This is the title of the web page
This is the title of the web page

Live Stream

January 2025
S M T W T F S
 1234
567891011
12131415161718
19202122232425
262728293031  

| Latest Version 9.4.1 |

National News

ಬಡತನ ತೊಡೆದು ಹಾಕುವ ನಿಟ್ಟಿನಲ್ಲಿ ಭಾರತ ಅತ್ಯುತ್ತಮ ಸಾಧನೆ

ಬಡತನ ತೊಡೆದು ಹಾಕುವ ನಿಟ್ಟಿನಲ್ಲಿ ಭಾರತ ಅತ್ಯುತ್ತಮ ಸಾಧನೆ

ನವದೆಹಲಿ: ತೀವ್ರ ಅಥವಾ ಕಡು ಬಡತನ ತೊಡೆದು ಹಾಕುವ ನಿಟ್ಟಿನಲ್ಲಿ ಭಾರತ ಅತ್ಯುತ್ತಮ ಸಾಧನೆ ಮಾಡಿರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

2022 – 23ನೇ ಸಾಲಿನ ಅನುಭೋಗಿ ಬಳಕೆಯ ವೆಚ್ಚ ದತ್ತಾಂಶವನ್ನು ಬಿಡುಗಡೆ ಮಾಡಲಾಗಿದ್ದು, ಇದು 10 ವರ್ಷ ಅವಧಿಯ ಬಡತನ ಸಂಬಂಧಿತ ಸಮೀಕ್ಷೆ ಆಧಾರಿತ ಮಾಹಿತಿಯನ್ನು ಒದಗಿಸಿದೆ.

ಈ ಹಿಂದಿನ ಅಧಿಕೃತ ಸಮೀಕ್ಷೆಯನ್ನು 2011 12ನೇ ಸಾಲಿನಲ್ಲಿ ನಡೆಸಲಾಗಿದ್ದು, ಭಾರತವು ಅನುಭೋಗಿ ಅಥವಾ ಬಳಕೆಯ ವೆಚ್ಚಗಳನ್ನು ಅಂದಾಜು ಮಾಡಲು ಎರಡು ವಿಭಿನ್ನ ವಿಧಾನಗಳನ್ನು ಅನುಸರಿಸುತ್ತಿದ್ದು, ಅವುಗಳು ಯೂನಿಫಾರ್ಮ್ ರಿಕಾಲ್ ಪಿರಿಯಡ್ (URP) ಮತ್ತು ಅಕ್ಯುರೇಟ್ ಮಾಡಿಫೈಡ್ ಮಿಕ್ಸೆಡ್ ರಿಕಾಲ್ ಪಿರಿಯಡ್ ಆಗಿವೆ.

30 ದಿನಗಳ ಅವಧಿಗೆ ಕುಟುಂಬಗಳು ಮಾಡಿದ ವೆಚ್ಚದ ಕುರಿತು ಕೇಳಿದ ಪ್ರಶ್ನೆಗಳಿಗೆ ದೊರೆತ ಉತ್ತರದ ಆಧಾರದಲ್ಲಿ ಯುಆರ್​ಪಿ ವಿಧಾನ ವರದಿ ಸಿದ್ಧಪಡಿಸಲಾಗಿದೆ. ಬೇಗನೆ ಹಾಳಾಗುವ ಸರಕುಗಳಿಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗಳಿಗೆ ದೊರೆತ ಉತ್ತರಗಳನ್ನು ಬಳಸಿಕೊಂಡು ಎಂಎಂಆರ್​ಪಿ ವಿಧಾನದ ವರದಿ ಸಿದ್ಧಪಡಿಸಲಾಗಿದೆ.

ಹಿಂದೆಲ್ಲ ಈ ಎರಡೂ ವಿಧಾನಗಳಲ್ಲಿ ಸಮೀಕ್ಷೆ ನಡೆಸುತ್ತಿದ್ದ ಭಾರತ ಈ ಬಾರಿ ಇತರ ದೇಶಗಳ ಗುಣಮಟ್ಟ ಮಾನದಂಡ ಆಧಾರಿತ ಎಂಎಂಆರ್​ಪಿ ವಿಧಾನವನ್ನೇ ಆಯ್ಕೆ ಮಾಡಿಕೊಂಡಿತ್ತು ಎಂದು ‘ಬ್ರೂಕಿಂಗ್ಸ್ ಡಾಟ್ ಎಜು’ ವರದಿ ಮಾಡಿದೆ.

ಯುಆರ್​ಪಿ ವಿಧಾನದಲ್ಲಿ ಸಮೀಕ್ಷೆ ಮಾಡಿದ್ದ 1977-78ನೇ ಸಾಲಿನ ಬಡತನ ವರದಿ ಮತ್ತು 2011-12ನೇ ಸಾಲಿನ ವರದಿಯನ್ನು ತುಲನೆ ಮಾಡಿಕೊಂಡು 2022-23ನೇ ಸಾಲಿನ ವರದಿಯನ್ನು ಎಂಎಂಆರ್​​ಪಿ ವಿಧಾನದಲ್ಲಿ ಸಿದ್ಧಪಡಿಸಲಾಗಿದೆ.

ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗೆ ವಿಶ್ವಬ್ಯಾಂಕ್ ನಿಗದಿಪಡಿಸಿದ ಮಾನದಂಡದ ಪ್ರಕಾರ ಬಡತನದ ಅಂದಾಜು ಮಾಡಲಾಗಿದೆ ಎಂದು ವರದಿ ತಿಳಿಸಿದೆ.ರಿಲಯಲ್ ಪರ್ ಕ್ಯಾಪಿಟಾ ಕನ್ಸಂಪ್ಷನ್ ಗ್ರೋತ್ 2011-12ರಿಂದ ವಾರ್ಷಿಕ ಶೇ 2.9ರ ಬೆಳವಣಿಗೆ ದಾಖಲಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಇದು ಶೇ 3.1ರ ಬೆಳವಣಿಗೆ ದಾಖಲಿಸಿದೆ.

Nimma Suddi
";