This is the title of the web page
This is the title of the web page

Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

Politics News

ಹುನಗುಂದ ಕ್ಷೇತ್ರ ಮಾದರಿ ಕ್ಷೇತ್ರವಾಗಿಸೋಣ

ಎಸ್‌ಆರ್ ನವಲಿಹಿರೇಮಠ ಕನಸು

ನಿಮ್ಮ ಸುದ್ದಿ ಬಾಗಲಕೋಟೆ

ಕ್ಷೇತ್ರದ ಪ್ರತಿನಿಧಿಯಾಗಿ ಜನರ ಸುಖ ಬಯಸುವವನೇ ನಿಜವಾದ ಜನಪ್ರತಿನಿಯಾಗಿದ್ದು ಹುನಗುಂದ ಕ್ಷೇತ್ರದಲ್ಲಿನ ಜನಪ್ರತಿನಿಧಿಗಳು ಅದನ್ನು ಮರೆತಿದ್ದಾರೆ ಎಂದು ಎಸ್‌ಆರ್‌ಎನ್‌ಇ ಫೌಂಡೇಶನ್ ಸಂಸ್ಥಾಪಕ ಎಸ್.ಆರ್.ನವಲಿಹಿರೇಮಠ ಹೇಳಿದರು.

ಜಿಲ್ಲೆಯ ಇಳಕಲ್ ತಾಲೂಕಿನ ಗುಡೂರ (ಎಸ್‌ಸಿ) ಗ್ರಾಮದಲ್ಲಿ ಗ್ರಾಪಂ ಸ್ವಚ್ಚತಾ ಸಿಬ್ಬಂದಿ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು, ಹುನಗುಂದ ತಾಲೂಕಿನಲ್ಲಿ ಎಲ್ಲ ಸಂಪತ್ತಿದ್ದು ಆದರೆ ಬಡವರ ಬಗ್ಗೆ ಕಾಳಜಿ ಮಾಡುವ ಜನಪ್ರತಿನಿಧಿಗಳಿಲ್ಲ. ಮಾಜಿ ಹಾಗೂ ಹಾಲಿ ಸೇರಿದಂತೆ ಎಲ್ಲರೂ ತಮ್ಮ ಕುಟುಂಬದ ಕಾಳಜಿ ತೆಗೆದುಕೊಂಡರೇ ಹೊರತು ಕೊರೊನಾ ಕಾಲಘಟ್ಟದಲ್ಲಿ ಬಡವರ ಬಗ್ಗೆ ಕಾಳಜಿ ತೆಗೆದುಕೊಳ್ಳಲಿಲ್ಲ. ಕ್ಷೇತ್ರದ ಗ್ರಾಮೀಣ ಜನತೆ ಕಷ್ಟಸುಖ ಕೇಳದ ಇಂತಹ ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸಿ ಮುಂದಿನ ದಿನದಲ್ಲಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸೋಣ ಎಂದರು.

ಮಹಾಮಾರಿ ಕೊರೊನಾ ೨ನೇ ಅಲೆ ಎಲ್ಲರಿಗೂ ದೊಡ್ಡ ಹೊಡೆತ ನೀಡಿದೆ. ಸಾಕಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ. ಅದನ್ನು ತೊಡೆದು ಹಾಕಲು ಮುಖ್ಯವಾಗಿ ಸ್ವಚ್ಚತೆ ಎಲ್ಲರಲ್ಲೂ ಒಡಮೂಡಬೇಕು. ಅಂತಹ ಸ್ವಚ್ಚತಾ ಕಾರ್ಯದಲ್ಲಿ ತೊಡಗಿದವರ ಅಳಿಲು ಸೇವೆಗೆ ಮುಂದಾಗಿದ್ದು ಬಡವರಿಗೆ ಅಧಿಕಾರ ದೊರೆತಾಗ ಮಾತ್ರ ಇಂತಹ ಕೆಲಸ ಮಾಡಲು ಸಾಧ್ಯ. ಅಂತಹ ಸೇವೆ ಗುಡೂರ ಗ್ರಾಮಕ್ಕೆ ಒದಗಿದೆ ಎಂದರು.

ಮುಂಬರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.೯೦ಕ್ಕಿಂತ ಹೆಚ್ಚು ಅಂಕ ಗಳಿಸಿ ಮುಂದಿನ ಶೈಕ್ಷಣಿಕ ಹಂತಕ್ಕೆ ಸಾಗಲು ಅಣಿಯಾಗುತ್ತಿರುವ ಬಡ ಮಕ್ಕಳನ್ನು ಎಸ್‌ಆರ್‌ಎನ್‌ಇ ಫೌಂಡೇಶನ್ ವತಿಯಿಂದ ದತ್ತು ತೆಗೆದುಕೊಳ್ಳಲಾಗುವುದು.

ತಾಲೂಕಿನ ಬಡವರಿಗೆ ಅನುಕೂಲಕ್ಕಾಗಿ ಈಗಾಗಲೆ ಆಂಬುಲನ್ಸ್ ನೀಡಲಾಗಿದೆ. ಮುಂದಿನ ೧೫ ದಿನದಲ್ಲಿ ಸ್ಥಳದಲ್ಲಿ ಕಣ್ಣಿನ ತಪಾಸಣೆ ಮಾಡುವ ೪೦ ಲಕ್ಷ ರೂ. ವೆಚ್ಚದ ವಾಹನವೊಂದು ಕ್ಷೇತ್ರಕ್ಕೆ ಬರಲಿದ್ದು ಅದನ್ನು ಗುಡೂರ ಗ್ರಾಮದಿಂದಲೇ ಸೇವೆಗೆ ಚಾಲನೆ ನೀಡಲಾಗುವುದು. ನಿಮ್ಮೆಲ್ಲರ ಆಶೀರ್ವಾದದಿಂದ ಕ್ಷೇತ್ರವನ್ನು ಮಾದರಿಯನ್ನಾಗಿಸೋಣ ಎನ್ನುವ ಮೂಲಕ ಮುಂದಿನ ಚುನಾವಣೆಗೆ ಸ್ಪರ್ಧೆಯೊಡ್ಡುವುದಾಗಿ ಪರೋಕ್ಷೆ ಹೇಳಿಕೆ ನೀಡಿದರು.

ಗ್ರಾಪಂ ಅಧ್ಯಕ್ಷೆ ಚಾಂದನಿ ಇಟಗಿ, ಉಪಾಧ್ಯಕ್ಷ ಹನಮಂತ ತೊಟ್ಲಪ್ಪನವರ, ಸದಸ್ಯರಾದ ರಫೀಕ ಇಟಗಿ, ಶಶಿಧರ ಮ್ಯಾಗೇರಿ, ಹಸೀನಾ ಜರತಾರಿ, ಸಲೀಂ ಜರತಾರಿ, ಫಕೀರಪ್ಪ ತೊಟ್ಲಪ್ಪನವರ, ಮುತ್ತಣ್ಣ ಮಿಟ್ಲಕೋಡ, ಅಬ್ದುಲರಜಾಕ ಸರಕಾಜೆ, ಮಹಾಂತೇಶ ಕುಂಬಾರ, ಶರಣಯ್ಯ ಮಠಪತಿ ಇತರರು ಇದ್ದರು.

 

Nimma Suddi
";