ಡಿಸಿಸಿ ಬ್ಯಾಂಕ್ ನಿಂದ ಆದೇಶ
ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನೌಕರನೊಬ್ಬ ಹಣ ದುರ್ಬಳಕೆ ಮಾಡಿದ ಆರೋಪದ ಮೇಲೆ ಅಮಾನತು ಮಾಡಲಾಗಿದೆ.
ಡಿಸಿಸಿ ಬ್ಯಾಂಕ್ ಕಮತಗಿ ಶಾಖೆ ಸಿಪಾಯಿ ಪ್ರವೀಣ ಪತ್ರಿ ಅಮಾನತುಗೊಂಡವರು. ಹಣ ದುರ್ಬಳಕೆ ಕುರಿತು ಪ್ರವೀಣ ಪತ್ರಿ ಅವರ ಒಪ್ಪಿಗೆ ಪತ್ರದ ಆಧಾರದಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ.
ಸದ್ಯ ಕಮತಗಿ ಶಾಖೆಯಲ್ಲಿ ಸಿಪಾಯಿ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪತ್ರಿ ಅವರು ೨೦೧೩ ರಿಂದಲೂ ಡಿಸಿಸಿಯ ವಿವಿಧ ಶಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಅಲ್ಲಿನ ಗುಮಾಸ್ತರು ಹಾಗೂ ಶಾಖಾ ವ್ಯವಸ್ಥಾಪಕರ ಐಡಿ ಬಳಕೆ ಮಾಡಿಕೊಂಡು ಬ್ಯಾಂಕಿನ ಹಣ ದುರ್ಬಳಕೆ ಮಾಡಿಕೊಂಡಿರುವುದನ್ನು ಅವರು ಒಪ್ಪಿಕೊಂಡಿರುತ್ತಾರೆ.
ಹೀಗಾಗಿ ಬ್ಯಾಂಕಿನ ಸಿಬ್ಬಂದಿ ಸೇವಾ ನಿಯಮಾನುಸಾರ ಅಧ್ಯಾಯ ೬ (೩) ರಲ್ಲಿನ ಶಿಸ್ತು ಪಾಲಿಸುವುದರಲ್ಲಿ ಸಂಪೂರ್ಣ ವಿಫಲವಾಗಿದ್ದರಿಂದ ಸದರಿಯವರ ಮೇಲೆ ಶಿಸ್ತು ಕ್ರಮ ಅಂತಾ ಬ್ಯಾಂಕ್‌ನ ಸೇವೆಯಿಂದ ಅಮಾನತುಗೊಳಿಸಬೇಕಾದ ಅವಶ್ಯಕತೆ ಇದೆ.
ಕೂಡಲೆ ಅವರನ್ನು ಶಿಸ್ತು ವಿಚಾರಣೆಯನ್ನು ಕಾಯ್ದಿರಿಸಿ, ಬ್ಯಾಂಕಿನ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದೆ. ಅಮಾನತು ಅವಧಿಯಲ್ಲಿ ಕೇಂದ್ರ ಕಚೇರಿಯನ್ನು ಕೇಂದ್ರ ಸ್ಥಳವನ್ನಾಗಿ ನಿಗಧಿಪಡಿಸಿದೆ. ಸದರಿ ಅಮಾನತಿನಲ್ಲಿರುವ ಅವಧಿಯಲ್ಲಿ ನಿಯಮಾನುಸಾರ ಜೀವನಾಂಶ ಭತ್ಯೆ ಸಂದಾಯ ಮಾಡುವುದು ಹಾಗೂ ಸಕ್ಷಮ ಪ್ರಾಧಿಕಾರಿಯ ಅನುಮತಿ ಇಲ್ಲದೆ ಕೇಂದ್ರ ಸ್ಥಳವನ್ನು ಬಿಡತಕ್ಕದ್ದಲ್ಲ ಎಂದು ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.