ಆಯುಧಗಳನ್ನು ಜಮಾ ಮಾಡಲು ಸೂಚನೆ
ಬಾಗಲಕೋಟೆ
ವಿಧಾನ ಸಭಾ ಸಾರ್ವತ್ರಿಕ ಚುನಾವಣೆಗೆ ಘೋಷಣೆಯಾದ ದಿನಾಂಕದಿಂದ ಚುನಾವಣೆ ಪ್ರಕ್ರಿಯೆಗಳು ಪೂರ್ಣಗೊಳ್ಳುವವರೆಗೆ, ಶಾಂತಿ ಹಾಗೂ ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ಆಯುಧ ಲೈಸೆನ್ಸ್ ಹೊಂದಿರುವವರು ತಮ್ಮ ಆಯುಧಗಳನ್ನು ಸಂಗಡ ಕೊಂಡೊಯ್ಯುವುದನ್ನು ನಿಷೇದಿಸಲಾಗಿದೆ. ಆಯುಧ ಲೈಸನ್ಸ್‍ದಾರರು ತಮ್ಮ ಆಯುಧಗಳನ್ನು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡುವಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿ ಪಿ.ಸುನೀಲ್‍ಕುಮಾರ ಆದೇಶ ಹೊರಡಿಸಿದ್ದಾರೆ.
ಲೈಸನ್ಸ್‍ದಾರರು ತಮ್ಮ ಆಯುಧಗಳನ್ನು ಮಾರ್ಚ 31 ರೊಳಗಾಗಿ ತಮ್ಮ ಸಮೀಪದ ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡಿ gಶೀದಿ ಪಡೆಯತಕ್ಕದ್ದು, ಚುನಾವಣಾ ಪ್ರಕ್ರಿಯೆ ಮುಕ್ತಾಯವಾದ ಕೂಡಲೇ ಠೇವಣಿ ಮಾಡಲಾದ ಆಯುಧಗಳನ್ನು ಮಾಲೀಕರಿಗೆ ಪರತ್ ನೀಡಲಾಗುತ್ತಿದೆ. ಈ ಆದೇಶವು ಬ್ಯಾಂಕ ಸಕ್ಕರೆ ಭದ್ರತೆ ಸಲುವಾಗಿ ನೀಡಿರುವ ಆಯುಧ ಲೈಸನ್ಸ್‍ಗಳಿಗೆ ಅನ್ವಯಿಸುವುದಿಲ್ಲ. ಈ ಆದೇಶವು ಸಂಪೂರ್ಣ ಬಾಗಲಕೋಟೆ ಜಿಲ್ಲಾ ವ್ಯಾಪ್ತಿಗೆ ಮಾತ್ರ ಅನ್ವಯಿಸುತ್ತದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.