This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Politics News

ಬರದ ಛಾಯೆಯಿದ್ದರೂ ಸ್ಪಂದಿಸದ ಸರ್ಕಾರ: ಡಾ.ವೀರಣ್ಣ ಚರಂತಿಮಠ ಆಕ್ರೋಶ

ಬರದ ಛಾಯೆಯಿದ್ದರೂ ಸ್ಪಂದಿಸದ ಸರ್ಕಾರ: ಡಾ.ವೀರಣ್ಣ ಚರಂತಿಮಠ ಆಕ್ರೋಶ

ಅಬಕಾರಿ ಹಣ ಕ್ರೂಢೀಕರಣದಲ್ಲಿ ನಿರತವಾಗಿರುವ ಸರ್ಕಾರ, ಸಚಿವರಿಗೆ ಜನರ ಸಮಸ್ಯೆ ಅರ್ಥವಾಗದು..!

ನಿಮ್ಮ ಸುದ್ದಿ ಬಾಗಲಕೋಟೆ

ಮುಂಗಾರು ವಿಳಂಬದಿಂದಾಗಿ ಕೃಷಿ ಚಟುವಟಿಕೆಗಳಿಗೆ ಹಿನ್ನಡೆ ಆಗುವುದರ ಜತೆಗೆ ಕುಡಿಯುವ ನೀರಿಗೂ ಜನ ಕಷ್ಟ ಪಡುವ ಸ್ಥಿತಿಯಲ್ಲಿದ್ದರೆ ಸರ್ಕಾರ ಜನರಿಗೆ ಸ್ಪಂದಿಸುವುದನ್ನು ಬಿಟ್ಟು ಇಲ್ಲಸಲ್ಲದ ವಿವಾದಗಳನ್ನು ಹುಟ್ಟುಹಾಕುತ್ತಿದೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಈ ಕುರಿತು ಶನಿವಾರ ಮಾಧ್ಯಮ ಪ್ರಕಟಣೆ ನೀಡಿರುವ ಅವರು ಬಾಗಲಕೋಟೆ ಜಿಲ್ಲೆಯೊಂದರಲ್ಲೇ ೧೧೪ ಹಳ್ಳಿಗಳು ಸಮಸ್ಯೆಗೆ ಸಿಲುಕಿದ್ದು, ಘಟಪ್ರಭಾ, ಮಲಪ್ರಭಾ ನಂದಿ ಅಂಚಿನಲ್ಲಿರುವ ಹಳ್ಳಿಗಳಿಗೆ ಜೂ.೨೦ರವರೆಗೆ ಮಾತ್ರವೇ ಕುಡಿಯುವ ನೀರು ಲಭ್ಯವಾಗಲಿದೆ. ಕೃಷ್ಣಾ ತಟದ ಊರುಗಳಿಗೆ ಜೂ.೩೦ರವರೆಗೆ ಮಾತ್ರವೇ ನೀರು ಸಿಗಲಿದೆ ಎಂದು ಜಿಲ್ಲಾಡಳಿತ ಅಂಕಿ ಅಂಶಗಳೇ ಹೇಳುತ್ತಿದ್ದು, ಹೀಗಿರುವಾಗ ಜನರ ಸಂಕಷ್ಟಕ್ಕೆ ಧ್ವನಿಯಾಗಬೇಕಿರುವ ರಾಜ್ಯ ಸರ್ಕಾರ ಇಲ್ಲ ಸಲ್ಲದ ವಿವಾದಗಳನ್ನು ಹುಟ್ಟುಹಾಕವಲ್ಲಿ ನಿರತರಾಗಿದ್ದಾರೆ.

ಅಧಿಕಾರಕ್ಕೆ ಬಂದ ಹೊಸತರಲ್ಲೇ ಜನರಿಗೆ ಭ್ರಮನಿರಸನ ಮಾಡಿದೆ ಎಂದು ಅತೃಪ್ತಿ ಹೊರಗೆ ಹಾಕಿದ್ದಾರೆ. ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ, ದೇಶಪ್ರೇಮಿಗಳ ಪಠ್ಯ ಕೈ ಬಿಟ್ಟು ವಿವಾದಗಳನ್ನು ಹುಟ್ಟು ಹಾಕಿ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಕೆಲಸದಲ್ಲಿ ರಾಜ್ಯ ಸರ್ಕಾರ ನಿರತವಾಗಿದೆ.

