ಉಮೇದುವಾರಿಕೆ ವಾಪಸ್:ಸೊಸೈಟಿಯಲ್ಲಿ ಹೈ ಡ್ರಾಮಾ
ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆ ಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದ ನೇಕಾರ ಸೊಸೈಟಿಯೊಂದರ ಆಡಳಿತ ಮಂಡಳಿ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾಧಿಕಾರಿ ನಿಯಮ ಮೀರಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಪಟ್ಟಣದ ಜಯಶ್ರೀ ನೇಕಾರ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆ ಪ್ರಕ್ರಿಯೆ ಆರಂಭವಾಗಿದೆ. ಜು.೧೦ರಂದು ನಾಮಪತ್ರ ವಾಪಸ್ ಪಡೆಯಲು ಮಧ್ಯಾಹ್ನ ೩ ಗಂಟೆವರೆಗೆ ಗಡುವು ನೀಡಿದ್ದರೂ ಸಂಜೆ ೬.೩೦ ಗಂಟೆಯಾದರೂ ಕಣದಲ್ಲಿ ಉಳಿದವರ ಪಟ್ಟಿ ಪ್ರಕಟ ಮಾಡಲು ಮೀನಾಮೇಷ ಎನಿಸುತ್ತಿದ್ದರು ದೂರು ಕೇಳಿ ಬಂದಿದೆ.
ಸಂಘದ ಆಡಳಿತ ಮಂಡಳಿಯ ೧೦ ಸ್ಥಾನಗಳಿಗೆ ೩೬ ಜನ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ವಾಪಸ್ ದಿನದಂದು ೨೫ ಜನ ನಾಮಪತ್ರ ವಾಪಸ್ ಪಡೆದಿದ್ದರು. ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಚುನಾವಣಾಧಿಕಾರಿ ನೋಟೀಸ್ ಬೋರ್ಡ್ ನಲ್ಲಿ ಅಂಟಿಸಬೇಕಿತ್ತು. ಆದರೆ ಹಿರಿಯರು ಹೇಳಿದರೆಂದು ೩ ಗಂಟೆ ವಿಳಂಬ ಮಾಡಿದ ಚುನಾವಣಾಧಿಕಾರಿ ನಡೆ ವಿರುದ್ಧ ಆಕ್ರೋಶದ ಕೂಗು ಕೇಳಿತು.
ಮಹಿಳಾ ಕ್ಷೇತ್ರದ ೨ ಸ್ಥಾನಗಳಿಗೆ ೬ ಮಹಿಳೆಯರು ಸ್ಪರ್ಧಿಸಿದ್ದ ಮೂವರು ನಿಗದಿತ ಅವಧಿಯೊಳಗೆ ನಾಮಪತ್ರ ವಾಪಸ್ ಪಡೆದಿದ್ದರು. ಒಬ್ಬರು ಮಾತ್ರ ನಾಮಪತ್ರ ವಾಪಸ್ ಪಡೆದಿರಲಿಲ್ಲ. ಹೀಗಾಗಿ ಸೊಸೈಟಿಯಲ್ಲಿ ಸಂಜೆ ೬.೩೦ರ ವರೆಗೆ ಹೈಡ್ರಾಮಾ ನಡೆಯಿತು. ಒಂದು ಗುಂಪು ನಿಯಮಾವಳಿಯಂತೆ ನಡೆದುಕೊಳ್ಳಬೇಕೆಂದು ಸೂಚಿಸಿದರೆ ಮತ್ತೊಂದು ಗುಂಪು ಸಮಾಧಾನದ ಮಾತು ಹೇಳುತ್ತಿತ್ತು. ಕೊನೆಗೂ ಸಂಜೆ ೬.೩೦ಕ್ಕೆ ಬಂದ ಮಹಿಳಾ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆದರು.
ಇದೀಗ ಸೊಸೈಟಿಯ ೧೦ ಸ್ಥಾನಗಳಲ್ಲಿ ೯ ಸ್ಥಾನಗಳು ಅವಿರೋಧವಾಗಿ ಆಯ್ಕೆ ಆದರೆ ಒಂದು ಸ್ಥಾನಕ್ಕೆ ಜು.೧೬ರಂದು ಮತದಾನ ನಡೆಯಲಿದೆ. ಆದರೆ ನಿಯಮಾವಳಿಯಂತೆ ನಡೆಯದ ಚುನಾವಣಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಪ್ರಕ್ರಿಯೆಯನ್ನು ಮುಂದೂಡಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ಕೋಟ್ನಿ
ಗದಿತ ಅವಧಿಯೊಳಗೆ ಮಹಿಳಾ ಅಭ್ಯರ್ಥಿಯ ನಾಮಪತ್ರ ವಾಪಸ್ ಪಡೆಯುವ ಪತ್ರ ಬಂದಿತ್ತು. ಆದರೆ ಖುದ್ದು ಅವರೇ ಬಾರದೇ ಇರುವುದರಿಂದ ಸಂಜೆವರೆಗೂ ಕಾಯಬೇಕಾಯಿತು.
-ಶಿಲ್ಪಾ ಓಲೇಕಾರ, ಚುನಾವಣಾಧಿಕಾರಿ.
ಕೋಟ್
ನಾಮಪತ್ರ ವಾಪಸ್ ಪಡೆಯುವ ಅವಧಿ ಪೂರ್ಣಗೊಂಡರೂ ಪಟ್ಟಿ ಪ್ರಕಟಿಸದೆ ಕಾಯುತ್ತಿದ್ದ ಚುನಾವಣಾಧಿಕಾರಿ ನಡೆ ಸಂಶಯಕ್ಕೆ ಕಾರಣವಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು.
-ರವಿ ಬಂಡಿ, ನಿವಾಸಿ.
ಅವಧಿ ಮುಗಿದರೂ ಪಟ್ಟಿ ಪ್ರಕಟಣೆ ಮಾಡದಿರುವುದು ಸರಿಯಲ್ಲ. ಸೂಕ್ತ ವಿಚಾರಣೆ ನಡೆಸುತ್ತೇವೆ.
ಮಲ್ಲಿಕಾರ್ಜುನ ಪೂಜಾರಿ, ನಿಬಂಧಕರು, ಸಹಕಾರಿ ಇಲಾಖೆ