ನಿಮ್ಮ ಸುದ್ದಿ ಬಾಗಲಕೋಟೆ
ಸಚಿವ ನಿರಾಣಿ ಒಡೆತನಕ್ಕೆ ಸೇರಿದ ಡಿಸ್ಟಿಲರಿ ಘಟಕದಲ್ಲಿ ಸಂಬವಿಸದ ಸ್ಪೋಟದಲ್ಲಿ ಓರ್ವ ಕಾರ್ಮಿಕ ಮೃತಪಟ್ಟಿದ್ದು ನಾಲ್ವರು ಗಾಯಗೊಂಡಿದ್ದಾರೆ.
ಬಾಗಲಕೋಟೆ ಜಿಲ್ಲೆ ಮುಧೋಳ ನಗರದ ಬಳಿ ಇರುವ ಘಟಕದಲ್ಲಿ ಈ ಘಟನೆ ಸಂಭವಿಸಿದೆ.
ಗುರುನಾಥ ಹುಚ್ಚಣ್ಣವರ (೨೭) ಮೃತ ಕಾರ್ಮಿಕ. ಗಾಯಾಳುಗಳು ಮುಧೋಳ ಖಾಸಗಿ ಆಸ್ಪತ್ರೆ ದಾಖಲಾಗಿದ್ದು ಜೀವಕ್ಕೆ ಯಾವುದೇ ತೊಂದರೆಯಿಲ್ಲ..
ಮೃತ ಕಾರ್ಮಿಕ ಗುರುನಾಥ ಮುಧೋಳ ನಗರದ ಜುಂಜರಕೊಪ್ಪ ಗಲ್ಲಿ ನಿವಾಸಿಯಾಗಿದ್ದು ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