ರಾಜ್ಯ ಸರ್ಕಾರಿ ನೌಕರರಿಗೂ ಕೇಂದ್ರ ಸರ್ಕಾರ ಮಾದರಿಯ ಸರಿ ಸಮಾನ ವೇತನ
ನಿಮ್ಮ ಸುದ್ದಿ ಬಾಗಲಕೋಟೆ
ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಜರುಗಿದ ಕನ್ನಡ ರಾಜ್ಯೋತ್ಸವ, ಸಂಘದ ಸರ್ವಸದಸ್ಯರ ಸಾಮಾನ್ಯ ಸಭೆ, ಶಿಕ್ಷಕರು ಮತ್ತು ಸರ್ಕಾರಿ ನೌಕರರೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಸಿ ಎಸ್ ಷಡಾಕ್ಷರಿ ೨೦೨೩ರ ವೇಳೆಗೆ ರಾಜ್ಯ ಸರ್ಕಾರಿ ನೌಕರರಿಗೂ ಕೇಂದ್ರ ಸರ್ಕಾರ ನೌಕರರ ವೇತನ ಮಾದರಿಯ ಸಮಾನ ವೇತನ ದೊರಕುವಂತಾಗಬೇಕು ಎಂಬ ದೂರದೃಷ್ಟಿ ಹೊಂದಲಾಗಿದೆ. ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
ಕೆಜಿಐಡಿ ಇಲಾಖೆಯು ಸಂಪೂರ್ಣವಾಗಿ ಗಣಕೀಕರಣ ಗೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿದ್ದು ಮುಂದಿನ ಮೂರು ತಿಂಗಳಲ್ಲಿ ನೌಕರರು ಇಲಾಖೆಯ ಎಲ್ಲ ವ್ಯವಹಾರಗಳನ್ನು ಮನೆಯಲ್ಲಿಯೇ ಕುಳಿತು ತಮ್ಮ ತಮ್ಮ ಮೊಬೈಲ್ ಗಳಲ್ಲಿಯೇ ವ್ಯವಹರಿಸುವಂತಾಗುತ್ತದೆ.
೨೦೨೦ ನೇ ಸಾಲಿನಲ್ಲಿ ಆಯವ್ಯಯದಲ್ಲಿ ಸಂಘದ ಒತ್ತಾಸೆಯ ಮೇರೆಗೆ ನಗದು ರಹಿತ ಆರೋಗ್ಯ ಯೋಜನೆಯನ್ನು ಮಾನ್ಯ ಮುಖ್ಯಮಂತ್ರಿಗಳು ಘೋಷಣೆ ಮಾಡಿರುತ್ತಾರೆ. ಬರುವ ನಾಲ್ಕು ತಿಂಗಳಲ್ಲಿ ಯೋಜನೆ ಜಾರಿಗೊಳ್ಳಲಿದೆ.
ನೂತನ ಪಿಂಚಣಿ ಯೋಜನೆ ಸರ್ಕಾರಿ ನೌಕರಿಗೆ ಮಾರಕವಾಗಿದೆ. ೨೦೦೬ ನಂತರ ನೇಮಕಗೊಂಡ ಎಲ್ಲಾ ನೌಕರರನ್ನು ಈ ಪಿಂಚಣಿ ವ್ಯಾಪ್ತಿಗೆ ತರಲಾಗಿದೆ. ಪರಿಣಾಮವಾಗಿ ನಿವೃತ್ತಿ ನಂತರ ನೌಕರರಿಗೆ ಎರಡು ಸಾವಿರ ರೂ ಸಹ ಪಿಂಚಣಿ ದೊರಕುವುದಿಲ್ಲ. ಇದು ಅವೈಜ್ಞಾನಿಕ ಹಾಗೂ ಅಸಂಬದ್ಧ ಯೋಜನೆಯಾಗಿದ್ದು. ಕಾರಣ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಪೊಲೀಸ್ ಇಲಾಖೆಯು ನೌಕರರ ಸಂಘದ ಚಟುವಟಿಕೆಗೆ ಮಂಚೂಣಿಗೆ ಬರಲು ಸಾಧ್ಯವಿಲ್ಲ.
