This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Politics News

ಮುಖ್ಯಾಧಿಕಾರಿ, ಸಿಬ್ಬಂದಿ ಕಾರ್ಯ ವೈಖರಿಗೆ ಅಸಮಾಧಾನ

ಪಪಂ ಸ್ಥಾಯಿ ಸಮಿತಿ ಸಭೆ

ನಿಮ್ಮ ಸುದ್ದಿ ಬಾಗಲಕೋಟೆ

ಜಿಲ್ಲೆಯ ಅಮೀನಗಡ ಪಟ್ಟಣ ಪಂಚಾಯಿತಿಯಲ್ಲಿ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ಕಾರ್ಯ ವೈಖರಿ ಕುರಿತು ಪಪಂ ಸದಸ್ಯರು ಆಕ್ರೋಶಗೊಂಡ ಘಟನೆ ಬುಧವಾರ ನಡೆದಿದೆ.

ಪಪಂನ ಸ್ಥಾಯಿ ಸಮಿತಿಯ ಅಧ್ಯಕ್ಷ ವಿಜಯಕುಮಾರ ಕನ್ನೂರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯಾಧಿಕಾರಿ ಕಾರ್ಯ ವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ ಜವಾಬ್ದಾರಿ ಸ್ಥಾನದಲ್ಲಿರುವವರು ಸದಸ್ಯರಿಗೆ ಅಗೌರವ ತೋರಿಸುತ್ತಿರುವುದು ಸರಿಯಲ್ಲ ಎಂದರು.

ಸಭೆಗೆ ಆಹ್ವಾನವೇ ಇಲ್ಲ
ಜಾನುವಾರು ಹಾಗೂ ಸಂತೆ ಮಾರುಕಟ್ಟೆ ಸ್ಥಳಾಂತರಿಸುವ ಕುರಿತಂತೆ ಏ.೮ ಹಾಗೂ ೯ರಂದು ಸಭೆಗೆ ಸದಸ್ಯರಿಗೆ ಆಹ್ವಾನವಿಲ್ಲ. ಅಧ್ಯಕ್ಷರಿಗೆ ಬರೆದ ಮಾಹಿತಿ ಪ್ರತಿಯನ್ನು ಸದಸ್ಯರಿಗೆ ತಲುಪಿಸಲಾಗಿದೆ. ನಮಗೇನು ಬೆಲೆ ಇಲ್ಲವೆ? ಇದು ಒಂದು ಬಾರಿ ಮಾತ್ರವಲ್ಲ, ಮೇಲಿಂದ ಮೇಲೆ ಹೀಗೆ ಆಗುತ್ತಿದೆ ಎಂದು ಸದಸ್ಯ ಮನೋಹರ ರಕ್ಕಸಗಿ ಏರು ಧ್ವನಿಯಲ್ಲಿ ಮುಖ್ಯಾಕಾರಿಯೊಂದಿಗೆ ಮಾತಿಗಿಳಿದರು.

ಸದಸ್ಯರಿಗೆ ಅಗೌರವ ಸಲ್ಲದು
ಇದಕ್ಕೆ ದನಿಗೂಡಿಸಿದ ಸದಸ್ಯರಾದ ಗುರುನಾಥ ಚಳ್ಳಮರದ, ಸುಜಾತ ತತ್ರಾಣಿ, ಸೋನಾಬಾಯಿ ಲಮಾಣಿ, ಶಾಂತವ್ವ ಯಂಕAಚಿ ಜನರ ಒಳಿತಿಗಾಗಿ ಕೈಗೊಳ್ಳುವ ನಿರ್ಧಾರಗಳಿಗೆ ಸದಸ್ಯರನ್ನೇ ಕಡೆಗಣಿಸಿದರೆ ಹೇಗೆ? ಉದ್ದೇಶಪೂರ್ವಕವಾಗಿ ಮಾಡುವಂತೆ ತೋರುತ್ತಿದೆ. ಅಧ್ಯಕ್ಷರೊಬ್ಬರನ್ನೇ ಕರೆದುಕೊಂಡ ಸಭೆ ಮಾಡಿ. ಇಂದಿನ ಸಭೆಗೆ ಸಭಾಪತಿಗೆ ಗೌರವ ಕೊಟ್ಟು ಬಂದಿದ್ದೇವೆ. ಅಧಿಕಾರಿಗೆ ಜವಾಬ್ದಾರಿ ಇಲ್ಲವೆಂದರೆ ಹೇಗೆ? ಕೇಳಿದರೆ ತಮ್ಮದೆ ವಾದಕ್ಕೆ ಅಂಟಿಕೊಳ್ಳುತ್ತೀರಿ, ನಿಮ್ಮ ಕಾರ್ಯ ವೈಖರಿ ಸರಿಯಲ್ಲ ಎಂದು ಹರಿಹಾಯ್ದರು.

