ಬಾಗಲಕೋಟೆ
ರಾಜ್ಯ ಪೌರ ಸೇವಾ ನೌಕರರ ಸಂಘದ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ನಗರಸಭೆ ಕಚೇರಿ ವ್ಯವಸ್ಥಾಪಕ ಸಿ.ಎಸ್.ಬೀಳಗಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ನ.22 ಭಾನುವಾರದಂದು ಸಂಘದ ರಾಜ್ಯ ಸಂಘಟನಾಧಿಕಾರಿ ಮಹೇಂದ್ರ ತಿಮ್ಮಾಣಿ ಹಾಗೂ ಬೆಳಗಾವಿ ವಿಭಾಗದ ಸಂಘಟನಾ ಕಾರ್ಯದರ್ಶಿ ಮೀನಾಕ್ಷಿ ಶಿರಗುಪ್ಪಿ ನೇತೃತ್ವದಲ್ಲಿ ಈ ಆಯ್ಕೆ ನಡೆಯಿತು.
ಗುಳೇದಗುಡ್ಡ ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಶಿವಾನಂದ ಆಲೂರ (ಉಪಾಧ್ಯಕ್ಷ), ಅಮೀನಗಡ ಪಟ್ಟಣ ಪಂಚಾಯಿತಿಯ ಪೌರ ಕಾರ್ಮಿಕ ಕನಕಪ್ಪ ಮರ್ಜಿ (ಕಾರ್ಯದರ್ಶಿ), ಇಳಕಲ್ ನಗರಸಭೆಯ ಪ್ರಥಮ ದರ್ಜೆ ಸಹಾಯಕ ಎಂ.ವೈ.ಹುಣಸಿಗಿಡದ (ಸಂಘಟನಾಧಿಕಾರಿ), ಮುಧೋಳ ನಗರಸಭೆಯ ಅಟೆಂಡರ್ ಮಂಗಳೇಶ ಪೂಜಾರಿ (ಜಂಟಿ ಕಾರ್ಯದರ್ಶಿ) ಹುನಗುಂದ ಪುರಸಭೆಯ ಕಚೇರಿ ವ್ಯವಸ್ಥಾಪಕ ಎಂ.ಎಸ್.ಕಳ್ಳಿಗುಡ್ಡ (ಖಜಾಂಚಿ) ಆಗಿ ಆಯ್ಕೆ ಆಗಿದ್ದಾರೆ.