ಕೊಡಗು: ರಾಜ್ಯದಲ್ಲಿ ಸೈಬರ್ ವಂಚನೆಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರಲ್ಲಂತೂ ಬೆಂಗಳೂರಿನಲ್ಲಿ ಸೈಬರ್ ವಂಚನೆ ಅಧಿಕವಾಗಿದೆ. ಇದೀಗ ಈ ಸೈಬರ್ ವಂಚನೆ ಜಾಲ ಕೊಡಗು ಜಿಲ್ಲೆಗೂ ವ್ಯಾಪಿಸಿದೆ ಎಂದು ಮಾಹಿತಿ ಕಂಡು ಬಂದಿದೆ.
ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮದ ದೇವಯ್ಯ ಎಂಬುವರು ಸೈಬರ್ ವಂಚನೆ ಜಾಲದಲ್ಲಿ ಸಿಲುಕಿ ಕೋಟ್ಯಾಂತರ ರೂಪಾಯಿ ಕಳೆದುಕೊಂಡಿದ್ದಾರೆ.
ಕರಡಿಗೋಡು ಗ್ರಾಮದ ದೇವಯ್ಯ ದೇವಯ್ಯ (70) ಅವರಿಗೆ ವಂಚಕರು ಕರೆ ಮಾಡಿ ತಾವು ಫೆಡೆಕ್ಸ್ ಕೊರಿಯರ್ ಸಂಸ್ಥೆಯಿಂದ ಕರೆ ಮಾಡುತ್ತಿರುವುದು ಎಂದು ಪರಿಚಯ ಮಾಡಿಕೊಂಡಿದ್ದು, ಬಳಿಕ ನಿಮ್ಮ ಹೆಸರಿಗೆ ಡ್ರಗ್ಸ್ ಬಂದಿದೆ ಎಂದಿದ್ದಾರೆ. ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ಸಂಕಷ್ಟವಾಗಲಿದೆ ಎಂದಿದ್ದಾರೆ. ವಂಚಕರ ಮಾತಿಗೆ ದೇವಯ್ಯ ಅವರು ಬೆದರಿಸಿದ್ದಾರೆ.
ಬಳಿಕ ವಂಚಕರು ತಮ್ಮ ಖಾತೆಗೆ ಎರಡು ಹಂತದಲ್ಲಿ ಒಟ್ಟು 2.20 ಕೋಟಿ ರೂ. ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಬಳಿಕ ದೇವಯ್ಯ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಇದೀಗ ದೇವಯ್ಯ ಮಡಿಕೇರಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.