ಕ್ಯಾಂಡಿ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡವು ಸೋಮವಾರ ಕ್ರಿಕೆಟ್ ಹಸುಗೂಸು ನೆರೆಯ ನೇಪಾಳದ ಸವಾಲು ಎದುರಿಸಲಿದೆ.
ಶ್ರೀಲಂಕಾದ ಕ್ಯಾಂಡಿಯಲ್ಲಿ (ಪಲ್ಲೆಕೆಲೆ) ನಡೆಯಲಿರುವ ಟೂರ್ನಿಯ 5ನೇ ಪಂದ್ಯದಲ್ಲಿ ಕ್ರಿಕೆಟ್‌ನಲ್ಲಿ ಅಂಬೆಗಾಲಿಡುತ್ತಿರುವ ನೇಪಾಳ ತಂಡ ಭಾರತಕ್ಕೆ ಸುಲಭ ತುತ್ತಾಗುವ ಸಾಧ್ಯತೆಯಿದೆ.
ಮೊದಲ ಬಾರಿಗೆ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವ ನೇಪಾಳ ತಂಡ ಪ್ರಬಲ ಎದುರಾಳಿ ಭಾರತಕ್ಕೆ ಸಡ್ಡು ಹೊಡೆಯುವ ಉತ್ಸಾಹದಲ್ಲಿದೆ. ಮುಲ್ತಾನ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ವಿರುದ್ಧ ಹೀನಾಯ ಸೋಲಿನ ಬಳಿಕವೂ ಅತ್ಯುತ್ಸಾಹದೊಂದಿಗೆ ಕ್ಯಾಂಡಿಗೆ ಆಗಮಿಸಿದ್ದು, ಸತತ ಅಭ್ಯಾಸ ನಡೆಸಿದೆ.
ಪಾಕಿಸ್ತಾನ ವಿರುದ್ಧ ನಡೆದ ಮೊದಲ ಪಂದ್ಯದ ಅರ್ಧಕ್ಕೆ ರದ್ದುಗೊಂಡಿದ್ದರಿಂದ ಭಾರತ ತಂಡಕ್ಕೆ ಪೂರ್ಣ ಅಂಕ ಲಭಿಸಲಿಲ್ಲಘಿ. ಜತೆಗೆ ಬೌಲರ್‌ಗಳಿಗೆ ಸೂಕ್ತ ಅಭ್ಯಾಸವೂ ಸಿಗದಂತಾಗಿದೆ. ಇಂದಿನ ಪಂದ್ಯ ಗೆದ್ದು ಅಗ್ರಸ್ಥಾನಿಯಾಗಿ ಸೂಪರ್ 4ರ ಹಂತ ಪ್ರವೇಶ ಮಾಡುವ ಇರಾದೆಯೊಂದಿಗೆ ರೋಹಿತ್ ಶರ್ಮಾ ಬಳಕ ಅಂಗಳಕ್ಕಿಳಿಯಲು ಸಜ್ಜಾಗಿದೆ. ಅಗ್ರ ಪಂಕ್ತಿಯ ದಾಂಡಿಗರ ಬ್ಯಾಟಿಂಗ್ ವೈಲ್ಯ ತಂಡದ ಮ್ಯಾನೇಜ್‌ಮೆಂಟ್‌ಗೆ ತಲೆ ಬಿಸಿಯಾಗಿದೆ.
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿಲವಾಗಿದ್ದ ಅಗ್ರ ಕ್ರಮಾಂಕದ ಮೂವರು ಆಟಗಾರರು (ರೋಹಿತ್, ವಿರಾಟ್, ಅಯ್ಯರ್) ತಮ್ಮ ಲಯ ಕಂಡುಕೊಳ್ಳಲು ನೇಪಾಳ ವಿರುದ್ಧದ ಪಂದ್ಯ ಸಹಕಾರಿಯಾಗಲಿದೆ. ಸೂಪರ್ 4ರ ಘಟ್ಟದಲ್ಲಿ ಎದುರಾಗಲಿರುವ ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶದಂತ ಪ್ರಬಲ ತಂಡಗಳ ವಿರುದ್ಧದ ಪಂದ್ಯಗಳಿಗೆ ಟಾಪ್ ಆರ್ಡರ್ ಆಟಗಾರರಿಗೆ ಅಗ್ನಿ ಪರೀಕ್ಷೆಯಾಗಲಿದೆ. ಜತೆಗೆ ಭಾರತೀಯ ಆಟಗಾರರಿಗೆ ಅಭ್ಯಾಸ ಪಂದ್ಯವಾಗಲಿದೆ.