This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Politics News

ತೋಟಗಾರಿಕೆ ಮೇಳ : ಆಕರ್ಷನೀಯ ಫಲಪುಷ್ಪ ಪ್ರದರ್ಶನ

ನಿಮ್ಮ ಸುದ್ದಿ ಬಾಗಲಕೋಟೆ

ತೋವಿವಿಯ ಉದ್ಯಾನಗಿರಿಲ್ಲಿ ಹಮ್ಮಿಕೊಂಡ ಮೂರು ದಿನಗಳ ತೋಟಗಾರಿಕೆ ಮೇಳದ ಮೊದಲ ದಿನ ತೋಟಗಾರಿಕೆ ಇಲಾಖೆಯಿಂದ ಪ್ರದರ್ಶಿಸಲಾದ ಫಲಪುಷ್ಪಗಳು ನೋಡುಗರನ್ನು ಆಕರ್ಷಿಸಿತು.

ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಮತ್ತು ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದರು. ನಂತರ ಪ್ರದರ್ಶನಕ್ಕೆ ಇಡಲಾದ ವಿವಿಧ ತರಹದ ಹಣ್ಣು ಹಾಗೂ ಹೂವುಗಳನ್ನು ವೀಕ್ಷಿಸಿದರು. ವಿವಿಧ ಬಣ್ಣದ ಹೂವುಗಳಿಂದ ಮಾಡಿದ ಗಂಡಬೇರುಂಡನ ಪ್ರದರ್ಶನ ನೋಡುಗರ ಗಮನ ಸೆಳೆಯಿತು.

ಮತ್ತೊಂದು ಮಳಿಗೆಯಲ್ಲಿ ತೆಂಗಿನ ಸಲಕರಣೆ ತಳಿಗಳಾದ ಅಭಯ ಗಂಗಾ, ಕಲ್ಪ ಶ್ರೇಷ್ಠ, ಕಲ್ಪ ಗಂಗಾ, ವಶಿಷ್ಟ ಗಂಗಾ ಪ್ರದರ್ಶನ, ಶುಂಟಿ, ಚಕ್ಕೆ ಎಲೆ, ಲವಂಗ, ಲಿಂಬು, ಎಣ್ಣೆ ಜೀರಿಗೆಯಿಂದ ಮಾಡಿದ ವಿವಿಧ ತರಹದ ಸುಗಂದದ ಎಣ್ಣೆಗಳು, ಕೋಯ್ಲೋತ್ತರ ತಂತ್ರಜ್ಞಾನದ ವಿಭಾಗದಲ್ಲಿ ಸರಳ ಸಲಕರಕರಣೆಗಳ ಪ್ರದರ್ಶನಗಳನ್ನು ಇಡಲಾಗಿತ್ತು.

ಕೋವಿಡ್ ಹಿನ್ನಲೆಯಲ್ಲಿ ಮೇಳದ ವೀಕ್ಷಣೆಗೆ ಆಫ್‌ಲೈನ್ ಮತ್ತು ಆನ್‌ಲೈನ್ ಮೂಲಕ ಅವಕಾಶ ಕಲ್ಪಿಸಲಾಗಿದ್ದು, ಸೀಮಿತ ಪ್ರಮಾಣದ ಪ್ರದರ್ಶನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಆನ್‌ಲೈನ್ ಮೂಲಕ ಮೂರು ದಿನಗಳ ಪ್ರದರ್ಶನವನ್ನು ಯೂಟೂಬ್, ವಾಟ್ಸಪ್, ಫೇಸ್‌ಬುಕ್ ಹಾಗೂ ತೋವಿವಿಯ ವೆಬ್‌ಸೈಟ್‌ನಲ್ಲಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು, ರೈತರು http://www.youtube.com/channel/UCTt-u1KmAJc6QlylvD0g, www.facebook.com/uhsbagalkot.edu.in,www.facebook.com/uhsbagalkot.edu.in/live ಲಿಂಕ್ ಬಳಸಿಕೊಂಡು ಪ್ರದರ್ಶನ ವೀಕ್ಷಿಸಬಹುದಾಗಿದೆ.