್ತಾಪಿಸಿದರೆ, ಹೈಕಮಾಂಡ್‌ ಒಪ್ಪುವುದೇ?: ಖರ್ಗೆಗೆ ದೇವೇಗೌಡರ ಟಾಂಗ್

ಖರ್ಗೆ ಅವರೇ ಪ್ರಧಾನಿಯಾಗಬೇಕು ಎಂದು ಯಾರಾದರೂ ಪ್ರಸ್ತಾಪಿಸಿದರೆ, ಹೈಕಮಾಂಡ್‌ ಒಪ್ಪುವುದೇ?: ಖರ್ಗೆಗೆ ದೇವೇಗೌಡರ ಟಾಂಗ್

ನವದೆಹಲಿ: ”ನೀವು ಪ್ರಧಾನಿಯಾದರೆ ಕಾಂಗ್ರೆಸ್‌ ಪಕ್ಷ ಸಹಿಸಿಕೊಳ್ಳುತ್ತದೆಯೇ?,” ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ರಾಜ್ಯಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೇಳಿದರು.

91ನೇ ವಯಸ್ಸಿನಲ್ಲಿ ದೇವೇಗೌಡರಿಗೆ ಬಿಜೆಪಿ ಸಹವಾಸ ಬೇಕಿತ್ತಾ? ದೇವೇಗೌಡರು ಹಾಗೂ ಮೋದಿ ನಡುವೆ ತಡವಾಗಿ ಪ್ರೇಮ ಮೂಡಿದೆ,” ಎಂದು ಲಘುವಾಗಿ ಮಾತನಾಡಿದ್ದ ಖರ್ಗೆ ಅವರಿಗೆ ಗೌಡರು ಖಡಕ್‌ ಪ್ರತ್ಯುತ್ತರ ನೀಡಿದರು.

ಕಾಂಗ್ರೆಸ್‌ ಪಕ್ಷವು ಎಂತಹ ಮನಸ್ಥಿತಿ ಹೊಂದಿದೆ ಎಂಬುದು ನನಗೆ ಮಾತ್ರ ಗೊತ್ತಿದೆ. ಖರ್ಗೆ ಅವರು ಪ್ರಾಮಾಣಿಕ ವ್ಯಕ್ತಿ. ಮಾಜಿ ಪಿಎಂ ಡಾ ಮನಮೋಹನ್‌ ಸಿಂಗ್‌ ಅವರೂ ಅಪ್ಪಟ ಪ್ರಾಮಾಣಿಕ ವ್ಯಕ್ತಿ. ಆದರೆ ಕಾಂಗ್ರೆಸ್‌ ತನ್ನನು ತಾನೇ ದುರ್ಬಲಗೊಳಿಸಿಕೊಳ್ಳುತ್ತಿದೆ ಎಂದು ತಿಳಿಸಿದರು.

ಮುಂದೊಂದು ದಿನ, ಮಲ್ಲಿಕಾರ್ಜುನ ಖರ್ಗೆ ಅವರೇ ಪ್ರಧಾನಿಯಾಗಬೇಕು ಎಂದು ಯಾರಾದರೂ ಪ್ರಸ್ತಾಪಿಸಿದರೆ, ಅದಕ್ಕೆ ಹೈಕಮಾಂಡ್‌ ಒಪ್ಪುವುದೇ? ಖಂಡಿತವಾಗಿಯೂ ಒಪ್ಪುವುದಿಲ್ಲ. ಏಕೆಂದರೆ ಕಾಂಗ್ರೆಸ್‌ ಎಂತಹ ಪಕ್ಷ ಎಂಬುದು ನನಗೆ ಗೊತ್ತಿದೆ,” ಎಂದರು.

ನಾನು ಜೀವನದಲ್ಲಿ ಪಕ್ಷದಿಂದ ಪಕ್ಷಕ್ಕೆ ಜಿಗಿದವನಲ್ಲ. ಕಾಂಗ್ರೆಸ್‌ ನಮ್ಮ ಪಕ್ಷವನ್ನು ನಿರ್ನಾಮ ಮಾಡಲು ಹೊರಟಿತು. ಆಗ ನಾನು ಮೈತ್ರಿ ಮಾಡಿಕೊಳ್ಳಲು ಮುಂದಾದೆ,” ಎಂದು ಹೇಳಿದರು

Nimma Suddi
";