This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Politics News

ಪರಸ್ಪರ ಸಹಕಾರವೇ ಅಭಿವೃದ್ಧಿಗೆ ಪೂರಕ

ನಿಮ್ಮ ಸುದ್ದಿ ಬಾಗಲಕೋಟೆ

ಸಿದ್ದನಗೌಡ ಪಾಟೀಲರು ಹಚ್ಚಿದ ಸಹಕಾರ ದೀಪ ಇಂದು ಬೃಹದಾಕಾರವಾಗಿ ಪ್ರಜ್ವಲಿಸುತ್ತಿದ್ದು ಪರಸ್ಪರ ಸಹಕಾರ ತತ್ವದಡಿ ಆರ್ಥಿಕಾಭಿವೃದ್ಧಿ ಸಾಧಿಸಬಹುದಾಗಿದೆ ಎಂದು ಇಳಕಲ್ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಲಕ್ಷ್ಮಣ ಗುರಂ ತಿಳಿಸಿದರು.

ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಬಾವಿ ಗ್ರಾಮದ ಶಾಖಾಂಬರಿ ಕಲ್ಯಾಣ ಮಂಟಪದಲ್ಲಿ ಸಹಕಾರ ಇಲಾಖೆ, ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಗಾಯತ್ರಿ ಪತ್ತಿನ ಸಹಕಾರ ಸಂಘ ಸೂಳೆಬಾವಿ, ಶಾಖಾಂಬರಿ ನೇಕಾರ ಸಹಕಾರ ಸಂಘ ಹಾಗೂ ಗ್ರಾಮದ ನಾನಾ ಸಹಕಾರ ಸಂಘಗಳ ಸಹಯೋಗದಲ್ಲಿ 67ನೇ ಅಖಿಲ ಭಾರತ ಸಹಕಾರ ಸಪ್ತಾಹ ಅಂಗವಾಗಿ ಯುವಜನ ಮಹಿಳಾ ಮತ್ತು ಅಬಲ ವರ್ಗಕ್ಕಾಗಿ ಸಹಕಾರ ಸಂಘಗಳು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಹಕಾರ ಕ್ಷೇತ್ರ ದೊಡ್ಡ ಕ್ಷೇತ್ರವಾಗಿದ್ದು ಎಲ್ಲರೂ ಈ ಕ್ಷೇತ್ರದಲ್ಲಿ ನಂಬಿಕೆ ಉಳಿಸಿಕೊಂಡು ಸಾಗುತ್ತಿದ್ದಾರೆ. ಪರಸ್ಪರ ಸಹಕಾರದಿಂದಲೇ ಇದೆಲ್ಲ ಸಾಧ್ಯವಾಗಿದೆ. ಸರಕಾರ ಕಾಲಕಾಲಕ್ಕೆ ನೀಡುತ್ತಿರುವ ಮಾರ್ಗದರ್ಶನವೂ ಬೆಳವಣಿಗೆಗೆ ಪೂರಕವಾಗಿದೆ. ಎಲ್ಲರೂ ಆರ್ಥಿಕಾಭಿವೃದ್ಧಿಯೊಂದಿಗೆ ದೇಶದ ಅಭಿವೃದ್ಧಿಗೂ ಕೈಜೋಡಿಸಲು ಸಹಾಯವಾಗಿದೆ ಎಂದರು.

ರಾಜ್ಯ ಪತ್ತಿನ ಸಹಕಾರ ಮಹಾಮಂಡಳದ ನಿರ್ದೇಶಕ ಆರ್.ಪಿ.ಕಲಬುರ್ಗಿ, ಬದುಕಿನ ಎಲ್ಲ ರಂಗದಲ್ಲೂ ಸಹಕಾರ ಅವಶ್ಯಕ. ವೈಯುಕ್ತಿಕ ಜೀವನ, ಗೆಳೆತನ, ಆರ್ಥಿಕ ಅಭಿವೃದ್ಧಿ ಹೀಗೆ ಎಲ್ಲ ರಂಗದಲ್ಲೂ ಸಹಕಾರ ತನ್ನದೆ ಆದ ಪಾತ್ರ ವಹಿಸಿದೆ. ಬಾಗಲಕೋಟೆ ಜಿಲ್ಲೆಯಲ್ಲೂ ಸಹಕಾರ ಕ್ಷೇತ್ರ ಅಪಾರವಾಗಿ ಬೆಳೆದಿದ್ದು ಸರಕಾರದ ಹೆಚ್ಚಿನ ಯೋಜನೆಗಳು ಇಲ್ಲಿನ ಜನರಿಗೆ ತಲುಪಿವೆ ಎಂದರು.

ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ, ಸಹಕಾರ ಕ್ಷೇತ್ರದಲ್ಲಿ ಸಮಯಪ್ರಜ್ಞೆ, ಸೌಜನ್ಯ ಅತಿ ಅವಶ್ಯ. ಸಹಕಾರಿಗಳು ಎಂದಿಗೂ ಸಮಯದ ನಿಷ್ಕಾಳಜಿ ವಹಿಸದಿರಿ. ಸುದೀರ್ಘ ಇತಿಹಾಸ ಹೊಂದಿರುವ ಸಹಕಾರಿ ಆಂದೋಲನ ವಿಸ್ತೃತವಾಗಿ ಬೆಳೆದಿದೆ. ಸಹಕಾರಿ ರಂಗದಲ್ಲಿ ರಾಜಕಾರಣವಿಲ್ಲ ಎನ್ನುವವರೆಲ್ಲ ಸಹಕಾರಿ ಕ್ಷೇತ್ರದಿಂದಲೇ ರಾಜಕಾರಣಕ್ಕೆ ಬಂದಿದ್ದಾರೆ ಎಂಬುದುನ್ನು ಮರೆಯಬಾರದು ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಕಾಶಿನಾಥ ಹುಡೇದ ಮಾತನಾಡಿದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಮುರುಗೇಶ ಕಡ್ಲಿಮಟ್ಟಿ, ಹುನಗುಂದ ಟಿಎಪಿಸಿಎಂಎಸ್ ಅದ್ಯಕ್ಷ ಮಹಾಲಿಂಗಯ್ಯ ಹಿರೇಮಠ, ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಶಂಕ್ರಪ್ಪ ಜನಿವಾರದ, ಸಂಗಣ್ಣ ಹಂಡಿ, ಮಲ್ಲಣ್ಣ ಕುರಿ, ಮಲ್ಲಣ್ಣ ನಿಡನಸೂರ, ಮಲ್ಲಪ್ಪ ನೆಮದಿ, ಸಹಕಾರ ಸಂಘದ ಸಹಾಯಕ ನಿಬಂಧಕಿ ಎಸ್.ಎಸ್.ಕಬಾಡೆ, ಸಹಕಾರ ಅಭಿವೃದ್ಧಿ ಅಧಿಕಾರಿ ಬಿ.ಜಿ.ಕುಲಕರ್ಣಿ, ಗದಗಯ್ಯ ನಂಜಯ್ಯನಮಠ, ರಾಜು ನಾಡಗೌಡರ, ತಾವರೆಪ್ಪ ರಾಠೋಡ, ಎಂ.ಎಲ್.ಶಾಂತಗೇರಿ, ಅರವಿಂದ ಮಂಗಳೂರ, ಗಾಯತ್ರಿ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಹೇಮಂತ ದುತ್ತರಗಿ, ಜಿಲ್ಲಾ ಸಹಕಾರ ಯೂನಿಯನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಶ್ರೀ ಹುನಗುಂದ ಇತರರು ಇದ್ದರು.

 

 

 

Nimma Suddi
";