This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

National News

ಆದಾಯ ಸೋರಿಕೆ ತಡೆಗೆ ಸರ್ಕಾರ ಕ್ರಮ: ಪಾನ್ ಮಸಾಲ, ಗುಟ್ಕಾ ,ತಂಬಾಕು ಉತ್ಪನ್ನ ತಯಾರಿಸುವ ಯಂತ್ರಗಳ ನೊಂದಣಿ ಆಗದಿದ್ದರೆ ಲಕ್ಷ ರೂ ದಂಡ

ಆದಾಯ ಸೋರಿಕೆ ತಡೆಗೆ ಸರ್ಕಾರ ಕ್ರಮ: ಪಾನ್ ಮಸಾಲ, ಗುಟ್ಕಾ ,ತಂಬಾಕು ಉತ್ಪನ್ನ ತಯಾರಿಸುವ ಯಂತ್ರಗಳ ನೊಂದಣಿ ಆಗದಿದ್ದರೆ ಲಕ್ಷ ರೂ ದಂಡ

ನವದೆಹಲಿ: ಪಾನ್ ಮಸಾಲ, ಗುಟ್ಕಾ ತಂಬಾಕು ಉತ್ಪನ್ನಗಳ ತಯಾರಕರು ತಮ್ಮ ಪ್ಯಾಕಿಂಗ್ ಯಂತ್ರೋಪಕರಣವನ್ನು ನೊಂದಾಯಿಸದೇ ಹೋದರೆ ಒಂದು ಲಕ್ಷ ರೂ ದಂಡ ಕಟ್ಟಬೇಕಾಗುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ.

ಸರ್ಕಾರ ಹೊಸ ಕಟ್ಟಳೆ ಹೊರಡಿಸಿದ್ದು, ತಂಬಾಕು ಉದ್ಯಮದಿಂದ ಸರ್ಕಾರ ಬರುವ ಆದಾಯದಲ್ಲಿ ಸೋರಿಕೆ ತಡೆಯುವ ಯತ್ನವಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ಏಪ್ರಿಲ್ 1ರಿಂದ ಈ ಹೊಸ ಕಾನೂನು ಜಾರಿಗೆ ಬರುತ್ತದೆ. ತಂಬಾಕು ಉತ್ಪನ್ನ ತಯಾರಿಸುವ ಯಂತ್ರವನ್ನು ಜಿಎಸ್​ಟಿ ಪ್ರಾಧಿಕಾರದಲ್ಲಿ ನಮೂದಿಸುವುದು ಕಡ್ಡಾಯವಾಗಿರಲಿದೆ.

ಈಗ ಕೇಂದ್ರೀಯ ಜಿಎಸ್​ಟಿ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು ಅದರಂತೆ ಒಂದು ಲಕ್ಷ ರೂ ದಂಡ ವಿಧಿಸುವ ಕ್ರಮ ಸೇರಿಸಲಾಗಿದ್ದು, 2024ರ ಹಣಕಾಸು ಮಸೂದೆಯಲ್ಲಿ ಈ ಜಿಎಸ್​ಟಿ ಕಾಯ್ದೆಗೆ ತಿದ್ದುಪಡಿ ಇದ್ದು, ಯಂತ್ರೋಪಕರಣವನ್ನು ನೊಂದಾಯಿಸದೇ ಹೋದಲ್ಲಿ ಒಂದು ಲಕ್ಷ ರೂ ದಂಡ ವಿಧಿಸುವುದರ ಒತೆಗೆ ಆ ಯಂತ್ರೋಪಕರಣವನ್ನೇ ಜಫ್ತಿ ಮಾಡಿಕೊಳ್ಳುವ ಅಧಿಕಾರವನ್ನು ಜಿಎಸ್​ಟಿ ಅಧಿಕಾರಿಗಳು ಹೊಂದಿರುತ್ತಾರೆ.

ಪಾನ್ ಮಸಾಲ ಮತ್ತು ಗುಟ್ಕಾ ವ್ಯವಹಾರದಲ್ಲಿ ತೆರಿಗೆ ಕಳ್ಳತನ ಆಗುತ್ತಿರುವುದು ಬೆಳಕಿಗೆ ಬಂದಿದ್ದು, ಈ ತೆರಿಗೆ ಆದಾಯ ಸೋರಿಕೆ ಆಗುವುದನ್ನು ತಡೆಯಲು ರಾಜ್ಯ ಹಣಕಾಸು ಸಚಿವರನ್ನೊಳಗೊಂಡ ಸಮಿತಿ ವರದಿ ಮಂಡಿಸಿತ್ತು. ಕಳೆದ ವರ್ಷ (2023) ಫೆಬ್ರುವರಿಯಲ್ಲಿ ನಡೆದ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಈ ವರದಿಗೆ ಅನುಮೋದನೆ ಕೊಡಲಾಯಿತು ಎಂದು ಮಾಹಿತಿ ಕಂಡು ಬಂದಿದೆ.

Nimma Suddi
";