This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Politics News

ಜಿಪಂ ಕ್ಷೇತ್ರ ಮೀಸಲಾತಿ:ಭ್ರಮನಿರಸನ

ನಿಮ್ಮ ಸುದ್ದಿ ಬಾಗಲಕೋಟ

ಬಾಗಲಕೋಟ ಜಿಲ್ಲಾ ಪಂಚಾಯತ್ ಚುಣಾವಣೆಗಾಗಿ ಮೀಸಲಾತಿಯ ಕರಡು ಪಟ್ಟಿ ರಾಜ್ಯ ಚುಣಾವಣಾ ಆಯೋಗದಿಂದ ಪ್ರಕಟವಾಗಿದ್ದು ಆಕ್ಷೇಪಣೆ ಸಲ್ಲಿಸಲು 2021 ಜುಲೈ 8 ಕೊನೆಯ ದಿನವಾಗಿರುತ್ತದೆ.

ಯಾವದೇ ರಾಜಕೀಯ ಪಕ್ಷದ ಕಾರ್ಯಕರ್ತರಿರಲಿ ಜಿಲ್ಲಾ ಪಂಚಾಯತ ಚುಣಾವಣೆಗೆ ಸ್ಪರ್ಧಿಸುವ ಸಲುವಾಗಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಚುನಾವಣಾ ತಯಾರಿ ಮಾಡಿಕೊಂಡಿರುತ್ತಾರೆ.

ಆದರೆ ಈಗ ಪ್ರಕಟಗೊಂಡಿರುವ ಮೀಸಲಾತಿ ನೋಡಿ ಭ್ರಮನಿರಸನಗೊಂಡಿದ್ದಾರೆ. ಇನ್ನೂ ಆ ಮತಕ್ಷೇತ್ರದ ಆಡಳಿತಾರೂಢ ಶಾಸಕರಾದರೂ ಅವರ ಸಹಾಯಕ್ಕೆ ಬರಬೇಕಾಗಿತ್ತು ಕಾರ್ಯಕರ್ತರ ದೌರ್ಭಾಗ್ಯಕ್ಕೆ ಅವರು ಕೂಡ ಸ್ಪಂದಿಸದೇ ಇರುವದು ಕಾರ್ಯಕರ್ತರಿಗೆ ನೋವುಂಟುಮಾಡಿದೆ.

ಇದನ್ನೆಲ್ಲಾ ನೋಡಿದರೆ ವಿಧಾನ ಸಭಾ ಚುಣಾವಣೆಗೂ ಕೂಡ ಮೀಸಲಾತಿ ನಿಗದಿ ಮಾಡಿದರೆ ಕಾಯಂ ಆಗಿ ಒಂದೇ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗುತ್ತಾ ಇರುವವರಿಗೆ ಕಾರ್ಯಕರ್ತರ ನೋವು ಅರ್ಥ ಆಗಬಹುದೇನೋ ?

ಆಡಳಿತಾರೂಢ ಶಾಸಕರು ಕೇವಲ ತಮ್ಮ ಆಪ್ತ ವರ್ಗ ಗುರಿಯಾಗಿಸಿಕೊಂಡು ಅಥವಾ ಮುಂದೊಂದು ದಿನ ಆ ಕಾರ್ಯಕರ್ತ ತಮಗೆ ಪ್ರಬಲ ಪ್ರತಿಸ್ಪರ್ಧಿ ಆಗಬಹುದು ಎಂಬ ಲೆಕ್ಕಾಚಾರದಿಂದಲೋ ಅಥವಾ ಆ ಕ್ಷೇತ್ರದಲ್ಲಿ ಪ್ರಾಬಲ್ಯವಾಗಿರುವ ಒಂದು ಜಾತಿಯ ನಾಯಕರುಗಳ ರಾಜಕೀಯ ಪ್ರಾಬಲ್ಯ ಕಡಿಮೆ ಮಾಡುವದಕ್ಕಾಗಿ, ವಿರೋಧ ಪಕ್ಷದ ಪ್ರಾಬಲ್ಯ ಕಡಿಮೆ ಮಾಡುವದಕ್ಕಾಗಿ ಹೀಗೆ ಇನ್ನೂ ಹಲವಾರು ಕಾರಣಗಳಿಗಾಗಿ ಜಿಲ್ಲಾ ಪಂಚಾಯತ್ ಮೀಸಲಾತಿಯನ್ನು ಮತ್ತು ಕ್ಷೇತ್ರ ಪುನರ್ವಿಂಗಡನೆ ಮಾಡಿರುವದು ಮೇಲ್ನೋಟಕ್ಕೆ ಕಂಡು ಬರುತ್ತದೆ.

