This is the title of the web page
This is the title of the web page

Live Stream

February 2025
S M T W T F S
 1
2345678
9101112131415
16171819202122
232425262728  

| Latest Version 9.4.1 |

Politics News

ಎರಡನೇ ಹಂತದ ಗ್ರಾ.ಪಂಗಳ ಚುನಾವಣೆಗೆ ಸಿದ್ಧತೆ

ಜಿಲ್ಲಾಡಳಿತದಿಂದ ಸಕಲ ಸಿದ್ದತೆ : ಡಿಸಿ ರಾಜೇಂದ್ರ

ನಿಮ್ಮ ಸುದ್ದಿ ಬಾಗಲಕೋಟೆ

ಜಿಲ್ಲೆಯಲ್ಲಿ ಎರಡನೇ ಹಂತದ ೧೦೨ ಗ್ರಾಮ ಪಂಚಾಯತಿಗಳ ಸಾರ್ವತ್ರಿಕ ಚುನಾವಣೆಗೆ ಡಿಸೆಂಬರ ೨೭ ರಂದು ಬೆಳಿಗ್ಗೆ ೭ ರಿಂದ ಸಂಜೆ ೫ ವರೆಗೆ ಮತದಾನ ನಡೆಯಲಿದ್ದು, ಜಿಲ್ಲಾಡಳಿತದಿಂದ ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ಬಾದಾಮಿ ಮತ್ತು ಗುಳೇದಗುಡ್ಡದಲ್ಲಿ ಸ್ಥಾಪಿಸಲಾದ ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಈ ವಿಷಯ ತಿಳಿಸಿದ ಅವರು ಕೋವಿಡ್-೧೯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎರಡನೇ ಹಂತದಲ್ಲಿ ಜಿಲ್ಲೆಯ ಬಾಗಲಕೋಟೆ, ಬಾದಾಮಿ, ಹುನಗುಂದ, ಇಲಕಲ್ಲ, ಗುಳೇದಗುಡ್ಡ ತಾಲೂಕುಗಳ ಒಟ್ಟು ೧೦೨ ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯಲಿದೆ. ೧೩೮೦ ಸ್ಥಾನಗಳಿಗೆ ೩೭೫೬ ಅಭ್ಯರ್ಥಿಗಳು ಅಂತಿಮ ಸ್ಪರ್ಧೆಯಲ್ಲಿ ಉಳಿದಿದ್ದಾರೆ ಎಂದು ತಿಳಿಸಿದರು.

ಎರಡನೇ ಹಂತದಲ್ಲಿ ಜರುಗಲಿರುವ ಚುನಾವಣೆಗೆ ಒಟ್ಟು ೬೦೫೩ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಬಾಗಲಕೋಟೆ ೧೭೨, ಬಾದಾಮಿ ೨೦೨, ಗುಳೇದಗುಡ್ಡ ೫೫, ಹುನಗುಂದ ೧೦೪ ಹಾಗೂ ಇಲಕಲ್ಲ ೧೨೦ ಮತಗಟ್ಟೆಗಳಿವೆ. ಪ್ರತಿ ಮತಗಟ್ಟೆ ಅಧಿಕಾರಿಗಳು, ಸಹಾಯಕ ಮತಗಟ್ಟೆ ಅಧಿಕಾರಿಗಳು ಪ್ರೊಸಿಡಿಂಗ್ ಆಫೀಸರ್ಸ್ ಪೋಲಿಂಗ್ ಆಫೀರ‍್ಸ್ಗಳನ್ನು ನೇಮಿಸಲಾಗಿದೆ. ಕೋವಿಡ್ ಮುಂಜಾಗ್ರತೆ ದೃಷ್ಠಿಯಿಂದ ಪ್ರತಿ ಮತಗಟ್ಟೆಗಳಲ್ಲಿ ಕೋವಿಡ್ ಸುರಕ್ಷತೆಗಾಗಿ ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಮಾಸ್ಕ, ಸ್ಯಾನಿಟೈಜರ್, ಥರ್ಮಲ್ ಸ್ಕಾö್ಯನರ್ ಹಾಗೂ ಕೋವಿಡ್ ಸುರಕ್ಷತಾ ಕಿಟ್‌ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.

ಎರಡನೇ ಹಂತದ ಚುನಾವಣೆಯಲ್ಲಿ ೪೭೭೩೮೪ ಮತದಾರರಿದ್ದು, ಈ ಪೈಕಿ ೨೪೦೦೦೭ ಪುರುಷರು, ೨೩೭೩೫೨ ಮಹಿಳಾ ಹಾಗೂ ೨೫ ಇತರೆ ಮತದಾರರಿದ್ದಾರೆ. ಬಾಗಲಕೋಟೆ ತಾಲೂಕಿನಲ್ಲಿ ೬೪೦೦೫ ಪುರುಷ, ೬೪೭೫೫ ಮಹಿಳಾ, ೧೧ ಇತರೆ ಸೇರಿ ಒಟ್ಟು ೧೨೮೭೭೧ ಮತದಾರಿದ್ದರೆ, ಬಾದಾಮಿಯಲ್ಲಿ ೭೪೬೪೧ ಪುರುಷ, ೭೩೨೪೮ ಮಹಿಳಾ, ೧೦ ಇತರೆ ಸೇರಿ ೧೪೭೮೯೯ ಮತದಾರರಿದ್ದಾರೆ. ಗುಳೇದಗುಡ್ಡದಲ್ಲಿ ೨೩೦೨೧ ಪುರುಷ, ೨೨೨೮೭ ಮಹಿಳಾ, ೧ ಇತರೆ ಸೇರಿ ಒಟ್ಟು ೪೫೩೦೯, ಹುನಗುಂದದಲ್ಲಿ ೩೫೦೯೩ ಪುರುಷ, ೩೪೮೨೩ ಮಹಿಳಾ, ೧ ಇತರೆ ಸೇರಿ ಒಟ್ಟು ೬೯೯೧೭ ಹಾಗೂ ಇಲಕಲ್ಲಿನಲ್ಲಿ ೪೩೨೪೭ ಪುರುಷ, ೪೨೨೩೯ ಮಹಿಳಾ ಹಾಗೂ ೨ ಇತರೆ ಸೇರಿ ಒಟ್ಟು ೮೫೪೮೮ ಮತದಾರರಿದ್ದಾರೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಸೇರಿದಂತೆ ಗುಳೇದಗುಡ್ಡ ಮತ್ತು ಬಾದಾಮಿ ತಹಶೀಲ್ದಾರ ಹಾಗೂ ಇತರೆ ಅಧಿಕಾರಿಗಳು ಇದ್ದರು.

Nimma Suddi
";