ಅಂದಾಜು ಲೆಕ್ಕ ಬೇಡ
ಆರೋಗ್ಯ ಶಾಖೆಗೆ ಸಂಬಂಧಿಸಿದಂತೆ ಯಾವ ಮಾಹಿತಿಯೂ ಸರಿಯಾಗಿ ದೊರೆಯುತ್ತಿಲ್ಲ. ಯಾವುದಕ್ಕೂ ಅಂದಾಜು ಲೆಕ್ಕವೇ ದೊರೆಯುತ್ತದೆ. ಸಭೆಯಲ್ಲಿ ಚರ್ಚಿತ ಬಹುತೇಕ ವಿಷಯಗಳು ಆರೋಗ್ಯ ಶಾಖೆಗೆ ಸಂಬAಧಿಸಿದ್ದು ಯಾವುದಕ್ಕೂ ನಿಖರ ಉತ್ತರವಿಲ್ಲ. ಸಭಾಪತಿಗಳು ಎಲ್ಲವನ್ನೂ ಪರಿಶೀಲಿಸಿಯೇ ಮುಂದುವರೆಯಬೇಕೆಂದು ಸದಸ್ಯರು ಒತ್ತಾಯಿಸಿದರು.

ದಾಖಲೆ ನಿರ್ವಹಣೆ ಸರಿಯಿಲ್ಲ
ಪಪಂನಲ್ಲಿ ದಾಖಲೆಗಳು ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ. ಎಲ್ಲೆಂದರಲ್ಲಿ ಬಿಸಾಕಿದಂತೆ ಕಾಣುತ್ತಿದೆ. ಬಯೋಮೆಟ್ರಿಕ್ ವ್ಯವಸ್ಥೆಯಿದ್ದರೂ ಸಿಬ್ಬಂದಿ ಕಚೇರಿಯಲ್ಲಿ ಕಾಣಿಸುತ್ತಿಲ್ಲ. ಹೊರಗಡೆ ತಿರುಗಾಡುತ್ತಿರುತ್ತಾರೆ. ಖಾತಾ ಬದಲಾವಣೆ, ಉತಾರೆ ಸೇರಿದಂತೆ ಇನ್ನಿತರ ದಾಖಲೆಗೆ ಜನರಿಂದ ಹೆಚ್ಚಿನ ಹಣ ಪಡೆಯುತ್ತಾರೆ ಎಂಬ ಆರೋಪವಿದೆ. ಮುಖ್ಯಾಧಿಕಾರಿ ಇಂತಹ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು.

ಅಧ್ಯಕ್ಷರೇ ಎಲ್ಲರ ಪ್ರತಿನಿಧಿ
ಮುಖ್ಯಾಕಾರಿ ಗುರುರಾಜ ಚೌಕಿಮಠ, ಬಯೋಮೆಟ್ರಿಕ್ ದಾಖಲೆಯಂತೆಯೇ ಸಿಬ್ಬಂದಿ ವೇತನ ಪಾವತಿಸಲಾಗುವುದು. ಅಧ್ಯಕ್ಷರು ಎಲ್ಲರ ಪ್ರತಿನಿಧಿ ಆಗಿದ್ದರಿಂದ ಸಭೆ ಸೂಚನೆಯಲ್ಲಿ ಅವರಿಗೆ ಮಾಹಿತಿಯಿದೆ. ಅದನ್ನೇ ಸದಸ್ಯರಿಗೆ ತಲುಪಿಸಲಾಗಿದೆ. ಮುಂದಿನ ಬಾರಿ ಸದಸ್ಯರ ಗಮನಕ್ಕೂ ತರಲಾಗುವುದು. ಮಾಸ್ಕ್ ಧರಿಸದವರಿಗೆ ದಂಡದೊಂದಿಗೆ ಮಾಸ್ಕ್ ವಿತರಿಸುವ ಬಗ್ಗೆಯೂ ಚಿಂತಿಸಲಾಗುವುದು ಎಂದರು.

ಸಾರ್ವಜನಿಕರಿಗೆ ತೊಂದರೆ ನೀಡಬೇಡಿ
ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯಕುಮಾರ ಕನ್ನೂರ ಮಾತನಾಡಿ, ನಾನಾ ಪ್ರಮಾಣ ಪತ್ರಗಳಿಗೆ ದರ ನಿಗದಿಯಲ್ಲಿ ಸಾರ್ವಜನಿಕರಿಗೆ ಹೊರೆಯಾಗದಂತೆ ನಿರ್ಧಾರ ಮಾಡಿ. ಕಚೇರಿಯಲ್ಲಿ ದಾಖಲೆ ನಿರ್ವಹಣೆ ಸರಿಯಾಗಿರಲಿ. ಪಪಂನ ವಾಹನಗಳ ಬಗ್ಗೆ ಚಾಲಕರಿಗೆ ಕಾಳಜಿ ಅಗತ್ಯ, ಮೇಲಿಂದ ಮೇಲೆ ರಿಪೇರಿ ಆಗುತ್ತಿದ್ದು ಎಚ್ಚರ ವಹಿಸಬೇಕು ಎಂದರು.

