This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Politics News

ನೀರಾವರಿ ವಿದ್ಯುತ್ ಶಕ್ತಿಗೆ ಅನುದಾನ ಖೋತಾ

ನಿಮ್ಮ ಸು‌ದ್ದಿ ವಿಜಯಪುರ

ರಾಜ್ಯದಲ್ಲಿ ನೀರಾವರಿ ಪಂಪಸೆಟ್ ಗಳಿಗೆ ಬೇಕಾಗಿರುವ ವಿದ್ಯುತ್ ಶಕ್ತಿಗೆ 16,000 ಕೋಟಿ ರೂ. ಅನುದಾನ ಅವಶ್ಯಕತೆಯಿದೆ. ಆದರೆ ರಾಜ್ಯ ಸರ್ಕಾರ ಕೇವಲ 12,000 ಕೋಟಿ ರೂ. ಮಾತ್ರ ಅನುದಾನ ಒದಗಿಸುತ್ತಿದೆ. ಆ ಮೂಲಕ ಎದುರಾಗಿರುವ 4000ಕೋಟಿ ರೂ. ಕೊರತೆ ಎದುರಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎಂ.ಬಿ. ಪಾಟೀಲ ಹೇಳಿದರು.

ಗುರುವಾರ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ‌ ಅವರು, ಈ ಸರ್ಕಾರದ ದಿವ್ಯ ನಿರ್ಲಕ್ಷ್ಯ ಪರಿಣಾಮ ರೈತರಿಗೆ ದಿಕ್ಕು ತೋಚದಂತಾಗಿದೆ ಎಂದರು.

ಜಿಲ್ಲೆಯ ರೈತರು ಎದುರಿಸುತ್ತಿರುವ ವಿದ್ಯುತ್ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿ ಸರ್ಕಾರದ ವೈಫಲ್ಯವನ್ನು ಅಂಕಿ ಅಂಶಗಳ ಸಮೇತ ಎಳೆ ಎಳೆಯಾಗಿ ಬಿಡಿಸಿಟ್ಟರು.

ಹೆಸ್ಕಾಂ ವ್ಯಾಪ್ತಿಗೆ ಅಂದಾಜು 6400 MU ಇದ್ದು, ವಿದ್ಯುತ್ ಶಕ್ತಿ ಪ್ರಮಾಣ 400 MU ಹಂಚಿಕೆಯಾಗಿದೆ, ಆದರೆ ಬಳಕೆಯಾಗಿರುವ ವಿದ್ಯುತ್ ಶಕ್ತಿ ಪ್ರಮಾಣ 5500MU ತಲುಪಿದೆ, 900MU ಕೊರತೆ ಎದುರಾಗಿದೆ. ಅದೇ ತೆರನಾಗಿ ವಿಜಯಪುರ ಜಿಲ್ಲೆಗೆ ಎಪ್ರಿಲ್ ಮಾಸದಿಂದ ಜುಲೈವರೆಗೆ 400.625 MU ವಿದ್ಯುತ್ ಹಂಚಿಕೆಯಾಗಿದ್ದು, ಆ ಪೈಕಿ 512.686MU ಬಳಕೆಯಾಗಿದೆ ಎಂದರು.

ರೈತರಿಗೆ ರಾಜ್ಯ ಸರ್ಕಾರ ದೊಡ್ಡ ಅನ್ಯಾಯ ಮಾಡುತ್ತಿದೆ, ಈ ಅನ್ಯಾಯದ ವಿರುದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ನಮ್ಮ ಪಕ್ಷದ ಅಧ್ಯಕ್ಷರೂ ಈ ಹಿಂದೆ ಇಂಧನ ಸಚಿವರಾಗಿ ಕಾರ್ಯನಿರ್ವಹಿಸಿದ ಡಿ.ಕೆ. ಶಿವಕುಮಾರ ಅವರೊಂದಿಗೆ ಚರ್ಚಿಸಿ ಮುಂದಿನ ಹೋರಾಟಕ್ಕೆ ಅಣಿಯಾಗಲಾಗುವುದು ಎಂದರು.

ನೀರಾವರಿ ಪಂಪಸೆಟ್ ಗಳಿಗೆ ಸರ್ಕಾರದಿಂದ ಬರುವ ಸಹಾಯಧನವನ್ನು ಪರಿಗಣಿಸಿ ಫೀಡರ್ ವಾರು ವಿದ್ಯುಚ್ಛಕ್ತಿ, ಹಂಚಿಕೆ ಮಾಡಲಾಗಿದೆ. ಹಂಚಿಕೆಯ ಪ್ರಮಾಣ ಮೀರದಂತೆ ಕಟ್ಟುನಿಟ್ಟಾಗಿ ಪರಿಶೀಲಿಸಲು ಅಧಿಕಾರಿಗಳಿಗೆ ಆದೇಶ ಮಾಡಲಾಗಿದೆ. ಹಂಚಿಕೆಗಿಂತ ಹೆಚ್ಚುವರಿಯಾದ ಬಳಕೆಯ ಪ್ರಮಾಣ ಸರಿದೂಗಿಸಲು ರೈತರ ಪಂಪಸೆಟ್ ಗಳಿಗೆ ವಿದ್ಯುತ್‌ ಪೂರೈಕೆಯ ಅವಧಿ ಹಾಗೂ ಪ್ರಮಾಣವನ್ನು ಕಡಿತಗೊಳಿಸುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪಾಟೀಲ ತಿಳಿಸಿದರು.

