ವಾಷಿಂಗ್ಟನ್: ಅಮೆರಿಕದ ಪಾಲುದಾರನಾಗಲು ಭಾರತ ಬಯಸಿದ್ದು, ಈಗ ಅಮೆರಿಕನ್ನರ ನಾಯಕತ್ವದಲ್ಲಿ ವಿಶ್ವಾಸ ಹೊಂದಿಲ್ಲ ಎಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಆಕಾಂಕ್ಷಿ ನಿಕ್ಕಿ ಹ್ಯಾಲೆ ಬುಧವಾರ ಹೇಳಿದರು.
ಭಾರತ ಮೂಲದವರೇ ಆದ ರಿಪಬ್ಲಿಕನ್ ಅಭ್ಯರ್ಥಿ ನಿಕ್ಕಿ, ಪ್ರಸ್ತುತದ ಜಾಗತಿಕ ಪರಿಸ್ಥಿತಿಯಲ್ಲಿ ಭಾರತವು ರಷ್ಯಾಕ್ಕೆ ನಿಕಟವಾಗಿ ಉಳಿದುಕೊಂಡು ಜಾಣ್ಮೆಯ ಆಟವಾಡಿದೆ ಎಂದಿದ್ದು, ಫಾಕ್ಸ್ ಬಿಜಿನೆಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ನಿಕ್ಕಿ ಹ್ಯಾಲೆ, ಅಮೆರಿಕ ದುರ್ಬಲ ಎಂದು ಭಾರತ ಈಗ ಭಾವಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
“ನಾನು ಭಾರತದ ಜತೆ ಕೂಡ ವ್ಯವಹರಿಸಿದ್ದು, ನಾನು ಮೋದಿ ಜತೆ ಮಾತನಾಡಿದ್ದೇನೆ. ಭಾರತವು ನಮ್ಮ ಜತೆ ಪಾಲುದಾರನಾಗಲು ಬಯಸಿದೆ. ಅವರು ರಷ್ಯಾ ಜತೆ ಪಾಲುದಾರಕೆ ಹೊಂದಲು ಬಯಸಿಲ್ಲ. ಆದರೆ ಸಮಸ್ಯೆ ಏನೆಂದರೆ ಗೆಲ್ಲಲು ಭಾರತ ನಮ್ಮನ್ನು ನಂಬುವುದಿಲ್ಲ. ನಮ್ಮ ನಾಯಕತ್ವದಲ್ಲಿ ಅವರಿಗೆ ವಿಶ್ವಾಸ ಇಲ್ಲ. ಅವರು ಈಗ ನಮ್ಮನ್ನು ದುರ್ಲಬರು ಎಂಬಂತೆ ನೋಡುತ್ತಿದ್ದಾರೆ ಎಂದರು.
ಭಾರತ ಯಾವಾಗಲೂ ಜಾಣ್ಮೆಯಿಂದ ಆಟವಾಡುತ್ತಿದ್ದು, ಈ ಚತುರ ಆಟದೊಂದಿಗೆ ರಷ್ಯಾ ಜತೆ ಆಪ್ತವಾಗಿ ಉಳಿದುಕೊಂಡಿದ್ದು, ಈ ಕಾರಣದಿಂದಾಗಿ ಅವರು ತಮ್ಮ ಸಾಕಷ್ಟು ಸೇನಾ ಸಾಧನಗಳನ್ನು ಪಡೆದುಕೊಂಡಿದ್ದಾರೆ” ಎಂದು ನಿಕ್ಕಿ ಹ್ಯಾಲೆ ತಿಳಿಸಿದರು.