ಹೀಗಾಗಿ ಅವರ ಧ್ವನಿಯಾಗಿ ನಾವು ಸರ್ಕಾರದ ಗಮನ ಸೆಳೆದು ಪೊಲೀಸ್ ಇಲಾಖೆಯ ಬೇಡಿಕೆಗಳನ್ನು ಸಹ ಪರಿಹರಿಸಲಾಗುವುದು ಎಂದು ಹೇಳಿದರು. ಮುಖ್ಯ ಅತಿಥಿ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಜಗದೀಶ ಗೌಡಪ್ಪ ಪಾಟೀಲ್ ಮಾತನಾಡಿ ಸರ್ವ ಇಲಾಖೆಯ ನೌಕರರ ಹಿತರಕ್ಷಣೆಗೆ ಸಂಘ ಕಂಕಣಬದ್ಧವಾಗಿದೆ. ಅದರಲ್ಲೂ ಶಿಕ್ಷಣ ಇಲಾಖೆಯಲ್ಲಿ ಬಹಳಷ್ಟು ಕೆಲಸಗಳು ಆಗಬೇಕಾಗಿವೆ. ಕಾರಣ ಹೊಸ ಮನ್ವಂತರಕ್ಕಾಗಿ ವಿಕಾಸಶೀಲ ಹೆಜ್ಜೆ ಇಡಬೇಕೆಂದು ಶಿಕ್ಷಕರಿಗೆ ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ ೨೦೧೯- ೨೦ ನೇ ಸಾಲಿನ ಅಡಾವೆ ಪತ್ರಿಕೆಗೆ ಅನುಮೋದನೆ ನೀಡಿದ್ದಕ್ಕೆ ಜಿಲ್ಲೆಯ ನೌಕರರಿಗೆ ಅಭಿನಂದನೆ ಸಲ್ಲಿಸಿದರು. ಸಂಘದ ನಿವೇಶನದಲ್ಲಿ ಈಗಾಗಲೇ ರಸ್ತೆಗೆ ಹೊಂದಿಕೊAಡAತೆ ೧೨ ವಾಣಿಜ್ಯ ಮಳಿಗೆ ನಿರ್ಮಿಸಲಾಗಿದೆ. ಉಳಿದ ಹತ್ತು ಗುಂಟೆ ಜಾಗೆಯಲ್ಲಿ ಸಮುದಾಯ ಭವನ,ನೌಕರರ ವಸತಿಗೃಹಗಳನ್ನು ನಿರ್ಮಿಸಲು ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಲು ರಾಜ್ಯಾಧ್ಯಕ್ಷರಿಗೆ ಮನವಿ ಮಾಡಿದರು.
ಸಮಾರಂಭದಲ್ಲಿ ಕೊರೋನಾ ವಾರಿಯರ್ಸ್ ಆಗಿ ಮಹತ್ತರ ಕಾರ್ಯನಿರ್ವಹಿಸಿದ ಆರೋಗ್ಯ ಮತ್ತು ಪೊಲೀಸ್ ಇಲಾಖೆಯ ಎಲ್ಲ ವೃಂದದ ತಲಾ ಒಬ್ಬ ಪ್ರತಿನಿಧಿ ನೌಕರರಿಗೆ ಸತ್ಕರಿಸುವದರ ಜೊತೆಗೆ ಇತರ ಇಲಾಖೆಯ ಪ್ರತಿ ವೃಂದದಿAದ ಕೋವಿಡ್-೧೯ ಕ್ಕೆ ಸಂಬAಧಿಸಿದ ಕಾರ್ಯದಲ್ಲಿ ಭಾಗಿಗಳಾಗಿ ಗಮನಾರ್ಹ ಸೇವೆ ಸಲ್ಲಿಸಿದ ಸುಮಾರು ೬೦ ಅಧಿಕಾರಿಗಳು/ ನೌಕರರಿಗೆ ಆದರದ ಗೌರವದ ಸತ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾಧ್ಯಕ್ಷ ಸುರೇಶ್ ಶೆಡಿಶ್ಯಾಳ, ಬೀದರ್ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗಿ, ಧಾರವಾಡ ಜಿಲ್ಲಾಧ್ಯಕ್ಷ ಸಿದ್ದನಗೌಡ ಪಾಟೀಲ್, ಗುಲ್ಬರ್ಗ ಜಿಲ್ಲಾಧ್ಯಕ್ಷ ರಾಜು ಲಿಂಗಟಿ, ಯಾದಗಿರಿ ಜಿಲ್ಲಾಧ್ಯಕ್ಷ ಮಹಿಪಾಲ್ ರೆಡ್ಡಿ, ರಾಜ್ಯ ಪರಿಷತ್ ಸದಸ್ಯ ಸಂಜೀವರೆಡ್ಡಿ, ಖಜಾಂಚಿ ಎಸ್.ಕೆ.ಹಿರೇಮಠ್, ಪ್ರಧಾನ ಕಾರ್ಯದರ್ಶಿ ವಿಠ್ಠಲ ವಾಲಿಕಾರ, ಗೌರವಾಧ್ಯಕ್ಷ ಎಸ್. ಎಸ್. ಇಂಜಗನೇರಿ ಹಾಗೂ ತಾಲೂಕು ಘಟಕದ ಅಧ್ಯಕ್ಷರುಗಳು ,ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ವಿಠ್ಠಲ ವಾಲಿಕಾರ ಸ್ವಾಗತಿಸಿ, ವಂದಿಸಿದರು. ಹುಚ್ಚೇಶ ಲಾಯದಗುಂದಿ, ಎಸ್.ಎ ಸಾರಂಗಮಠ, ಸೌಮ್ಯಾ ದೇಸಾಯಿ ನಿರೂಪಿಸಿದರು.