This is the title of the web page
This is the title of the web page

Live Stream

June 2024
S M T W T F S
 1
2345678
9101112131415
16171819202122
23242526272829
30  

| Latest Version 9.4.1 |

Politics News

ಇಂದಿನಿಂದ ನೈಟ್ ನಿಷೇದಾಜ್ಞೆ

ರಾತ್ರಿ 10ರ ನಂತರ ಸಂಚಾರ ನಿಷೇಧ

ನಿಮ್ಮ ಸುದ್ದಿ ಬೆಂಗಳೂರು

ಇಂದು ರಾತ್ರಿಯಿಂದಲೇ ಜ. 2ರ ವರೆಗೆ ನೈಟ್ ಕರ್ಫ್ಯೂ ಜಾರಿ; ರಾತ್ರಿ 10ರ ನಂತರ ಸಂಚಾರ ನಿಷೇಧ

ಬ್ರಿಟನ್ ದೇಶದಿಂದ ಹೊಸ ಸ್ವರೂಪದ ಕೊರೋನಾ ವೈರಸ್ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ.ಇಂದಿನಿಂದಲೇ 9 ದಿನಗಳ ಕಾಲ, ಅಂದರೆ ಜನವರಿ 2ರವರೆಗೂ ರಾತ್ರಿ ಸಂಚಾರ ನಿಷೇಧಾಜ್ಞೆ ಜಾರಿಯಾಗಲಿದೆ. ರಾತ್ರಿ 10ರಿಂದ ಬೆಳಗ್ಗೆ 6 ಗಂಟೆಯವರೆಗೂ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ.

ಇಂದು ವಿವಿಧ ಸಭೆಗಳಲ್ಲಿ ಚರ್ಚೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ಈ ನಿರ್ಧಾರವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಮೂಲಕ ಹೊಸ ಸ್ವರೂಪದ ಕೊರೋನಾ ವೈರಸ್ ಹರಡುವಿಕೆ ನಿಯಂತ್ರಿಸಲು ಕರ್ಫ್ಯೂ ಜಾರಿ ಮಾಡಿದ ಮೊದಲ ರಾಜ್ಯ ಕರ್ನಾಟಕವಾಗಿದೆ. ಬೆಂಗಳೂರಷ್ಟೇ ಅಲ್ಲ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ.