ಬಾಗಲಕೋಟೆ :ಕರ್ಣಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾದಿಕಾರದ ಮಹತ್ವಕಾಂಕ್ಷೆ ಯೋಜನೆಗಳಲೊಂದಾದ ಮನೆಗೊಂದು ಗ್ರಂಥಾಲಯ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ ಒಂದು ಲಕ್ಷ ಗ್ರಂಥಾಲಯಗಳನ್ನು ಪ್ರಾರಂಭಿಸುವ ಯೋಜನೆ ಇದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ:ಮಾನಸ ಹೇಳಿದರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಬವನದಲ್ಲಿ ಆಯೋಜನೆಗೊಂಡ ಮನೆಗೊಂದು ಗ್ರಂಥಾಲಯ ಯೋಜನೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಪುಸ್ತಕ ಪ್ರಾಧಿಕಾರ ವೆಶೇಷವಾದಂತಹ ಯೋಜನೆಗಳನ್ನು ಹಾಕಿಕೊಂಡು ಪುಸ್ತಕ ಓದುವ ಹವ್ಯಾಸವನ್ನು ಅಬಿವೃದ್ಧಿಗೊಳಿಸುವುದು ಹಾಗೂ ಹೊಸ ಬರಹಗಾರರಿಗೆ ಪ್ರೋತ್ಸಾಹಿಸುವುದು ಲೇಖಕ, ಪ್ರಕಾಶಕ, ಮುದ್ರಕ, ಇವರುಗಳಿಗೆ ನ್ಯಾಯ ಸಿಗುವಂತ್ತೆ ಪುಸ್ತಕ ಪ್ರಾದಿಕಾರ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿ ಬಾಗಲಕೋಟೆ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯಕ್ಕೆ ವಿಶೇಷ ವಾದಂತಹ ಸಾಧನೆ ಮಾಡಿದ ಮಹನೀಯರನ್ನು ಗುರುತಿಸುವಂತಹ ಕಾರ್ಯ ಪುಸ್ತಕ ಪ್ರಾಧಿಕಾರದಿಂದ ಆಗಲಿ ತಾವು ಹಾಕಿಕೊಂಡ ಯೋಜನೆಗಳು ಜಿಲ್ಲೆಯ ಸಾಹಿತಿಗಳ ಹಾಗೂ ಪ್ರಕಾಶಕರ ಸಹಕಾರದೊಂದಿಗೆ ಯಶಶ್ವಿಗೊಳಿಸುತ್ತೆವೆ ಎಂದರು.ವೇದಿಕೆ ಮೇಲೆ ಸಾಹಿತಿ ನಿವೃತ್ತ ಪ್ರಾಚಾರ್ಯ್ ಪಿ,ಎಮ್.ಹುಗ್ಗಿ ತೋಟಗಾರಿಕೆ ವಿಶ್ವವಿಧ್ಯಾಲಯದ ಹಣಕಾಸು ಅಧಿಕಾರಿ, ಸಾಹಿತಿ, ಮಲ್ಲಿಕಾರ್ಜುನ ಶೆಲ್ಲಿಕೇರಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿ.ಎಸ್.ನಾಗನೂರ ಇದ್ದರು. ಜಿಲ್ಲಾ ಕನ್ನಡ ಸಾಹಿತ್ಯದ ಪರವಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ: ಮಾನಸ ಅವರನ್ನು ಸನ್ಮಾನಿಸಲಾಯಿತು. ಡಾ:ಎಂ.ಬಿ.ಒಂಟಿ ಡಾ: ನಾಗರತ್ನ ಬಾವಿಕಟ್ಟಿ ಡಾ: ಎಂ ಬಿ ರೇವಡಿಗಾರ ಜಗದೀಶ ಹಾದಿಮನಿ ಡಾ: ಮೌನೇಶ ಕಂಬಾರ ಆರ್ ಸಿ ಚಿತ್ತವಾಡಗಿ ಮನೆಗೊಂದು ಗ್ರಂಥಾಲಯ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಶಂಕರ ಲಮಾಣಿ ಗಿರಿಜಾ ಪಾಟೀಲ ವಿಜಯಲಕ್ಷ್ಮೀ ಗಂಜಿಹಾಳ ನೀಲಮ್ಮ ಚಿದಾನಂದ ಸಂಗಣ್ಣ ಮುಡಪಲದಿನ್ನಿ ಶ್ರೀಷ ಹುಟಗಿ ಚೇತನ ನಾಗರಾಳ ನಾರಾಯಣ ಬಡಿಗೇರ ಎಂ.ಡಿ.ಹಾಲಿಗೇರಿ ಸಾಹಿತಿಗಳು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಶ್ರೀನಿವಾಸ ಕರೆಪ್ಪ ಸ್ವಾಗತಿಸಿದರು ಆನಂದ ಹಲಕುರ್ಕಿ ನಿರೂಪಿಸಿದರು ರಾಜೇಶ ಸರೂರ ವಂದಿಸಿದರು.