This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Politics News

ಮಾಜಿ ಮುಖ್ಯಮಂತ್ರಿಗಳೊಬ್ಬರು ತರಾತುರಿಯಲ್ಲಿ ಪುನಃ ಬಿಜೆಪಿಗೆ ಹಿಂದಿರುಗಿರುವುದು ಶೋಭೆಯಲ್ಲ – ಎಂ.ಬಿ ಪಾಟೀಲ್‌ ವಿಷಾದ

ಮಾಜಿ ಮುಖ್ಯಮಂತ್ರಿಗಳೊಬ್ಬರು ತರಾತುರಿಯಲ್ಲಿ ಪುನಃ ಬಿಜೆಪಿಗೆ ಹಿಂದಿರುಗಿರುವುದು ಶೋಭೆಯಲ್ಲ – ಎಂ.ಬಿ ಪಾಟೀಲ್‌ ವಿಷಾದ

ಬೆಂಗಳೂರು: ಜಗದೀಶ್ ಶೆಟ್ಟರ್ ಅವರಂಥ ಹಿರಿಯರು ಮತ್ತು ಮಾಜಿ ಮುಖ್ಯಮಂತ್ರಿಗಳೊಬ್ಬರು ತರಾತುರಿಯಲ್ಲಿ ಪುನಃ ಬಿಜೆಪಿಗೆ ಹಿಂದಿರುಗಿ ಹೋಗಿರುವುದು ಅವರಿಗೆ ಶೋಭೆಯಲ್ಲ. ಇದರ ಬಗ್ಗೆ ಅವರು ಯೋಚಿಸಬೇಕಿತ್ತು. ಬಿಜೆಪಿಯಿಂದ ಅಪಮಾನಿತರಾದಾಗ ಕಾಂಗ್ರೆಸ್ ಅವರನ್ನು ಚೆನ್ನಾಗಿ ನಡೆಸಿಕೊಂಡಿತ್ತು ಎಂದು ಸಚಿವ ಎಂ ಬಿ ಪಾಟೀಲ ಪ್ರತಿಕ್ರಿಯಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಗುರುವಾರ ಬೆಳಿಗ್ಗೆ ನಡೆದ ಅನಿರೀಕ್ಷಿತ ರಾಜಕೀಯ ಬೆಳವಣಿಗೆ ಕುರಿತು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ” ಕಾಂಗ್ರೆಸ್ಸಿನಲ್ಲಿ ಅವರಿಗೆ ಒಳ್ಳೆಯ ಭವಿಷ್ಯವಿತ್ತು. ಲೋಕಸಭೆ ಚುನಾವಣೆಯಲ್ಲಿ ಅವರಿಗೆ ಪಕ್ಷದಿಂದ ಧಾರವಾಡ ಕ್ಷೇತ್ರದ ಟಿಕೆಟ್ ಕೊಡಬೇಕೆಂಬ ಆಲೋಚನೆ ಇತ್ತು. ಬಿಜೆಪಿ ಅವರ ಮೇಲೆ ಒತ್ತಡ ಹೇರಿತೋ, ಆಮಿಷ ಒಡ್ಡಿತೋ ಗೊತ್ತಿಲ್ಲ” ಎಂದರು..

ಶೆಟ್ಟರ್ ಅವರು ಮರಳಿ ಬಿಜೆಪಿಗೆ ಹೋಗುತ್ತಾರೆಂದು ಸುದ್ದಿ ಮಾಧ್ಯಮಗಳಲ್ಲೇ ಬರುತ್ತಲೇ ಇತ್ತು. ಆದರೆ ನಾವು ಅದನ್ನು ನಂಬಿರಲಿಲ್ಲ. ಈಗ ಅವರು ನಮ್ಮ ಪಕ್ಷವನ್ನು ತೊರೆದಿರುವುದು ಆಶ್ಚರ್ಯಕರ ಮತ್ತು ಅನಿರೀಕ್ಷಿತ. ಲೋಕಸಭೆ ಚುನಾವಣೆಯಲ್ಲಿ ಲಿಂಗಾಯತರ ಮತಗಳ ಮೇಲೆ ಕಣ್ಣಿಟ್ಟುಕೊಂಡು ಬಿಜೆಪಿ ನಾಯಕರು ಹೀಗೆ ಗಾಳ ಹಾಕಿದ್ದಾರೆ ಎನಿಸುತ್ತದೆ ಎಂದು ಪಾಟೀಲ ವಿಶ್ಲೇಷಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅವರಿಗೆ ಟಿಕೆಟ್ಟನ್ನೇ ನಿರಾಕರಿಸಿತ್ತು. ಆಗ ನಾವು ಅವರನ್ನು ಕಾಂಗ್ರೆಸ್ಸಿಗೆ ಕರೆತಂದೆವು, ಚುನಾವಣೆಯಲ್ಲಿ ಸೋತರೂ ಅವರನ್ನು ಎಂಎಲ್ಸಿ ಮಾಡಿದ್ದೆವು. ಪಕ್ಷದ ವೇದಿಕೆಗಳಲ್ಲಿ ಆದ್ಯತೆ ಕೊಟ್ಟಿದ್ದೆವು. ಅವರ ಅಭಿಪ್ರಾಯಗಳಿಗೆ ಬೆಲೆ ಕೊಡುತ್ತಿದ್ದು, ಶೆಟ್ಟರ್ ಹೀಗೇಕೆ ಮಾಡಿದರೋ ಗೊತ್ತಿಲ್ಲ ಎಂದು ಅವರು ಬೇಸರ ಹೊರಹಾಕಿದರು.

 

Nimma Suddi
";