ನಿಮ್ಮ ಸುದ್ದಿ ಬಾಗಲಕೋಟೆ
ಸೂಳೇಬಾವಿಯಲ್ಲಿ ಪ್ರಧಾನ ಕಚೇರಿ ಹೊಂದಿದ ಗಾಯತ್ರಿ ಪತ್ತಿನ ಸಹಕಾರ ಸಂಘ ೨೦೧೯-೨೦ನೇ ಸಾಲಿನಲ್ಲಿ ೧ ಕೋಟಿ ೨ ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷರಾದ ರವೀಂದ್ರ ಕಲಬುರ್ಗಿ ತಿಳಿಸಿದರು.
ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಬಾವಿಯ ಗಾಯತ್ರಿ ಪತ್ತಿನ ಸಹಕಾರಿ ಸಂಘದ ಪ್ರದಾನ ಕಚೇರಿಯಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ೧೯೯೬ರಲ್ಲಿ ೬೮೬ ಸದಸ್ಯರು ೩ ಲಕ್ಷ ೪೩ ಸಾವಿರ ಶೇರ್ ಹಣದೊಂದಿಗೆ ೪೨,೨೯೦ ಠೇವಿನೊಂದಿಗೆ ಆರಂಭವಾಯಿತು. ಸದ್ಯ ೨೦೨೦ರ ಮಾರ್ಚ್ ತಿಂಗಳಾಂತ್ಯಕ್ಕೆ ೮,೫೬೬ ಸದಸ್ಯರೊಂದಿಗೆ ೩ ಕೋಟಿ ೩೦ ಲಕ್ಷ ಶೇರು ಹಣದೊಂದಿಗೆ ೫೪ ಕೋಟಿ ೮೩ ಲಕ್ಷ ಠೇವು ಹಣದೊಂದಿಗೆ ೧ ಕೋಟಿ ೨ ಲಕ್ಷ ೭೬ ಸಾವಿರ ಲಾಭ ಗಳಿಸಿದೆ ಎಂದರು.
ಸಂಘ ಕೇಂದ್ರ ಕಚೇರಿ ಸೇರಿದಂತೆ ಒಟ್ಟು ೧೫ ಶಾಖೆಗಳನ್ನು ಹೊಂದಿದೆ. ಎಲ್ಲ ಶಾಖೆಗಳು ಗಣಕೀಕೃತವಾಗಿದ್ದು ಸಂಘದ ಯಾವುದೇ ಶಾಖೆ ಮೂಲಕ ವ್ಯವಹಾರ ಮಾಡಬಹುದಾಗಿದೆ. ಮೊಬೈಲ್ ಆ್ಯಪ್ ಸೌಲಭ್ಯವನ್ನು ಸಂಘ ಹೊಂದಿದೆ. ಸದಸ್ಯರು ಹಾಗೂ ಸದಸ್ಯರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ನಗದು ಪುರಸ್ಕಾರ ಸಹ ನೀಡಲಾಗುತ್ತಿದೆ. ಅಂದಾಜು ೨ ಕೋಟಿ ವೆಚ್ಚದಲ್ಲಿ ಸಂಘದ ನೂತನ ಕಟ್ಟಡಕ್ಕೆ ಆಗಷ್ಟ ತಿಂಗಳಲ್ಲಿ ಅಡಿಪಾಯ ಹಾಕಲಾಗಿದ್ದು ಶೀಘ್ರದಲ್ಲೆ ಉದ್ಘಾಟನೆಗೊಳ್ಳಲಿದೆ ಎಂದರು.
ಸಂಘದ ನಿರ್ದೇಶಕ ರವೀಂದ್ರ ರಾಮದುರ್ಗ ಮಾತನಾಡಿ, ಸಂಘದ ಬೆಳವಣಿಗೆಗೆ ಅಧ್ಯಕ್ಷರ ಸ್ಪೂರ್ತಿಯೇ ಕಾರಣ. ಎಲ್ಲ ಚಟುವಟಿಕೆಗೂ ನಿರ್ದೇಶಕ ಹಾಗೂ ಬ್ಯಾಂಕ್ ಸಿಬ್ಬಂದಿಗೆ ಹೆಗಲು ಕೊಟ್ಟು ಬೆಂಗಾವಲಾಗಿ ನಿಂತು ಪ್ರೋತ್ಸಾಹ ನೀಡಿದ್ದಾರೆ. ಅವರ ಉತ್ಸಾಹಕ್ಕೆ ತಕ್ಕಂತೆ ಪ್ರಧಾನ ವ್ಯವಸ್ಥಾಪಕರಾದ ಹೇಮಂತ ಧುತ್ತರಗಿ ಅವರು ನಿರಂತರ ಶ್ರಮ ವಹಿಸಿದ್ದಾರೆ ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಸಂಗಪ್ಪ ಕರಡಿ, ಮಲ್ಲೇಶಪ್ಪ ಧೂಪದ, ಲುಮ್ಮಣ್ಣ ಕಣಗಿ, ಜಗನ್ನಾಥ ಗಾಡಿ, ಶಂಕ್ರಪ್ಪ ಜನಿವಾರದ, ದಾದೇಸಾಬ ಬುವಾಜಿ, ರೋಮಣ್ಣ ಧುತ್ತರಗಿ, ಹನಮಪ್ಪ ಕತ್ತಿ, ಸುಭಾಷ ಭಾಪ್ರಿ, ಹನಮಂತಪಪ ಒಡ್ಡೋಡಗಿ, ಮಹೇಶ ಜೀರಗಿ, ರೋಮಣ್ಣ ಭಜಂತ್ರಿ, ನಾಗಪ್ಪ ವಾಲ್ಮೀಕಿ, ಸಂಘದ ಹಿತೈಸಿಗಳಾದ ಕೃಷ್ಣಾ ರಾಮದುರ್ಗ ಇತರರು ಇದ್ದರು.
ಡಿಸೆಂಬರ್ ೨೦ರಂದು ವಾರ್ಷಿಕ ಸಭೆ
ಸಂಘದ ೨೦೧೯-೨೦ನೇ ಸಾಲಿನ ೨೫ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಡಿಸೆಂಬರ್ ೨೦ ರಂದು ಜರುಗಲಿದೆ. ಬೆಳಗ್ಗೆ ೧೦.೩೦ಕ್ಕೆ ಶಾಖಾಂಬರಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಸಂಘದ ಅಧ್ಯಕ್ಷ ರವೀಂದ್ರ ಕಲಬುರ್ಗಿ ಅಧ್ಯಕ್ಷತೆ ವಹಿಸಲಿದ್ದು, ಸಭೆಯಲ್ಲಿ ಲೆಕ್ಕ ಪರಿಶೋಧನಾ ವರದಿ, ಲಾಭ-ಹಾನಿ, ಅಡಾವೆ ಪತ್ರಿಕೆ, ನೌಕರರ ನೀತಿ ಸಂಹಿತೆ ಸೇರಿದಂತೆ ಇತರೆ ವಿಷಯಗಳ ಕುರಿತು ಚರ್ಚಿಸಲಾಗುವುದು ಎಂದು ಪ್ರಧಾನ ವ್ಯವಸ್ಥಾಪಕ ಹೇಮಂತ ಧುತ್ತರಗಿ ತಿಳಿಸಿದ್ದಾರೆ.