This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

National News

ಪ್ರಧಾನಿ ಮೋದಿ ಅವರು ಹುಟ್ಟಿನಿಂದ ಒಬಿಸಿ ಸಮುದಾಯಕ್ಕೆ ಸೇರಿದವರಲ್ಲ: ರಾಹುಲ್ ಗಾಂಧಿ

ಪ್ರಧಾನಿ ಮೋದಿ ಅವರು ಹುಟ್ಟಿನಿಂದ ಒಬಿಸಿ ಸಮುದಾಯಕ್ಕೆ ಸೇರಿದವರಲ್ಲ: ರಾಹುಲ್ ಗಾಂಧಿ

ನವದೆಹಲಿ: ಪ್ರಧಾನಿ ಮೋದಿ ಅವರು ಹುಟ್ಟಿನಿಂದ ಒಬಿಸಿ ಸಮುದಾಯಕ್ಕೆ ಸೇರಿದವರಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದರು.

ಪ್ರಧಾನಿ ಮೋದಿ ಅವರು ತಮ್ಮ ಜಾತಿಯ ಕುರಿತಾಗಿ ದೇಶದ ಜನತೆಗೆ ಸುಳ್ಳು ಹೇಳಿದ್ದು, ತಾವು ಇತರ ಹಿಂದುಳಿದ ವರ್ಗಗಳಿಗೆ ಸೇರಿದವರು ಎಂದು ಹೇಳಿಕೊಳ್ಳುತ್ತಿದ್ದು, ಆದರೆ, ಪ್ರಧಾನಿ ಮೋದಿ ಅವರು, ಜನರಲ್ ಕೆಟಗರಿಗೆ ಸೇರಿದ ‘ತೇಲಿ’ ಸಮುದಾಯಕ್ಕೆ ಸೇರಿದವರು ಎಂದು ರಾಹುಲ್ ಗಾಂಧಿ ಹೊಸ ವಿವಾದ ಸೃಷ್ಟಿಸಿದ್ದಾರೆ.

ಭಾರತ್ ಜೋಡೋ ನ್ಯಾಯ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಡಿಶಾ ರಾಜ್ಯದಲ್ಲಿ ನಡೆದ ಸಾರ್ವಜನಿಕ ಸಮಾವೇಶವೊಂದನ್ನು ಉದ್ದೇಸಿಸಿ ಮಾತನಾಡುವಾಗ, ತೇಲಿ ಸಮುದಾಯದ ಜನರು ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ನೆಲೆಸಿದ್ದು, ಗುಜರಾತ್‌ ರಾಜ್ಯದಲ್ಲೂ ಇದ್ದಾರೆ.ತೇಲಿ ಸಮುದಾಯಕ್ಕೆ 2000ನೇ ವರ್ಷದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಒಬಿಸಿ ಪಟ್ಟ ಸಿಕ್ಕಿತು. ಅದಕ್ಕೆ ಮುನ್ನ ಸಾಮಾನ್ಯ ವರ್ಗದಲ್ಲಿತ್ತು ಎಂದರು.

. ಪ್ರಧಾನಿ ಮೋದಿ ಅವರು ಜನರಲ್ ಕೆಟಗರಿಯಲ್ಲಿದ್ದ ಸಮದಾಯದಲ್ಲಿ ಜನಿಸಿದ್ದು, ಇದೇ ಕಾರಣಕ್ಕೆ ಇವರು ತಮ್ಮ ಜೀವಮಾನದಲ್ಲೇ ಜಾತಿ ಸಮೀಕ್ಷೆ ನಡೆಸೋದಕ್ಕೆ ಬಿಡೋದಿಲ್ಲ. ಏಕೆಂದರೆ ಪ್ರಧಾನಿ ಮೋದಿ ಅವರು ಒಬಿಸಿ ಸಮುದಾಯದವರು ಅಲ್ಲವೇ ಅಲ್ಲ, ಅವರು ಸಾಮಾನ್ಯ ವರ್ಗಕ್ಕೆ (ಜನರಲ್ ಕೆಟಗರಿ) ಸೇರಿದವರು’ ಎಂದು ಸೂಚಿಸಿದರು.