This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Feature ArticleMostbet

ರಾತ್ರಿಯಲ್ಲಿ ನಾಯಿಗಳು ಏಕೆ ಕೂಗುತ್ತವೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ

ರಾತ್ರಿಯಲ್ಲಿ ನಾಯಿಗಳು ಏಕೆ ಕೂಗುತ್ತವೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ

ನಮ್ಮಲ್ಲಿ ಕೆಲವರು ಜ್ಯೋತಿಷ್ಯವನ್ನು ಚೆನ್ನಾಗಿ ನಂಬುತ್ತಾರೆ. ಅವರು ತಮ್ಮ ಭವಿಷ್ಯವನ್ನು ಜಾತಕದ ಪ್ರಕಾರ ಯೋಜಿಸುತ್ತಾರೆ. ಮೇಲಾಗಿ ನಮ್ಮ ಸುತ್ತಮುತ್ತ ನಡೆಯುವ ಕೆಲವು ಘಟನೆಗಳನ್ನು ಅವರು ಅಶುಭವೆಂದು ಪರಿಗಣಿಸುತ್ತಾರೆ. ಅವರು ಅಂತಹ ವಿಷಯಗಳಿಂದ ಸಾಧ್ಯವಾದಷ್ಟು ದೂರವಿರುತ್ತಾರೆ.

ಅದೇ ರೀತಿ ರಾತ್ರಿಯಲ್ಲಿ ನಾಯಿಗಳು ಕೂಗುವ ಶಬ್ದವು ಒಂದಾಗಿದೆ. ನಮ್ಮಲ್ಲಿ ಹೆಚ್ಚಿನವರು ರಾತ್ರಿಯಲ್ಲಿ ನಾಯಿಗಳು ಬೊಗಳುವ ಮತ್ತು ಜೋರಾಗಿ ಅಳುವುದಕ್ಕೆ ಕೇಳಿದರೆ ಹೆದರುತ್ತಾರೆ. ನಾಯಿಗಳು ಬೊಗಳುವುದು ಕೆಟ್ಟ ಶಕುನ ಎಂದು ಭೋಪಾಲ್ ಮೂಲದ ಖ್ಯಾತ ಜ್ಯೋತಿಷಿ ಹಿತೇಂದ್ರ ಕುಮಾರ್ ಶರ್ಮಾ ಹೇಳಿದ್ದಾರೆ.

ರಾತ್ರಿಯಲ್ಲಿ ನಾಯಿ ಅಳುವುದು ಅನೇಕ ಕೆಟ್ಟ ಘಟನೆಗಳ ಸಂಕೇತವಾಗಿದೆ. ಹಾಗೆಯೇ ಮನೆಯ ಹೊರಗೆ ನಾಯಿ ಕೂಗಿದರೆ ಅಶುಭ ಎನ್ನಲಾಗುತ್ತದೆ. ಅಂದರೆ ಯೋಚಿಸಲಾಗದ ಏನಾದರೂ ಸಂಭವಿಸಲಿದೆ ಎಂದರ್ಥ. ಅದಕ್ಕೇ ನಾಯಿ ಬೊಗಳಿದರೂ ಅಥವಾ ಕೂಗಿದರೆ ನಾಯಿಯನ್ನು ಓಡಿಸಲಾಗುತ್ತದೆ.

ಜ್ಯೋತಿಷಿಗಳು ಹೇಳುವ ಪ್ರಕಾರ ನಾಯಿಯು ರಾತ್ರಿಯಲ್ಲಿ ಬೊಗಳಿದಾಗಲೆಲ್ಲಾ ಅದರ ಸುತ್ತಲೂ ಕೆಲವು ರೀತಿಯ ನಕಾರಾತ್ಮಕ ಶಕ್ತಿ ಇರುತ್ತದೆ. ಆ ನೆಗೆಟಿವ್ ಎನರ್ಜಿ ನೋಡಿದ ನಾಯಿಗಳು ಜೋರಾಗಿ ಬೊಗಳುತ್ತವೆ. ನಾಯಿಗಳು ಕತ್ತಲೆಯಲ್ಲಿ ದುಷ್ಟಶಕ್ತಿಗಳನ್ನು ನೋಡಬಹುದು ಎಂದು ಕೆಲವರು ನಂಬುತ್ತಾರೆ.

