ಕಾಬೂಲ್: ಕಳೆದ ಮೂರು ದಿನಗಳಿಂದ ಅಫ್ಘಾನಿಸ್ತಾನದ ಹಲವು ಪ್ರಾಂತ್ಯಗಳಲ್ಲಿ ವ್ಯಾಪಕ ಹಿಮಪಾತವಾಗುತ್ತಿದ್ದು, 15 ಜನ ಪ್ರಾಣ ಕಳೆದುಕೊಂಡಿದ್ದು, 30 ಜನರು ಗಾಯಗೊಂಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ವರದಿಗಳ ಪ್ರಕಾರ ಬಾಲ್ಖ್ ಮತ್ತು ಫರಿಯಾಬ್ ಪ್ರಾಂತ್ಯಗಳಲ್ಲಿ ಪ್ರಾಣಿಗಳು ಕೂಡ ಸಾವನ್ನಪ್ಪಿದೆ. ಸುಮಾರು ಹತ್ತು ಸಾವಿರ ಪ್ರಾಣಿಗಳು ಸಾವನ್ನಪ್ಪಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಸಾರ್-ಇ-ಪುಲ್ ನಿವಾಸಿ ಅಬ್ದುಲ್ ಖಾದಿರ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಜನಸಂಖ್ಯೆ ಹೆಚ್ಚಿರುವ ಪ್ರದೇಶದಲ್ಲಿ ಆತಂಕ ಹೆಚ್ಚಾಗಿದೆ. ಮೂರು ದಿನದಿಂದ ಹಿಮಪಾತ ಹೆಚ್ಚಾಗಿದೆ. ಜಾನುವಾರುಗಳು ಕೂಡ ಸಾವನ್ನಪ್ಪುತ್ತಿದೆ. ಇದರಿಂದ ಇಲ್ಲಿನ ಜನರಲ್ಲಿ ಆತಂಕ ಹೆಚ್ಚಾಗಿದೆ. ಅನೇಕ ರಸ್ತೆಗಳನ್ನು ನಿರ್ಬಂಧಿಸಲಾಗಿದೆ.
ಇದರಿಂದ ಯಾವುದೇ ಸಂಪರ್ಕವನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದು, ಸರ್ಕಾರದ ನೆರವಿನ ತುರ್ತು ಅಗತ್ಯವಿದೆ. ವಿಶೇಷವಾಗಿ ರಸ್ತೆ ತಡೆ ಮತ್ತು ಜಾನುವಾರು, ಹಾಗೂ ಜನರಿಗೆ ಇಲ್ಲಿ ಸಹಾಯ ಮಾಡಬೇಕಿದೆ ಎಂದು ಮತ್ತೊಬ್ಬ ನಿವಾಸಿ ಅಮಾನುಲ್ಲಾ ಹೇಳಿದ್ದಾರೆ. ಈಗಾಗಲೇ ಅಫ್ಘಾನಿಸ್ತಾನವು ವಿಶೇಷವಾಗಿ ಜಾನುವಾರು ಮಾಲೀಕರಿಗೆ ಪರಿಹರಿವನ್ನು ನೀಡಲು ವಿವಿಧ ಸಚಿವಾಲಯಗಳನ್ನು ಒಳಗೊಂಡ ಸಮಿತಿಯ ರಚನೆ ಮಾಡುವಂತೆ ಹೇಳಿದೆ.
ಬಾಲ್ಖ್, ಜಾವ್ಜಾನ್, ಬದ್ಘಿಸ್, ಫರಿಯಾಬ್ ಮತ್ತು ಹೆರಾತ್ ಪ್ರಾಂತ್ಯಗಳಲ್ಲಿ ಜಾನುವಾರು ಮಾಲೀಕರ ಸಾಹಯ ಐವತ್ತು ಮಿಲಿಯನ್ ಅಫ್ಘಾನಿ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಕೃಷಿ, ನೀರಾವರಿ ಮತ್ತು ಜಾನುವಾರು ಸಚಿವಾಲಯದ ತಾಲಿಬಾನ್-ನೇಮಕ ವಕ್ತಾರ ಮಿಸ್ಬಾಹುದ್ದೀನ್ ಮುಸ್ತೀನ್ ಎಲ್ಲಾ ಪ್ರಾಂತ್ಯಗಳಲ್ಲಿ ರಚಿಸಲಾದ ಸಮಿತಿಗಳ ತ್ವರಿತ ಪ್ರತಿಕ್ರಿಯೆಯನ್ನು ಮಾಡಲಿದೆ.
ಈ ಸಮಿತಿಗಳು ನಿರ್ಬಂಧಿತ ರಸ್ತೆಗಳನ್ನು ತೆರೆಯಲು, ಸಂಕಷ್ಟಕ್ಕೆ ಒಳಗಾದ ಜನರಿಗೆ ಆಹಾರ ಮತ್ತು ಮೇವನ್ನು ವಿತರಿಸಲು ಹಾಗೂ ಭಾರೀ ಹಿಮಪಾತದಲ್ಲಿ ಸಿಲುಕಿರುವವರನ್ನು ಜನರನ್ನು ರಕ್ಷಿಸುವ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ.ಅಫ್ಘಾನ್ ರೆಡ್ ಕ್ರೆಸೆಂಟ್ ಸೊಸೈಟಿಯ ವಕ್ತಾರ ಎರ್ಫಾನುಲ್ಲಾ ಶರಫ್ಜೋಯ್ ಮಾತನಾಡಿ, ಚಳಿಗಾಲದ ಸೇವಾ ಸಿಬ್ಬಂದಿಗಳು ಈಗಾಗಲೇ ಬದ್ಗಿಸ್, ಘೋರ್, ಫರಾಹ್, ಕಂದಹಾರ್, ಹೆಲ್ಮಂಡ್, ಜಾವ್ಜಾನ್ ಮತ್ತು ನುರಿಸ್ತಾನ್‌ನಂತಹ ಪ್ರಾಂತ್ಯಗಳಲ್ಲಿ ಸಹಾಯವನ್ನು ಮಾಡುತ್ತಿದ್ದಾರೆ ಎಂದು ವಿವರಿಸಿದರು.