ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಬಾವಿ ಹಾಗೂ ಇಳಕಲ್ ತಾಲೂಕಿನ ಗುಡೂರ ಗ್ರಾಮದಲ್ಲಿ ಜು.೧೮ರಂದು ಶಾಸಕ ದೊಡ್ಡನಗೌಡ ಪಾಟೀಲ ನಾನಾ ಕಾಮಗಾರಿಗಳ ಉದ್ಘಾಟನೆ ಹಾಗೂ ಭೂಮಿ ಪೂಜೆ ನೆರವೇರಿಸಲಿದ್ದಾರೆ.
ಬೆಳಗ್ಗೆ ೧೦ಕ್ಕೆ ಗುಡೂರ (ಎಸ್‌ಸಿ) ಗ್ರಾಮದಲ್ಲಿ ನೂತನ ಪ್ರವಾಸಿ ಮಂದಿರ ಉದ್ಘಾಟನೆ, ಗ್ರಾಮ ಪಂಚಾಯಿತಿಯ ನಾನಾ ಯಂತ್ರೋಪಕರಣಗಳ ಪೂಜೆ ಹಾಗೂ ಮುರಾರ್ಜಿ ದೇಸಾಯಿ ಶಾಲೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ.
೧೧ಕ್ಕೆ ಸೂಳೇಬಾವಿಯಲ್ಲಿ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ವಿಭಾಗದಿಂದ ಜಲ ಜೀವನ್ ಮಿಷನ್ ಅನುದಾನದಲ್ಲಿ ೨ ಕೋಟಿ ೫೫ ಲಕ್ಷ ಮೊತ್ತದ ೧,೯೩೬ ಮನೆಗಳಿಗೆ ಕಾರ್ಯಾತ್ಮಕ ನಳ ಜೋಡನೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ.
ಸೂಳೇಬಾವಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಅಂದಾಜು ೨೧.೨೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಕೋಣೆ ಹಾಗೂ ಹೆಣ್ಣು ಮಕ್ಕಳ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟನೆ ನೆರವೇರಿಸಲಿದ್ದಾರೆ. ಎಸ್ಡಿಎಂಸಿ ಅಧ್ಯಕ್ಷ ಜಗದೀಶ ಎಮ್ಮಿ, ತಾಲೂಕು ಒಬಿಸಿ ಘಟಕದ ಅಧ್ಯಕ್ಷ ನಾಗೇಶ ಗಂಜಿಹಾಳ, ಯಮನಪ್ಪ ಹುಲ್ಯಾಳ, ಗುತ್ತಿಗೆದಾರ ಐ.ಎಂ.ಮುಗಳೊಳ್ಳಿ, ಮುಖ್ಯಗುರು ಪಿ.ಎಂ.ಪತ್ತಾರ, ಎ.ವೈ.ಆಲೂರ ಇತರರು ಉಪಸ್ಥಿತರಿರಲಿದ್ದಾರೆ.