This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Politics News

ಸರ್ಕಾರ ನೀಡಿದ ಅಕ್ಕಿಯನ್ನು ಮಂತ್ರಾಕ್ಷತೆಯಾಗಿ ಹಂಚುತ್ತಿದ್ದೀರಿ: ಕಮಲದ ವಿರುದ್ಧ ಡಿಕೆಶಿ ವಾಗ್ದಾಳಿ

ಸರ್ಕಾರ ನೀಡಿದ ಅಕ್ಕಿಯನ್ನು ಮಂತ್ರಾಕ್ಷತೆಯಾಗಿ ಹಂಚುತ್ತಿದ್ದೀರಿ: ಕಮಲದ ವಿರುದ್ಧ ಡಿಕೆಶಿ ವಾಗ್ದಾಳಿ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಸರ್ಕಾರ ನೀಡಿದ ಅಕ್ಕಿಯನ್ನು ಮಂತ್ರಾಕ್ಷತೆಯಾಗಿ ಹಂಚುತ್ತಿದ್ದೀರಿ ಎಂದು ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ನ್ಯಾಯ ಯಾತ್ರೆ ವಿರುದ್ಧ ಬಿಜೆಪಿ ಸರ್ಕಾರ ಷಡ್ಯಂತ್ರ ರೂಪಿಸುತ್ತಿದೆ ಎಂದು ಆರೋಪಿಸಿ ನಗರದ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯ ಕಾಂಗ್ರೆಸ್ ಮುಖಂಡರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಒಂದು ಕಡೆಯಲ್ಲಿ ಅಕ್ಕಿ ಮತ್ತೊಂದು ಕಡೆಯಲ್ಲಿ ಅರಸಿನ ಇತ್ತು. ಅಕ್ಕಿ ಹಾಗೂ ಅರಸಿನ ಸೇರಿ ಮಂತ್ರಾಕ್ಷತೆ ಆಯಿತು. ಅದನ್ನು ಇವಾಗ ಮನೆ ಮನೆಗೆ ತಲುಪಿಸುತ್ತಿದ್ದೀರಿ, ಇದು ಕಾಂಗ್ರೆಸ್ ಪಕ್ಷದ ಮಂತ್ರಾಕ್ಷತೆ ಅಲ್ವಾ? ಅಲ್ಲಿಂದ ಬಂದಿತ್ತಾ? ಎಂದು ಪ್ರಶ್ನಿಸಿದರು.

ರಾಹುಲ್ ಗಾಂಧಿ ಪಾದಯಾತ್ರೆ ವಿರೋಧ ಪಕ್ಷದವರಿಗೆ ಭಯ. ನಾವು ರಾಜಕಾರಣಕ್ಕೆ ಧರ್ಮವನ್ನು‌ ದುರುಪಯೋಗ ಮಾಡ್ತಿಲ್ಲ‌.ನಮ್ಮ ಹೆಸರಿನಲ್ಲಿ ದೇವರುಗಳ ಹೆಸರು ಇದೆ. ಸಿದ್ದರಾಮಯ್ಯ ಹೆಸರಿನಲ್ಲಿ ರಾಮ ಇದ್ದಾನೆ, ಶಿವಕುಮಾರ್ ಹೆಸರಿನಲ್ಲಿ ಶಿವ ಇದ್ದಾನೆ. ಬಿ.ಕೆ‌ ಹರಿಪ್ರಸಾದ್ ಹೆಸರಿನಲ್ಲಿ ಹರಿ ಇದ್ದಾನೆ ಹಾಗೂ ಕೃಷ್ಣ ಬೈರೇಗೌಡ ಹೆಸರಿನಲ್ಲಿ ಕೃಷ್ಣ ಇದ್ದಾನೆ. ಇದನ್ನು ಬದಲಾವಣೆ ಮಾಡಲು ಆಗುತ್ತಾ?ನಮ್ಮ ಧರ್ಮ ನಮಗೆ ನಂಬಿಕೆ, ಯಾವುದೇ ಜಾತಿ ಧರ್ಮ ಇರಲಿ ತತ್ವ ಒಂದೇ, ದೇವನೊಬ್ಬ ನಾಮ ಹಲವು ಎಂದು ಹೇಳಿದರು.

ಭಾರತ್ ಜೋಡೋ ಎರಡನೇ ಹಂತದ ಯಾತ್ರೆ ದೇಶದ ನ್ಯಾಯಕ್ಕಾಗಿ. ದೇಶದ ಜನರ ಹೃದಯ ಒಗ್ಗೂಡಿಸಲು ಭಾರತ್ ಜೋಡೋ ನ್ಯಾಯ ಯಾತ್ರೆ ನಡೆಯುತ್ತಿದೆ.‌ ಇದೊಂದು ಮಾದರಿ ಹಾಗೂ ಇತಿಹಾಸವಾಗಿದ್ದು, ಆದರೆ ಅಸ್ಸಾಂನಲ್ಲಿ ಗುಹಾಟಿ ನಗರಕ್ಕೆ ಎಂಟ್ರಿ ಆಗಲು ಬಿಡುತ್ತಿಲ್ಲ. ದೇಶದಲ್ಲಿ ಸಂವಿಧಾನ ಪ್ರಜಾಪ್ರಭುತ್ವ ಬದುಕಿದ್ಯಾ? ಎಂದು ಕಿಡಿಕಾರಿದರು.

ಇದೇ ಸಂದರ್ಭದಲ್ಲಿ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಮ್ಮಿಶ್ರ ಸರ್ಕಾರ ಪತನಗೊಳಿಸಿದವರ ಜೊತೆಗೆ ಸಖ್ಯ ಮಾಡ್ತಿದ್ದಾರೆ ಎಂದು ಬಿಜೆಪಿ ಜೆಡಿಎಸ್ ಮೈತ್ರಿಗೆ ಡಿಕೆ ಶಿವಕುಮಾರ್ ಟೀಕೆ ಮಾಡಿದರು.