This is the title of the web page
This is the title of the web page

Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

Crime News

ವಿಜಯಪುರ: ಎಟಿಎಂಗಳಲ್ಲಿ ಅಮಾಯಕ ರೈತರ ಹಣ ಎಗರಿಸುತ್ತಿದ್ದವ ಅರೆಸ್ಟ್​

ವಿಜಯಪುರ: ಎಟಿಎಂಗಳಲ್ಲಿ ಅಮಾಯಕ ರೈತರ ಹಣ ಎಗರಿಸುತ್ತಿದ್ದವ ಅರೆಸ್ಟ್​

ಬಿಜಾಪುರು: ಎಟಿಎಂ ಕಾರ್ಡ್ ಇದ್ದರೂ ಹಣ ಡ್ರಾ ಮಾಡಲು ಬಾರದೆ ಸಾಕಷ್ಟು ಜನ ಇಂದಿಗೂ ಎಟಿಎಂ ಗಳ ಬಳಿ ಪರದಾಟ ನಡೆಸುವುದು ಸಹಜ. ಹೀಗಾಗೆ ಇಂತವರನ್ನೆ ಟಾರ್ಗೆಟ್ ಮಾಡಿಕೊಂಡು ಎಟಿಎಂ ಕಾರ್ಡಗಳನ್ನೆ ಬದಲಿಸಿ ಸಾವಿರಾರು ರೂಪಾಯಿ ಹಣ ಎಗರಿಸುತ್ತಿದ್ದ ಖದೀಮನೊಬ್ಬ ನಿನ್ನೆ ಸೋಮವಾರ ಖಾಕಿ ಬಲೆಗೆ ಬಿದ್ದಿದ್ದು ಅಮಾಯಕ ರೈತನ ಸಾವಿರಾರು ರೂಪಾಯಿ ಹಣ ಹಾಗೂ ಚಿನ್ನದೊಂದಿಗೆ ತಗಲಾಕ್ಕೊಂಡಿದ್ದಾನೆ.

ಹಾಡಹಗಲೆ ರಾಜಾರೋಷವಾಗಿ ಚಿನ್ನದಂಗಡಿಗೆ ಬಂದ ಖದೀಮ ಅವರಪ್ಪನ ದುಡ್ಡು ಎಂಬಂತೆ ಕಾರ್ಡ್ ಸ್ವೈಪ್ ಮಾಡಿ ಭರ್ಜರಿ ಶಾಪಿಂಗ್ ಮಾಡ್ತಿದ್ದಾನೆ. ಆ ಉಂಗುರ ತೋರಿಸಿ, ಈ ಉಂಗುರ ತೋರಿಸಿ ಅಂತ ಬೇಕಾದ್ದನ್ನ ಪಡೆದುಕೊಂಡು ಹೋಗಿದ್ದ. ಆದರೆ ಇದೀಗ ಇದೇ ಆರೋಪಿ ಶ್ರೀ ಕೃಷ್ಣನ ಜನ್ಮಸ್ಥಾನ ಸೇರಲು ಮುಂದಾಗಿದ್ದಾ‌ನೆಈ ರೀತಿ ಪೊಲೀಸರ ಕೈಗೆ ತಗಲಾಕ್ಕೊಂಡು ಶ್ರೀ ಕೃಷ್ಣನ ಜನ್ಮಸ್ಥಾನ ಸೇರಲು ಮುಂದಾಗಿರುವ ಇವನ ಹೆಸರು ಗುರುಮೂರ್ತಿ.

ಈತ ಮೂಲತಃ ಚಿಂತಾಮಣಿ ನಿವಾಸಿ. ಇವನು ಕಳೆದು ತಿಂಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣಕ್ಕೆ ಬಂದಿದ್ದು ಎಟಿಎಂ ಬಳಿ ಹಣ ಡ್ರಾ ಮಾಡುವ ವಿಧಾನವನ್ನು ತಿಳಿಯದವರು ಯಾರಾದರೂ ಬರುತ್ತಾರಾ ಅಂತ ಹೊಂಚು ಹಾಕುತ್ತಾ ಕುಳಿತಿದ್ದ.

ಇದೇ ವೇಳೆ ರಾಜಣ್ಣ ಅನ್ನೂ ರೇಷ್ಮೆ ಬೆಳೆಯುವ ಈ ರೈತ ಗೂಡು ಮಾರಿದ ಹಣ ಡ್ರಾ ಮಾಡೋಕ್ಕೆ ಅಂತ ಎಟಿಎಂ ಗೆ ಬಂದು ಹಣ ಡ್ರಾ ಮಾಡಲಾಗದೆ ಪರದಾಡಿದ್ದಾನೆ. ಹೀಗಾಗಿ ರಾಜಣ್ಣನ ಸಹಾಯಕ್ಕೆ ಬರುವಂತೆ ಬಂದ ಭೂಪ ಮೊದಲಿಗೆ ರೈತನಿಗೆ ಹಣ ಡ್ರಾ ಮಾಡಿಕೊಟ್ಟಿದ್ದು ನಂತರ ರೈತನ ಕಾರ್ಡ್ ಪಡೆದು ಬೇರೋಂದು ಕಾರ್ಡ್ ನೀಡಿ ಎಸ್ಕೇಪ್ ಆಗಿದ್ದ. ಜೊತೆಗೆ ವಿಜಯಪುರ ಪಟ್ಟಣದ ಚಿನ್ನದಂಗಡಿ ಒಂದಕ್ಕೆ ಹೋಗಿದ್ದ ಭೂಪ ಅಲ್ಲಿ ಇದೇ ರೈತನ ಕಾರ್ಡ್ ಬಳಸಿ ಚಿನ್ನದ ಉಂಗುರ ಖರೀದಿಸಿ ಎಸ್ಕೇಪ್ ಆಗಿದ್ದ.

ಚಿನ್ನದಂಗಡಿಯಲ್ಲಿ ಉಂಗುರ ಖರೀದಿಸಿದ್ದಕ್ಕೆ ಹಣ ಪಾವತಿ ಮಾಡಿದ ಸಂದೇಶ ರೈತನ ಮೊಬೈಲ್ ಗೆ ಬಂದ ಹಿನ್ನೆಲೆಯಲ್ಲಿ ವಿಜಯಪುರ ಪೊಲೀಸ್ ಠಾಣೆಯಲ್ಲಿ ರೈತ ರಾಜಣ್ಣ ದೂರು ನೀಡಿದ್ದ. ಹೀಗಾಗಿ ದೂರು ಪಡೆದು ತನಿಖೆ ನಡೆಸಿದ ಪೊಲೀಸರು ಚಿಂತಾಮಣಿ ಮೂಲದ ಗುರುಮೂರ್ತಿ ಅನ್ನೋ ಈ ವಂಚಕನನ್ನ ಬಂದಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

Nimma Suddi
";