ರಾತ್ರಿಯಲ್ಲಿ ನಾಯಿ ಜೋರಾಗಿ ಬೊಗಳಿದರೆ ಅನೇಕರು ಕೆಟ್ಟ ಶಕುನ ಎಂದು ಪರಿಗಣಿಸುತ್ತಾರೆ. ಆದರೆ ಕಷ್ಟದಲ್ಲಿದ್ದರೆ, ಬೇಸರವಾದರೂ ಸಹ ನಾಯಿಗಳು ಜೋರಾಗಿ ಬೊಗಳುತ್ತವೆ. ಜೊತೆಗೆ ಮನುಷ್ಯರನ್ನು ಆಕರ್ಷಿಸಲು ನಾಯಿಗಳು ಕೂಗುತ್ತವೆ ಎಂದು ಅನೇಕ ಅಧ್ಯಯನಗಳು ಹೇಳಿವೆ. ತಮ್ಮ ಹಿಂಡಿನಿಂದ ಬೇರ್ಪಟ್ಟಾಗ ಒಂಟಿತನ ಅನುಭವಿಸಿ ಅಳುತ್ತದೆಯಂತೆ.

ನಾಯಿಗಳು ವಯಸ್ಸಾದಂತೆ, ಅವರು ಹೆಚ್ಚು ಭಯಪಡುತ್ತದೆಯಂತೆ. ರಾತ್ರಿ ಒಂಟಿತನ ಅನಿಸಿದಾಗ ಜೋರಾಗಿ ಅಳುತ್ತದೆಯಂತೆ. ಜೊತೆಗಿದ್ದವರೊಬ್ಬರು ಇಹಲೋಕ ತ್ಯಜಿಸಿದರೂ ದುಃಖದಿಂದ ಕಣ್ಣೀರು ಹಾಕುತ್ತದೆ ಎಂದು ಹೇಳಲಾಗುತ್ತದೆ. ರಾತ್ರಿಯಷ್ಟೇ ಅಲ್ಲ ಹಗಲು ಮನೆಯ ಬಳಿ ನಾಯಿ ಜೋರಾಗಿ ಬೊಗಳಿದರೆ ಅಥವಾ ವಿಚಿತ್ರವಾಗಿ ಕಿರುಚಿದರೆ ಅದು ಮುಂದಿನ ದಿನಗಳಲ್ಲಿ ಸಾವಿನ ಸೂಚನೆ ಎನ್ನುತ್ತಾರೆ ಕೆಲ ಜ್ಯೋತಿಷಿಗಳು.

ಜ್ಯೋತಿಷ್ಯದಲ್ಲಿ ನಂಬಿಕೆ ಇಲ್ಲದವರು ಇದೆಲ್ಲಾ ವದಂತಿ ಎಂದು ನಿರಾಕರಿಸುತ್ತಿದ್ದಾರೆ. ನಾಯಿ ಬೊಗಳುವುದಕ್ಕೂ ನಿಮ್ಮ ಮನೆಯಲ್ಲಿನ ಅಶುಭಕ್ಕೂ ಸಂಬಂಧವಿಲ್ಲ ಎನ್ನುತ್ತಾರೆ. ಆದರೆ ಇದು ಅವರವರ ವಿಚಾರಕ್ಕೆ ಹಾಗೂ ನಂಬಿಕೆಗೆ ಬಿಟ್ಟಿರುವುದಾಗಿರುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ.

 

Nimma Suddi
";