ನಿಮ್ಮ ಸುದ್ದಿ ಬಾಗಲಕೋಟೆ
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯತ್ವದ ನೋಂದಣಿಗೆ ಆಫರ್ ನೀಡಿರುವುದು ಹಾಸ್ಯಾಸ್ಪದವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ವ್ಯಂಗ್ಯವಾಡಿದರು.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾದಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸದಸ್ಯತ್ವ ಅಭಿಯಾನದ ಕುರಿತು ಕಾರ್ಯಕರ್ತರಿಗೆ ಪ್ರಿಡ್ಜ್, ಟಿವಿ, ಮಿಕ್ಸರ್ ಆಫರ್ ನೀಡಿರುವುದು ತೀವ್ರ ಚರ್ಚೆಗೆ ಗ್ರಾಸವಾದ ವಿಷಯವಾಗಿದೆ. ಸಿದ್ದರಾಮಯ್ಯ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಯಾವುದೇ ಪ್ರಕೃತಿ ವಿಕೋಪ ಇಲ್ಲದೆ ಆಡಳಿತ ನಡೆಸಿದ ಸುದೈವಿ.
ಸಿದ್ದರಾಮಯ್ ಅವರು ವಿಧಾನಸಭೆಯಲ್ಲಿ ಬಿಜೆಪಿಯವರು ಹಂಗೆ ಮಾಡ್ತೀರಿ, ಹಿಂಗೆ ಮಾಡ್ತೀರಿ, ಅಷ್ಟು ಖರ್ಚು ಮಾಡ್ತೀರಿ ಇಷ್ಟು ಖರ್ಚು ಮಾಡ್ತೀರಿ, ಬಿಜೆಪಿಯವರು ಪ್ರಜಾಪ್ರಭುತ್ವದ ವಿರೋಧಿಗಳು ಎಂದು ಬೊಬ್ಬೆ ಹಾಕುತ್ತಾರೆ. ಹಾಗಾದರೆ ಬಾದಾಮಿ ಕ್ಷೇತ್ರದಲ್ಲಿ ನಡೆಯುತ್ತಿರುವುದಾದರೂ ಏನು? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸದಸ್ಯತ್ವ ಮಾಡಿದವರಿಗೆ ಫ್ರಿಡ್ಜ್, ಟಿವಿ, ಮಿಕ್ಸರ್ ಎಂದರೆ ಬಡ ನಾಗರಿಕರ ಜೀವನ ಹೇಗೆ? ಈ ರೀತಿ ಆಫರ್ ಕೊಟ್ಟಿದ್ದು ನಿಜವಾಗಿದ್ದರೆ ಅದು ಖಂಡನೀಯ. ಇದು ಸಿದ್ದರಾಮಯ್ಯ ಅವರ ಗೌರವ ಹೆಚ್ಚಿಸುವುದಿಲ್ಲ. ಎಲ್ಲ ನಾಟಕ ಮಾಡಿ ಒಂದು ರಾಜ್ಯದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬಾರದ ಸ್ಥಿತಿ ಬಂದೊದಗಿದೆ. ರಾಜ್ಯದಲ್ಲೂ ಇದೇ ಪರಿಸ್ಥಿತಿ ಆಗಲಿದೆ.
ಯಾರೋ ಹೇಳ್ತಿದ್ರು, ಪಂಜಾಬ್ ಕಾಂಗ್ರೆಸ್ ಸಿಧು ಹಾಳು ಮಾಡಿದ ಅಂತ, ಅದೇ ರೀತಿ ಕರ್ನಾಟಕ ಕಾಂಗ್ರೆಸ್ನ್ನು ಸಿದ್ದರಾಮಯ್ಯ ಹಾಳು ಮಾಡ್ತಾರೆ ಎಂದರು.