ಪ್ರಥಮವಾಗಿ ಸಂಜೆ ೬ ರಿಂದ ರಿಂದ 10 ಗಂಟೆಯ ಅವಧಿಯಲ್ಲಿ, 20 ಆ್ಯಂಪಿಯರ್ ಲೋಡಗಿ ಸೀಮಿತಗೊಳಿಸಿ ವಿತರಣಾ ಕೇಂದ್ರಗಳಲ್ಲಿ ಫೀಡರಗಳನ್ನು ನಿಯಂತ್ರಿಸಲಾಗುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ಥ್ರಿ ಫೇಸ್ ವಿದ್ಯುತ್‌ ಪೂರೈಕೆಯನ್ನು ಕೂಡ 7 ತಾಸುಗಳ ಬದಲಾಗಿ ಕಡಿಮೆ ಅವಧಿಗೆ ಪೂರೈಸಲು ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ನಿರ್ಧಾರ ಕೈಗೊಂಡರೆ ಇದರಿಂದ ರೈತಾಪಿ ಜನರು ಇನ್ನೂ ಸಂಕಷ್ಟ ಕ್ರೀಡಾಗಲಿದ್ದಾರೆ, ಸಾಲ ಮಾಡಿ ಸಾಗುವಳಿ ಮಾಡಿ ಬೆಳೆಗೆ ನೀರು ಪೂರೈಸುವ ಅವಶ್ಯಕತೆ ಇರುವ ಈ ಸಂದರ್ಭದಲ್ಲಿ, ಸಮರ್ಪಕ ವಿದ್ಯುತ್‌ ಪೂರೈಕೆ ಆಗದೇ ಹೋದರೆ ಸಂಪೂರ್ಣ ಬೆಳೆ ನಾಶವಾಗಿ ಅನ್ನದಾತರು ಬೀದಿ ಪಾಲಾಗುವ ಪರಸ್ಥಿತಿ ನಿರ್ಮಾಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಕಾರಣದಿಂದ ಭವಿಷ್ಯದ ಕುರಿತು ರೈತರಿಗೆ ದಿಕ್ಕು ತೋಚದಂತಾಗಿ ರೈತರಿಂದ ಪ್ರತಿಭಟನೆಗಳು ಸಂಭವಿಸುತ್ತಿವೆ ಎಂದರು.

ವಿದ್ಯುತ್ ಹಂಚಿಕೆ ಅವೈಜ್ಞಾನಿಕ
ವಿಜಯಪೂರ ಜಿಲ್ಲೆ ನೀರಾವರಿ ಕ್ಷೇತ್ರದಲ್ಲಿ, ಅತೀ ವೇಗವಾಗಿ ಪ್ರಗತಿಯನ್ನು ಹೊಂದುತ್ತಲಿದ್ದು, ಅಪಾರ ಪ್ರಮಾಣದ ಭೂಮಿಯಲಿ, ನೀರಾವರಿ (ವಾಣಿಜ್ಯ) ಬೆಳೆಗಳನ್ನು ಬೆಳೆಯುತ್ತಿದ್ದಾರೆ, ಕಾರಣ ಒಂದುವರ್ಷದಲ್ಲಿ ಲೋಡ್ ಗೋಥ ಪ್ರಮಾಣದಲ್ಲಿ ಶೇ.66 ವೃದ್ಧಿಯಾಗಿರುದು ಕಂಡುಬಂದಿದೆ ಎಂದರು‌.

ವಿದ್ಯುತ್‌ ಜಾಲದ ಸಾಮರ್ಥ್ಯವನ್ನು ಹೆಚ್ಚುವರಿಯಾಗಿ 60 MW ನಮ್ಮ ಅಭಿವೃದಿಪಡಿಸಲಾಗಿದೆ, ಅದರಂತೆ ತಿಕೋಟಾ ಹಾಗೂ ಇನ್ನುಳಿದ ತಾಲೂಕುಗಳಲ್ಲಿಯೂ ಕೂಡ ಸಾಕಷ್ಟು ಪ್ರಮಾಣದಲ್ಲಿ, ಲೋಡ ಗೋಥ ಕಂಡು ಬಂದಿದೆ. ಇದಾವುದನ್ನು ಪರಿಗಣಿಸದೆ ವಿದ್ಯುತ್‌ ಹಂಚಿಕೆಯನ್ನು ನಿಗದಿಪಡಿಸಿರುವುದು ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದು ದೂರಿದರು.

ಇಗಾಗಲೇ ಸಂಕಷ್ಟದಲ್ಲಿ ರುವ ರೈತರ ಭವಿಷ್ಯಕ್ಕೆ ಮಾರಕವಾಗಿರುವ ಈ ಕ್ರಮವನ್ನು ರದ್ದು ಪಡಿಸಬೇಕು ಎಂದರು.

ಕರ್ನಾಟಕ ಸರ್ಕಾರ ಈ ವಿಷಯದಲ್ಲಿ ಗಮನಹರಿಸಿ ಅವಶ್ಯಕವಿರುವ ಪೂರ್ಣ ಪ್ರಮಾಣದ ಸಹಾಯ ಧನವನ್ನು ನೀಡುವ ಮೂಲಕ ನೀರಾವರಿ ಪಂಪಸೆಟ್ ಗಳಿಗೆ ಸಮರ್ಪಕ ವಿದ್ಯುತ್‌ ಪೂರೈಸಬೇಕು ಎಂದು ಸರ್ಕಾರದ ಗಮನ ಸೆಳೆದರು.

Nimma Suddi
";