ಕಸದ ತೆರಿಗೆಯೇ ಭಾರ
ಪಟ್ಟಣದಲ್ಲಿ ಪ್ರತಿಯೊಂದು ಮನೆಗೆ ಒಂದು ವರ್ಷಕ್ಕೆ ೩೬೦ರೂ ತೆರಿಗೆ ಸಂಗ್ರಹಿಸಲಾಗುತ್ತದೆ. ಆದರೆ ಇಂದಿಗೂ ಕೆಲ ಪ್ರದೇಶಗಳಲ್ಲಿ ಕಸ ಸಂಗ್ರಹಣೆ ಸರಿಯಾಗಿ ಆಗುತ್ತಿಲ್ಲ. ಹೀಗಿರುವಾಗ ಅಂತಹ ಪ್ರದೇಶದ ಜನ ಪಪಂಗೆ ಕಸದ ತೆರಿಗೆ ಏಕೆ ನೀಡಬೇಕು ಎಂದು ಪ್ರಶ್ನಿಸುತ್ತಿದ್ದಾರೆ ಎಂದು ಪಪಂ ಸದಸ್ಯ ಸಂಗಪ್ಪ ಗೌಡರ ಆಕ್ಷೇಪವೆತ್ತಿದರು.

ಕಸ ಸಂಗ್ರಹಕ್ಕೆ ದಿನಕ್ಕೆ ಒಂದು ರೂಪಾಯಿ ನೀಡುತ್ತಾರೆ. ಕಸ ಸಂಗ್ರಹಣೆ ವಾಹನ ಬಾರದಿದ್ದರೂ ಪೌರ ಕಾರ್ಮಿಕರು ಅಲ್ಲಿ ಕಸ ಸಂಗ್ರಹಿಸಬೇಕು. ಆದರೆ ಅವರೆಲ್ಲ ದೊಡ್ಡ ರಸ್ತೆಗೆ ಸೀಮಿತವಾದಂತೆ ತೋರುತ್ತಿದೆ. ಮನೆ ತೆರಿಗೆಗಿಂತ ಕಸದ ತೆರಿಗೆಯೇ ಭಾರವಾಗಿದೆ. ಕೆಲ ರಸ್ತೆಗಳ ಮಧ್ಯೆ ವಿದ್ಯುತ್ ಕಂಬಗಳಿದ್ದು ಅಂತಹ ಜಾಗದಲ್ಲಿ ವಾಹನ ಚಲಿಸಲು ಆಗುತ್ತಿಲ್ಲವೆಂದರೂ ಕಂಬಗಳ ಸ್ಥಳಾಂತರ ಮಾಡಬೇಕಾದ ಅಧಿಕಾರಿಗಳು ಸುಮ್ಮನೆ ಕಚೇರಿಯಲ್ಲಿ ಕುಳಿತರೆ ಹೇಗೆ, ಜನರ ಸಮಸ್ಯೆ ಅರಿಯಲು ಸ್ಥಳಕ್ಕೆ ಭೇಟಿ ನೀಡಿ ಜನಸ್ನೇಹಿ ಆಡಳಿತ ನೀಡುವಂತಾಗಬೇಕು ಎಂದರು.

ಪಪಂನಿಂದ ನೀಡುವ ಪ್ರಮಾಣಪತ್ರಗಳ ದರ ಪರಿಷ್ಕರಣೆ, ಸ್ವಚ್ಛ ಸರ್ವೇಕ್ಷಣೆಗಾಗಿ ಮುದ್ರಿಸಿದ ಪ್ರಚಾರ ಸಾಮಗ್ರಿಗಳ ಹಣ ಪಾವತಿ, ವಾಹನಗಳಿಗೆ ಇಂಧನ ಖರೀದಿ, ಜಾಥಾ ಕಾರ್ಯಕ್ಕೆ ವೆಚ್ಚ ಪಾವತಿ, ಸದಸ್ಯರ ಕುಂದು ಕೊರತೆ ಸೇರಿದಂತೆ ಇತರೆ ವಿಷಯಗಳ ಕುರಿತು ಚರ್ಚೆ ನಡೆಯಿತು.

ಸದಸ್ಯರಾದ ಹುಸೇನ್ ಪಟೇಲ, ಸಂಗಮೇಶ ಗೌಡರ, ಸಮುದಾಯ ಸಂಘಟನಾ ಅಕಾರಿ ಯು.ಜಿ.ವರದಪ್ಪನವರ, ಜಿ.ಭೂತಪ್ಪ, ಜೆಎಚ್‌ಐ ಸಂತೋಷ ವ್ಯಾಪಾರಿಮಠ ಇದ್ದರು.

";