This is the title of the web page
This is the title of the web page

Live Stream

June 2024
S M T W T F S
 1
2345678
9101112131415
16171819202122
23242526272829
30  

| Latest Version 9.4.1 |

Agriculture News

ಬೆಲೆ ಕುಸಿತಕ್ಕೆ ಕಂಗಾಲಾದ ರೈತ; ಒಣ ದ್ರಾಕ್ಷಿಗೆ ಬೆಂಬಲ ದರ ಘೋಷಿಸಲು ಒತ್ತಾಯ

ರಬಕವಿ-ಬನಹಟ್ಟಿ: ಒಣದ್ರಾಕ್ಷಿ ತಯಾರಾಗುವ ಸಂದರ್ಭದಲ್ಲೇ ಅದರ ದರ ಕುಸಿದು ರೈತರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದು, ಭಾರಿ ಇಳುವರಿ ಬಂದರೂ ಸಮರ್ಪಕ ಬೆಲೆ ಸಿಗದೇ ದ್ರಾಕ್ಷಿ ಬೆಳೆಗಾರ ಕಂಗಾಲಾಗಿದ್ದಾನೆ ಎಂದು ಮಾಹಿತಿ ತಿಳಿದು ಬಂದಿದೆ.

ಕಳೆದ ವರ್ಷ ಮಾರಾಟವಾದ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಒಣ ದ್ರಾಕ್ಷಿ ಮಾರಾಟವಾಗುತ್ತಿದ್ದು, ಬೆಳೆಗಾರರಿಗೆ ದಿಕ್ಕು ತೋಚದಂತಾಗಿದೆ.ರಾಜ್ಯದಲ್ಲಿ ವಿಜಯಪುರ, ಬೆಳಗಾವಿ ಜೊತೆಗೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಅತಿ ಹೆಚ್ಚು ದ್ರಾಕ್ಷಿ ಬೆಳೆಯಲಾಗುತ್ತದೆ. ಆದರೆ, ಇದೇ ಮೊದಲ ಬಾರಿಗೆ ಕಲ್ಪನೆಗೂ ಮೀರಿ ಕಡಿಮೆ ದರದಲ್ಲಿಒಣದ್ರಾಕ್ಷಿ ಮಾರಾಟವಾಗುತ್ತಿದೆ.

ಈ ಬಾರಿ 30ರಿಂದ 110 ರೂ.ವರೆಗೆ ಪ್ರತಿ ಕೆ.ಜಿಗೆ ಮಾರಾಟವಾಗುತ್ತಿದ್ದು, ಖರ್ಚು ಕೂಡ ಸರಿದೂಗದಂತಾಗಿದೆ.ಒಣದ್ರಾಕ್ಷಿ ದರದಲ್ಲಿ ಭಾರಿ ಕುಸಿತದಿಂದ ಬೆಳೆಗಾರರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಮಧ್ಯವರ್ತಿಗಳ ಹಾವಳಿಗೆ ತತ್ತರಿಸಿ ಹೋಗಿದ್ದಾರೆ. ಪ್ರತಿ ವರ್ಷ 170ರಿಂದ 220 ರೂ.ಗಳವರೆಗೆ ಒಣ ದ್ರಾಕ್ಷಿ ಮಾರಾಟವಾಗುತ್ತಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿಕೇವಲ 30ರಿಂದ 100 ರೂ. ಪ್ರತಿ ಕೆಜಿಗೆ ಒಣ ದ್ರಾಕ್ಷಿ ಮಾರಾಟವಾಗುತ್ತಿದೆ.

ಒಣದ್ರಾಕ್ಷಿ ದರ ಪಾತಾಳಕ್ಕೆ ಹೋಗಿದ್ದರಿಂದ ಅನಿವಾರ್ಯವಾಗಿ ಕೋಲ್ಡ್‌ ಸ್ಟೋರೇಜ್‌ನಲ್ಲಿ ಇಡುವಂತಾಗಿದ್ದು, ಅದರ ಬಾಡಿಗೆ ಪಾವತಿಸಬೇಕಿದೆ. ವರ್ಷವಿಡಿ ಕಷ್ಟಪಟ್ಟು ದುಡಿದು ಬೆಳೆದ ದ್ರಾಕ್ಷಿ ಬೆಳೆಗೆ ಸಮರ್ಪಕ ದರ ಸಿಗದೆ ಅದನ್ನು ರಕ್ಷಿಸಲು ಕೋಲ್ಡ್‌ ಸ್ಟೋರೇಜ್‌ಗಳಿಗೆ ಮೊರೆ ಹೋಗುವುದರಿಂದ ಬಂದ ಅಲ್ಪಸ್ವಲ್ಪ ಲಾಭ ಕೂಡ ಬೇರೆಯೊಬ್ಬರ ಪಾಲಾಗುವಂತಾಗಿದೆ.

ಈ ಬಾರಿಯೂ ದ್ರಾಕ್ಷಿ ಬೆಳೆದ ರೈತ ಕೈ ಸುಟ್ಟುಕೊಳ್ಳುವಂತಾಗಿದೆ.ಒಂದು ಎಕರೆ ದ್ರಾಕ್ಷಿ ಬೆಳೆಯಲು ಕನಿಷ್ಠ 2.5ರಿಂದ 3 ಲಕ್ಷ ರೂ. ಖರ್ಚಾಗುತ್ತದೆ. ಗಿಡ ನಾಟಿ, ಕೀಟನಾಶಕ, ತಂತಿ ಜಾಳಿಗೆ ಶೆಡ್‌ ನಿರ್ಮಾಣ ಸೇರಿದಂತೆ ದ್ರಾಕ್ಷಿ ಬೆಳೆಯನ್ನು ಸಂರಕ್ಷಿಸಲು ರೈತರು ಪ್ರತಿವರ್ಷ ಲಕ್ಷಗಟ್ಟಲೇ ಖರ್ಚು ಮಾಡುತ್ತಾರೆ. ಆದರೆ, ಮಾಡಿದ ಖರ್ಚು ಕೂಡ ಸರಿದೂಗದೇ ನಷ್ಟ ಅನುಭವಿಸುವಂತಾಗಿದೆ.