ಬಾಗಲಕೋಟೆ : ಬೀಳಗಿ ತಾಲೂಕಿನ ಐತಿಹಾಸಿಕ ಚಿಕ್ಕಸಂಗಮದಲ್ಲಿರುವ ಸಂಗಮನಾಥನ ದೇವಸ್ಥಾನಕ್ಕೆ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷ ಜೆ.ಟಿ.ಪಾಟೀಲ ಬೇಟಿ ನೀಡಿ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿದರು.
ರವಿವಾರ ಭೇಟಿ ನೀಡಿದ ಸಂದರ್ಬದಲ್ಲಿ ದೇವಸ್ಥಾನದ ಆವರಣದಲ್ಲಿ ಪಿವರ್ಸ್ ಹಾಕುವುದು, ಭಕ್ತರ ಸಂಚಾರಕ್ಕೆ ಅನುಕೂಲವಾಗುವಂತೆ ಹೊಸದಾಗಿ ಸೂರ್ಯ ದೇವರ ಮೂರ್ತಿ ಹಾಗೂ ಈಗಾಗಲೇ ಪೂರ್ವ ಚಿಕ್ಕ ಸಂಗಮನಾಥನ ಸನ್ನಿದಾನಯಲ್ಲಿದ್ದ ಆಂಜನೇಯ ದೇವರ ಮೂರ್ತಿಯನ್ನು ಸಂಪ್ರದಾಯ ದಂತೆ ಪ್ರತಿಷ್ಠಾಪನೆ ಮಾಡಲು ಶಾಸಕರು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.
ಪ್ರಸ್ತುತ ದೇವಸ್ಥಾನದಲ್ಲಿರುವ ರಥವನ್ನು ಕೂಡಲೇ ಸುಸಜ್ಜಿತ ಗೊಳಿಸಲು ಹಾಗೂ ಹೊಸದಾಗಿ ಈಗಾಗಲೇ ಚಿಕ್ಕ ಸಂಗಮನಾಥನ ದೇವಾಲಯದ ಭಕ್ತಾಧಿಗಳು ಹಾಗೂ ಸಾಂಸ್ಕೃತಿಕ ಹಿನ್ನೆಲೆ ಹೊಂದಿರುವದರಿಂದ ನೂತನ ಭವ್ಯವಾದ ರಥವನ್ನು ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು..
ಶಾಸಕರು ಚಿಕ್ಕ ಸಂಗಮದ ಧಾರ್ಮಿಕ, ಪರಿಸರ ಮತ್ತು ಪ್ರವಾಸೋದ್ಯಮ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ
ಅಗತ್ಯ ಕ್ರಮವಹಿಸಲು ಸೂಚಿಸಿದರು. ದೇವಸ್ಥಾನ ಕ್ಕೆ ಬರುವ ಭಕ್ತಾಧಿಗಳಿಗೆ ಅನ್ನದಾಸೋಹ ವ್ಯವಸ್ಥೆಯನ್ನು ದೇವಸ್ಥಾನ ವತಿಯಿಂದ ಏರ್ಪಡಿಸಲು ,ಹಾಗೂ
ಕೃಷ್ಣಾ ಮತ್ತು ಘಟಪ್ರಭಾ ನದಿಗಳ ಸಂಗಮ ಪ್ರದೇಶದ ನೈಸರ್ಗಿಕ ಸೌಂದರ್ಯ, ದಟ್ಟವಾದ ಹಸಿರಿನ belt ಹಾಗೂ ಪಕ್ಷಿಧಾಮ ವಾಗಿ ಅಭಿವೃದ್ಧಿ ಪಡಿಸಲು (Bird Sanctuary) ದೇಶ ವಿದೇಶಗಳಿಂದ ಹಕ್ಕಿಗಳು ಬರುತ್ತಿದ್ದು ಪ್ರವಾಸಿಗರ ಆಕರ್ಷಣೆಯ ಸ್ಥಳವನ್ನಾಗಿಸಲು ಈ ಮೇಲಿನ ಎಲ್ಲಾ ಅಂಶಗಳ ಒಳಗೊಂಡ ಪ್ರಸ್ತಾವನೆಯನ್ನು ಅನುಮೊದನೆಗೆ ಸಲ್ಲಿಸಲು ಪ್ರಾಧಿಕಾರ ಅಧಿಕಾರಿಗಳಿಗೆ ಸೂಚಿಸಿದರು.
ಬೇಟಿ ಸಮಯದಲ್ಲಿ ಜಿಲ್ಲಾಧಿಕಾರಿ ಸಂಗಪ್ಪ, ಜಿ.ಪಂ ಸಿಇಒ ಶಶಿಧರ ಕುರೇರ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಸೇರಿದಂತೆ ಚಿಕ್ಕ ಸಂಗಮ ಪ್ರಾಧಿಕಾರದ ಆಯುಕ್ತರು ಇದ್ದರು.