ನಿಮ್ಮ ಸುದ್ದಿ ಬಾಗಲಕೋಟೆ
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲರಿಗೆ ಟಿಕೆಟ್ ಕೈ ತಪ್ಪಿದೆ.
ಡಿಸೆಂಬರ್ 10ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು ಬಾಗಲಕೋಟೆ-ವಿಜಯಪುರ ಅವಳಿ ಜಿಲ್ಲೆಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸುನೀಲಗೌಡ ಪಾಟೀಲ ಆಯ್ಕೆ ಆಗಿದ್ದಾರೆ.
25 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ನ.23 ಕೊನೆ ದಿನವಾಗಿದೆ.
ಎಸ್.ಆರ್.ಪಾಟೀಲ ಹಾಗೂ ಸುನೀಲಗೌಡ ಪಾಟೀಲ ಇಬ್ಬರಿಗೂ ಟಿಕೆಟ್ ದೊರೆಯುತ್ತದೆ ಎಂದೇ ಕಾಂಗ್ರೆಸ್ ವಲಯದಲ್ಲಿ ಮಾತು ಕೇಳಿ ಬಂದಿತ್ತು. ಆದರೆ ಬಿಡುಗಡೆಗೊಂಡ ಪಟ್ಟಿಯಲ್ಲಿ ಸುನೀಲಗೌಡ ಅವರೊಬ್ಬರೇ ಅಭ್ಯರ್ಥಿ ಘೋಷಿಸಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಉಳಿದಂತೆ ಬೆಳಗಾವಿಗೆ ಚನ್ನರಾಜ ಹಟ್ಟಿಹೊಳಿ, ಉತ್ತರ ಕನ್ನಡಕ್ಕೆ ಸಾಯಿ ಗಾಂವ್ಕರ್, ಬೆಂಗಳೂರು ಗ್ರಾಮಾಂತರ ರವಿ, ಕೋಲಾರ ಅನಿಲ ಕುಮಾರ, ತುಮಕೂರು ರಾಜೇಂದ್ರ, ಚಿಕ್ಕಮಗಳೂರು ಗಾಯತ್ರಿ ಶಾಂತೆಗೌಡ, ಕಲಬುರಗಿ ಶಿವಾನಂದ ಪಾಟೀಲ ಮರ್ತೂರು, ಬೀದರ್ ಭೀಮಗೌಡ, ಮಂಡ್ಯ ದಿನೇಶ ಗೂಳಿಗೌಡ, ರಾಯಚೂರು ಶರಣೇಗೌಡ ಬಯ್ಯಾಪುರ, ಮೈಸೂರು ತಿಮ್ಮಯ್ಯ, ಹಾಸನ ಶಂಕರಪ್ಪ, ಕೊಡಗು ಮಂತರಗೌಡ, ಬಳ್ಳಾರಿ ಕೊಂಡಯ್ಯ, ಧಾರವಾಡ ಸಲೀಂ ಅಹ್ಮದ್, ಶಿವಮೊಗ್ಗ ಪ್ರಸನ್ನಕುಮಾರ, ಮಂಗಳೂರು ಮಂಜುನಾಥ ಭಂಡಾರಿ ಅಬ್ಯರ್ಥಿಗಳಾಗಲಿದ್ದಾರೆ.