ನವದೆಹಲಿ: ಪಾನ್ ಮಸಾಲ, ಗುಟ್ಕಾ ತಂಬಾಕು ಉತ್ಪನ್ನಗಳ ತಯಾರಕರು ತಮ್ಮ ಪ್ಯಾಕಿಂಗ್ ಯಂತ್ರೋಪಕರಣವನ್ನು ನೊಂದಾಯಿಸದೇ ಹೋದರೆ ಒಂದು ಲಕ್ಷ ರೂ ದಂಡ ಕಟ್ಟಬೇಕಾಗುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ.
ಸರ್ಕಾರ ಹೊಸ ಕಟ್ಟಳೆ ಹೊರಡಿಸಿದ್ದು, ತಂಬಾಕು ಉದ್ಯಮದಿಂದ ಸರ್ಕಾರ ಬರುವ ಆದಾಯದಲ್ಲಿ ಸೋರಿಕೆ ತಡೆಯುವ ಯತ್ನವಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ಏಪ್ರಿಲ್ 1ರಿಂದ ಈ ಹೊಸ ಕಾನೂನು ಜಾರಿಗೆ ಬರುತ್ತದೆ. ತಂಬಾಕು ಉತ್ಪನ್ನ ತಯಾರಿಸುವ ಯಂತ್ರವನ್ನು ಜಿಎಸ್ಟಿ ಪ್ರಾಧಿಕಾರದಲ್ಲಿ ನಮೂದಿಸುವುದು ಕಡ್ಡಾಯವಾಗಿರಲಿದೆ.
ಈಗ ಕೇಂದ್ರೀಯ ಜಿಎಸ್ಟಿ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು ಅದರಂತೆ ಒಂದು ಲಕ್ಷ ರೂ ದಂಡ ವಿಧಿಸುವ ಕ್ರಮ ಸೇರಿಸಲಾಗಿದ್ದು, 2024ರ ಹಣಕಾಸು ಮಸೂದೆಯಲ್ಲಿ ಈ ಜಿಎಸ್ಟಿ ಕಾಯ್ದೆಗೆ ತಿದ್ದುಪಡಿ ಇದ್ದು, ಯಂತ್ರೋಪಕರಣವನ್ನು ನೊಂದಾಯಿಸದೇ ಹೋದಲ್ಲಿ ಒಂದು ಲಕ್ಷ ರೂ ದಂಡ ವಿಧಿಸುವುದರ ಒತೆಗೆ ಆ ಯಂತ್ರೋಪಕರಣವನ್ನೇ ಜಫ್ತಿ ಮಾಡಿಕೊಳ್ಳುವ ಅಧಿಕಾರವನ್ನು ಜಿಎಸ್ಟಿ ಅಧಿಕಾರಿಗಳು ಹೊಂದಿರುತ್ತಾರೆ.
ಪಾನ್ ಮಸಾಲ ಮತ್ತು ಗುಟ್ಕಾ ವ್ಯವಹಾರದಲ್ಲಿ ತೆರಿಗೆ ಕಳ್ಳತನ ಆಗುತ್ತಿರುವುದು ಬೆಳಕಿಗೆ ಬಂದಿದ್ದು, ಈ ತೆರಿಗೆ ಆದಾಯ ಸೋರಿಕೆ ಆಗುವುದನ್ನು ತಡೆಯಲು ರಾಜ್ಯ ಹಣಕಾಸು ಸಚಿವರನ್ನೊಳಗೊಂಡ ಸಮಿತಿ ವರದಿ ಮಂಡಿಸಿತ್ತು. ಕಳೆದ ವರ್ಷ (2023) ಫೆಬ್ರುವರಿಯಲ್ಲಿ ನಡೆದ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಈ ವರದಿಗೆ ಅನುಮೋದನೆ ಕೊಡಲಾಯಿತು ಎಂದು ಮಾಹಿತಿ ಕಂಡು ಬಂದಿದೆ.