ಉದಾಹರಣೆಗೆ ಬದಾಮಿ ತಾಲ್ಲೂಕಿನ ಜಲಗೇರಿ ಜಿಲ್ಲಾ ಪಂಚಾಯತ ಅನುಸೂಚಿತ ಜಾತಿಗೆ ಮೀಸಲಿಟ್ಟಿದ್ದಾರೆ ಆದರೆ ಇಲ್ಲಿ ಹಿಂದುಳಿದ ವರ್ಗದ ಕುರುಬ ಜನಾಂಗ ಹೆಚ್ಚಿಗೆ ಇದ್ದಾರೆ. ಜಲಗೇರಿ ಜಿಲ್ಲಾ ಪಂಚಾಯತ ಈ ಮೊದಲು ಅನವಾಲ ಜಿಲ್ಲಾ ಪಂಚಾಯತ ಆಗಿತ್ತು ಕಾರಣ ಜಿಲ್ಲಾ ಪಂಚಾಯತ ಮತಕ್ಷೇತ್ರದ ದೊಡ್ಡ ಗ್ರಾಮದ ಹೆಸರು ಜಿಲ್ಲಾ ಪಂಚಾಯತ ಕ್ಷೇತ್ರಕ್ಕೆ ಇರಬೇಕು ಎಂಬ ನಿಯಮ.

ತಾವೇ ಮಾಡಿದ ನಿಯಮ ಗಾಳಿಗೆ ತೂರಿ ಈಗ ಜಲಗೇರಿ ಎಂಬ ಹೆಸರಿನಲ್ಲಿ ಜಿ ಪಂ ಕ್ಷೇತ್ರ ಸೃಷ್ಟಿ ಮಾಡಿರುವದು. ಮುಖ್ಯವಾಗಿ ತಾಲ್ಲೂಕಿಗೊಂದು ಅನುಸೂಚಿತ ಜಾತಿಗೆ ಅವಕಾಶ ಕೊಡಬೇಕು ಆದರೆ ಮತಕ್ಷೇತ್ರ ಗಣನೆಗೆ ತೆಗೆದುಕೊಂಡರೆ ಒಂದು ಮತಕ್ಷೇತ್ರಕ್ಕೆ ಎರಡು ಅನುಸೂಚಿತ ಜಾತಿಗೆ ಪ್ರಾತಿನಿಧ್ಯ ಕೊಟ್ಟಂತಾಗುತ್ತದೆ.

ಬೀಳಗಿ ಮತಕ್ಷೇತ್ರದ ಗಲಗಲಿ ಮತ್ತು ಜಲಗೇರಿ ಜಿಪಂ ಕ್ಷೇತ್ರಗಳಿಗೆ ಮೀಸಲಾತಿ ಅನುಸೂಚಿತ ಜಾತಿಯಾಗಿದ್ದು ಇದು ಈ ಮತಕ್ಷೇತ್ರದ ಎಲ್ಲಾ ರಾಜಕೀಯ ಪಕ್ಷಗಳ ಕಾರ್ಯಕರ್ತರಿಗೆ ಅನ್ಯಾಯ ಆಗುವದಿಲ್ಲವೇ ?

ಒಟ್ಟಾರೆಯಾಗಿ ಈ ಕೋವಿಡ್ ಸಮಯದಲ್ಲಿ ತರಾತುರಿಯಾಗಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಜಿಪಂ ಚುಣಾವಣೆ ನಡೆಸಲು ತಯಾರಿ ನಡೆಸಿರುವದರ ವಿರುದ್ಧ ಹೈಕೋರ್ಟ್ ನಲ್ಲಿ ತಡೆಯಾಜ್ಞೆ ಗಾಗಿ ಮನವಿ ಸಲ್ಲಿಸಲಿದ್ದೇನೆ, ಅದೇ ರೀತಿ ರಾಜ್ಯ ಚುಣಾವಣೆ ಆಯೋಗಕ್ಕೂ ಆಕ್ಷೇಪಣೆ ಸಲ್ಲಿಸಲಿದ್ದೇನೆ.

ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ಧರಾಮಯ್ಯನವರು ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರರವರು ಮತ್ತು ಪಕ್ಷದ ಹಿರಿಯ ನಾಯಕರುಗಳ ಗಮನಕ್ಕೆ ಈ ವಿಷಯ ತರಲಿದ್ದೇನೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಕೆಪಿಸಿಸಿ ಸಂಯೋಜಕರು ಹಾಗೂ ಜಿಲ್ಲಾ ಮಾಧ್ಯಮ ವಕ್ತಾರ ಅನೀಲಕುಮಾರ ಎಚ್ ದಡ್ಡಿ ಯವರು ತಿಳಿಸಿದ್ದಾರೆ.

Nimma Suddi
";