ನಿಮ್ಮ ಸುದ್ದಿ ವಿಜಯಪುರ
24 ಗಂಟೆಯೊಳಗಾಗಿ ಸಿಬಿಐಗೆ ನೀಡಲು ಯತ್ನಾಳ ಆಗ್ರಹ*
ವಿಜಯಪುರ : ಕಾರು ಚಾಲಕನ ಹತ್ಯೆ ಬಗ್ಗೆ ಕ್ಯಾಬಿನೆಟ್ ಸಚಿವ ಮುರಗೇಶ ನಿರಾಣಿ ಮಾಡಿರುವ ಆರೋಪ ಪ್ರಕರಣವನ್ನು 24 ಗಂಟೆಯೊಳಗಾಗಿ ಸಿಬಿಐ ತನಿಖೆಗೆ ಒಳಪಡಿಸಲು ಕೇಂದ್ರಕ್ಕೆ ತಕ್ಷಣ ಶಿಾರಸು ಮಾಡಬೇಕೆಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದರು.
ನಗರದಲ್ಲಿ ಭಾನುವಾರ ಮಾತನಾಡಿದ ಅವರು, ಜ. 14 ರಂದು ತಮ್ಮ ಸಂಪುಟದ ಕ್ಯಾಬಿನೆಟ್ ಸಚಿವರೊಬ್ಬರು ವಿಜಯಪುರದ ಕಾರು ಚಾಲಕನ ಕೊಲೆ ಮಾಡಿರುವ ಕುರಿತು ಮಾಧ್ಯಮಗಳೆದುರು ನನ್ನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇಂಥ ವೃಥಾ ಆರೋಪಗಳಿಂದ ಸರಕಾರ ಮತ್ತು ರಾಜ್ಯದ ಜನತೆಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದವರು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾಗಿ ತಿಳಿಸಿದರು.
ರಾಜ್ಯ ಹಾಗೂ ಕೇಂದ್ರದಲ್ಲಿ ನಮ್ಮದೇ ಸರಕಾರವಿದೆ. ಇದರಿಂದ ದೇಶದ ಜನತೆಗೆ ಸತ್ಯಾಸತ್ಯತೆ ಗೊತ್ತಾಗಬೇಕು. ಹಾಗಾಗಿ ಆ ಸತ್ಯಾಸತ್ಯತೆಯನ್ನು ದೇಶದ ಜನತೆಗೆ ತಿಳಿಸಲು ಕೇವಲ 24 ಗಂಟೆಯಲ್ಲೇ ಈ ಪ್ರಕರಣವನ್ನು ತಾವು ಸಿಬಿಐಗೆ ಒಳಪಡಿಸಲು ಕೇಂದ್ರಕ್ಕೆ ತಕ್ಷಣ ಶಿಾರಸು ಮಾಡಬೇಕು ಎಂದು ಸಿಎಂ ಅವರಿಗೆ ಒತ್ತಾಯಿಸಿದರು.
ಈ ರೀತಿ ಸುಳ್ಳು ಆರೋಪ ಮಾಡಿ, ಜನತೆಗೆ ತಪ್ಪು ಸಂದೇಶ ನೀಡುವ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸುಳ್ಳು ಆರೋಪ ಮಾಡಿದ ಸಚಿವನನ್ನು ಸಂಪುಟದಿಂದ ತಕ್ಷಣ ವಜಾಗೊಳಿಸಬೇಕೆಂದು ಪತ್ರದಲ್ಲಿ ಉಲ್ಲೇಖಿಸಿದ್ದಾಗಿ ಯತ್ನಾಳ ತಿಳಿಸಿದರು.