ನಿಮ್ಮ ಸುದ್ದಿ ಬಾಗಲಕೋಟೆ
ವಿವಾದಿತ ಹೇಳಿಕೆ ನೀಡಿದ್ದ ಎಐಎಂಐಎಂ ಪಕ್ಷದ ರಾಜ್ಯಾಧ್ಯಕ್ಷ ಉಸ್ಮಾನಗಣಿ ಹುಮ್ನಾಬಾದ್ ಕೊನೆಗೂ ಅರೆಸ್ಟ್ ಆಗಿದ್ದಾನೆ.
ಬಾಗಲಕೋಟೆ ಜಿಲ್ಲೆಯ ಇಲಕಲ್ ಠಾಣೆಯ ಪೋಲಿಸರಿಂದ ಅರೆಸ್ಟ್ ಆಗಿದೆ.
ಭಾರತ ಮಾತೆ ಬಗ್ಗೆ ಮಾತನಾಡುತ್ತ ಒಬ್ಬರಿಗೆ ಎಷ್ಟು ಜನ ತಾಯಂದಿರು ಎಂಬ ವಿವಾದಾತ್ಮಕ ಹೇಳಿಕೆಯನ್ನು ಉಸ್ಮಾನಗಣಿ ನೀಡಿದ್ದರು.
ಕೇಸ್ ದಾಖಲಿಸುತ್ತಲೇ ಕಣ್ಮರೆಯಾಗಿದ್ದ ಉಸ್ಮಾನಗಣಿ ಬೇಲ್ ನೊಂದಿಗೆ ಪೋಲಿಸರ ಮುಂದೆ ಹಾಜರ್ ಆಗಿದ್ದರು. ಬೇಲ್ ಒಪ್ಪಿದ ಪೋಲಿಸರು.
ಇದರ ಬೆನ್ನಲ್ಲೆ ಉಸ್ಮಾನಗಣಿ ವಿರುದ್ಧ 110 ಮತ್ತು 151 ಸಿ.ಆರ್.ಪಿ.ಸಿ ಅಡಿಯಲ್ಲಿ ಮುಂಜಾಗ್ರತಾ ವರದಿ ಅಡಿ ಕೇಸ್ ದಾಖಲಾಗಿತ್ತು.
ರಾತ್ರಿ ತಹಸೀಲ್ದಾರ್ ಬಸವರಾಜ್ ಅವರ ಮುಂದೆ ಉಸ್ಮಾನಗಣಿಯನ್ನು ಪೊಲೀಸರು ಹಾಜರುಪಡಿಸಿದರು.
110 ಕಲಂನಡಿ ಜಾಮೀನು ನಿರಾಕರಿಸಿದ ತಹಸೀಲ್ದಾರ್ ರಿಂದ ಫೆ.9ರ ವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದರು.
ತಹಶೀಲ್ದಾರ ಆದೇಶದ ಬೆನ್ನಲ್ಲೆ ಉಸ್ಮಾನಗಣಿಯನ್ನ ಬಾಗಲಕೋಟೆ ಜಿಲ್ಲಾ ಕಾರಾಗೃಹಕ್ಕೆ ಪೊಲೀಸರು ಕರೆದೊಯ್ದರು.
ಸದ್ಯ ಬಾಗಲಕೋಟೆಯ ನವನಗರದಲ್ಲಿರುವ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಉಸ್ಮಾನಗಣಿ ಫೆ.9ರ ವರೆಗೆ ಕಾಲ ಕಳೆಯುವುದು ಅನಿವಾರ್ಯವಾಗಿದೆ.