This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Politics News

ಮನೆ ಪ್ರಚಾರ 5 ಜನಕ್ಕೆ ಅವಕಾಶ

*ಗ್ರಾಮ ಪಂಚಾಯತ ಚುನಾವಣೆ-2020*

ನಿಮ್ಮ ಸುದ್ದಿ ಬಾಗಲಕೋಟೆ

ಕೋವಿಡ್-19 ಹಿನ್ನಲೆಯಲ್ಲಿ ರಾಜ್ಯ ಚುನಾವಣಾ ಆಯೋಗವು ಗ್ರಾಮ ಪಂಚಾಯತ ಚುನಾವಣೆಗೂ ಸಹ ಎಸ್‍ಓಪಿ ಹೊರಡಿಸಿದ್ದು, ಚುನಾವಣಾ ಅಭ್ಯರ್ಥಿಗಳ ಪ್ರಚಾರಕ್ಕೆ ಗರಿಷ್ಟ 5 ಜನರ ಬೆಂಬಲಿಗರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಮನೆ ಮನೆಗೆ ಭೇಟಿ ನೀಡಿ ಪ್ರಚಾರ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು ಪ್ರಚಾರ ಸಂದರ್ಭದಲ್ಲಿ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಫೇಸ್ ಮಾಸ್ಕ ಧರಿಸುವುದು ಕಡ್ಡಾಯವಾಗಿದೆ. ಪ್ರಚಾರಕ್ಕಾಗಿ ಮುದ್ರಿಸಿದ ಕರಪತ್ರಗಳನ್ನು ಹಂಚುವವರು ಮಾಸ್ಕ, ಸ್ಯಾನಿಟೈಜರ್ ಹಾಗೂ ಹ್ಯಾಂಡ್ ಗ್ಲೌಸ್ಸ್ ಧರಿಸಬೇಕು.  ಗುಂಪು ಗುಂಪಾಗಿ ಪ್ರಚಾರ ಮಾಡುವಂತಿಲ್ಲ.
ಸಭೆ, ಸಮಾರಂಭಗಳನ್ನು ತಮ್ಮ ಕ್ಷೇತ್ರಗಳಲ್ಲಿ ಕೋವಿಡ್-19 ನಿಯಂತ್ರಣ ಮಾರ್ಗಸೂಚಿಗಳನ್ನು ಅನುಸರಿಸಿ ನಡೆಸಬಹುದಾಗಿದೆ. ಕೋವಿಡ್ ಪಾಜಿಟಿವ್ ಇರುವ ಅಭ್ಯರ್ಥಿಗಳು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಪ್ರಚಾರ ಮಾಡಬಹುದಾಗಿದ್ದು, ಖುದ್ದಾಗಿ ಸಾಮಾನ್ಯ ಜನರೊಂದಿಗೆ, ಸಮುದಾಯದಲ್ಲಿ ಪ್ರಚಾರ ಮಾಡಲು ಅವಕಾಶವಿರುವದಿಲ್ಲ. ಆದಷ್ಟು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಪ್ರಚಾರ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

*ಮುನ್ನಚ್ಚರಿಕೆ ಕ್ರಮ* :
————–
ಕೋವಿಡ್-19 ಹಿನ್ನಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭಾಗವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಕೆಲವು ಮುನ್ನಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಪರಸ್ಪರ ಮುಟ್ಟದೆ ಶುಭಾಷಯಗಳನ್ನು ತಿಳಿಸುವುದು, ದೈಹಿಕ ಅಂತರ ಕಾಯ್ದುಕೊಳ್ಳುವುದು, ಮರು ಉಪಯೋಗಿಸಲ್ಪಡುವ ಫೇಸ್ ಕವರ್ ಅಥವಾ ಮಾಸ್ಕ ಬಳಸಬೇಕು. ಕಣ್ಣು, ಮೂರು ಮತ್ತು ಬಾಯಿಯನ್ನು ಮುಟ್ಟುವುದನ್ನು ಆದಷ್ಟು ತಡೆಯುವುದು, ಉಸಿರಾಟದ ನೈರ್ಮಲ್ಯತೆಯನ್ನು ಕಾಪಾಡುವುದು, ಕೈಗಳನ್ನು ಆಗ್ಗಿಂದಾಗ್ಗೆ ಸಂಪೂರ್ಣವಾಗಿ ತೊಳೆದುಕೊಳ್ಳಬೇಕು. ತಂಬಾಕು, ಖೈನಿ ಇತರೆ ಜಗಿಯುವುದನ್ನು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ಮಾಡಬಾರದು.
ಆಗಾಗ್ಗೆ ಮುಟ್ಟಲ್ಪಡುವ ಜಾಗಗಳನ್ನು ನಿಯಮಿತವಾಗಿ ಶುಚಿಗೊಳಿಸುವುದು. ಅನಗತ್ಯ ಪ್ರಯಾಣವನ್ನು ತಪ್ಪಿಸುವುದು. ಯಾರೊಬ್ಬರನ್ನು ತಾರತಮ್ಯದಿಂದ ನೋಡಬಾರದು. ಗುಂಪು ಗೂಡುವುದನ್ನು ನಿರಾಕರಿಸಿ ರಕ್ಷಣೆಗೆ ಆದ್ಯತೆ ನೀಡುವುದನ್ನು ಉತ್ತೇಜಿಸಬೇಕು. ಪರಿಶೀಲಿಸದ ಹಾಗೂ ನಕಾರಾತ್ಮಕ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸರಿಸುವಂತಿಲ್ಲ. ಕೋವಿಡ್-19 ಬಗ್ಗೆ ಅಧಿಕೃತ ಮಾಹಿತಿ ಪಡೆಯಬೇಕು. ಟೋಲ್ ಪ್ರೀ ರಾಷ್ಟ್ರೀಯ ದೂ.ಸಂ.1075, ರಾಜ್ಯ ಆರೋಗ್ಯ ಸಹಾಯವಾಣಿ 104 ಹಾಗೂ ಆಪ್ತಮಿತ್ರ ಸಹಾಯವಾಣಿ 14410 ವನ್ನು ಸಂಪರ್ಕಿಸಬಹದಾಗಿದೆ ಎಂದು ತಿಳಿಸಿದ್ದಾರೆ.

Nimma Suddi
";