ಜನ ಸಂಕಷ್ಟಕ್ಕೆ ಸಿಲುಕಿದಾಗ ಉಳಿದೆಲ್ಲವನ್ನು ಬಿಟ್ಟು ಅವರ ನೆರವಿಗೆ ಧಾವಿಸುವ ಕೆಲಸವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾಡಬೇಕು. ಅದು ಗೊತ್ತಿಲ್ಲದಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಿ ಜನರಿಗೆ ಹೇಗೆ ಸ್ಪಂದಿಸಬೇಕೆಂಬುದನ್ನು ಕಲಿತುಕೊಳ್ಳಬೇಕೆಂದು ಸಲಹೆ ಮಾಡಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಬಕಾರಿ ಖಾತೆಯನ್ನೂ ನೀಡಿರುವುದರಿಂದ ಸರ್ಕಾರ ನೀಡಿದ ಟಾಸ್ಕ್ನಂತೆ ಅವರು ರಾಜಸ್ವ ಹೆಚ್ಚಿಸುವುದೊಂದೆ ತಮ್ಮ ಗುರಿ ಎಂಬಂತೆ ಕೆಲಸ ಮಾಡುತ್ತಿದ್ದಾರೆ. ಉಸ್ತುವಾರಿ ಸಚಿವರಾದ ಮೇಲೆ ಮಾಡಿದ ಮೊದಲ ಸಭೆಯಲ್ಲಿ ಕುಡಿಯುವ ನೀರು, ಬರ ಎದುರಿಸುತ್ತಿರುವ ಪ್ರದೇಶಗಳಿಗೆ ಏನು ಮಾಡಬೇಕೆಂಬುದಕ್ಕೆ ಒತ್ತು ಕೊಡದೆ ಕೇವಲ ಕಾಟಾಚಾರಕ್ಕೆ ಸಭೆ ಮಾಡಿದ್ದಾರೆ. ಹಳ್ಳಿಗಳಲ್ಲಿ ಬರದ ಆತಂಕವಿದ್ದು, ಜನ ಗುಳೆ ಹೋಗುತ್ತಿದ್ದಾರೆ. ಯಾರಿಗೂ ಶಾಸಕರುಗಳು ಸಹ ಲಭ್ಯವಾಗುತ್ತಿಲ್ಲ.

ಈ ಸಮಯದಲ್ಲಿ ಸರ್ಕಾರ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಗ್ಯಾರಂಟಿ ಯೋಜನೆ ಹೆಸರಲ್ಲಿ ಇಲ್ಲದ ಷರತ್ತುಗಳನ್ನು ವಿಧಿಸಿ ತನ್ನಿಂದ ಆಗದಿದ್ದಾಗ ಕೇಂದ್ರ ಸರ್ಕಾರದ ಮೇಲೆ ಬೊಟ್ಟು ಮಾಡುತ್ತ ಕೂರುವ ಕೆಲಸ ಮಾಡುತ್ತಿದೆ. ನಾಯಕರಾದವರು ಮೊದಲು ಕಷ್ಟದ ಸಮಯದಲ್ಲಿ ಸ್ಪಂದಿಸುವ ಗುಣವನ್ನು ರೂಢಿಸಿಕೊಳ್ಳಬೇಕು. ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕದ ಪ್ರದೇಶಗಳಲ್ಲಿ ಮಳೆ ವಿಳಂಬದಿಂದಾಗಿ ಚಿಂತಾಜನಕ ಸ್ಥಿತಿ ನಿರ್ಮಾಣವಾಗಿದೆ. ನಮ್ಮದೆ ಸರ್ಕಾರವಾಗಿದ್ದರೆ ಮೊದಲು ಆಡಳಿತವನ್ನು ಹಳ್ಳಿ ಕಡೆಗೆ ತರುವ ಕೆಲಸ ಮಾಡುತ್ತಿದ್ದೇವು. ಲಿಕ್ಕರ್ ಬೆಲೆ ದಿಢೀರ್ ಹೆಚ್ಚಳವಾಗಿ ಮಾಧ್ಯಮಗಳ ಮೂಲಕ ಸುದ್ದಿಯಾದರೂ ಅದು ತಮ್ಮ ಗಮನಕ್ಕೆ ಬಂದಿಲ್ಲ ಎಂದು ಸಚಿವರು ಹೇಳುತ್ತಿದ್ದಾರೆ.ಇವರುಗಳು ಹೇಳುವುದೊಂದು ಮಾಡುವುದು ಮತ್ತೊಂದು ಎಂಬಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಳ್ಳಿಗಳಿಗೆ ಟ್ಯಾಂಕರ್ ನೀರು ಒದಗಿಸಬೇಕಾದರೆ ಬರ ಘೋಷಿಸಬೇಕಾಗುತ್ತದೆ ಅದರ ಹೊರತಾಗಿ ಹಣ ಬಳಸುವಂತ್ತಿಲ್ಲ ಎಂದು ಜಿಲ್ಲಾಧಿಕಾರಿಗಳೇ ಹೇಳಿದ್ದಾರೆ. ಬೋರ್‌ವೆಲ್‌ಗಳ ಬೇಡಿಕೆಯಿದ್ದು ಅದಕ್ಕಾಗಿ ೨.೭೬ ಕೋಟಿ ರೂ.ಗಳಷ್ಟು ಅನುದಾನವನ್ನು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಕೇಳಿದರೆ ಸರ್ಕಾರಕ್ಕೆ ಪತ್ರ ಬರೆಯಿರಿ ನೋಡೋಣ ಎಂದು ಸಚಿವರು ಹೊಣೆಗಾರಿಕೆಯಿಂದ ನುಣುಚಿಕೊಂಡಿದ್ದಾರೆ. ಈ ರೀತಿ ಆಡಳಿತ ನಡೆದರೆ ಜನರ ಗತಿ ಏನು. ಸರ್ಕಾರದಿಂದ ಕೂಡಲೇ ಅನುದಾನ ಪಡೆದು ಜನರಿಗೆ ನೆರವಾಗುವ ಕೆಲಸವನ್ನು ಮಾಡದಿದ್ದರೆ ಬಿಜೆಪಿ ಜನಾಂದೋಲನವನ್ನು ಸೃಷ್ಟಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

";