ನಿಮ್ಮ ಸುದ್ದಿ ಬಾಗಲಕೋಟೆ
ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ರೂಪಿಸಲಾಗಿರುವ ಪ್ರಧಾನಮಂತ್ರಿಗಳ ೧೫ ಅಂಶಗಳ ಕಾರ್ಯಕ್ರಮದ ಪ್ರಗತಿ ರಾಜ್ಯದ್ಯಂತ ತೃಪ್ತಿದಾಯಕವಾಗಿ ನಡೆಯುತ್ತಿಲ್ಲ ಎಂದು ಕರ್ನಾಟಕ ಮುಸ್ಲಿಂ ಯೂನಿಟಿಯ ರಾಜ್ಯ ಸಂಚಾಲಕ ಜಬ್ಬಾರ ಕಲಬುರ್ಗಿ ಅತೃಪ್ತಿ ಹೊರಹಾಕಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಾಚಾರ ಸಮೀತಿಯ ವರದಿ ಆಧರಿಸಿ ಅನುಷ್ಠಾನಗೊಳಿಸಿರುವ ಪ್ರಧಾನ ಮಂತ್ರಿಗಳ ೧೫ ಅಂಶಗಳ ಕಾರ್ಯಕ್ರಮ ರಾಜ್ಯದಲ್ಲಿ ಸರಿಯಾಗಿ ಅನುಷ್ಠಾನಗೊಳಿಸಲಾಗುತ್ತಿಲ್ಲ. ಜಿಲ್ಲಾಧಿಕಾರಿಗಳು ಆದಿಯಾಗಿ ಅಲ್ಪಸಂಖ್ಯಾತತ ಇಲಾಖೆಯ ಅಧಿಕಾರಿಗಳು ಯೋಜನೆಯ ಅನುಷ್ಠಾನ ಮತ್ತು ಪ್ರಗತಿ ಕುರಿತು ಅಧಿಕಾರಿಗಳು ನಿರ್ಲಕ್ಷ ತೂರಿದ್ದು ಅಲ್ಪಸಂಖ್ಯಾತರ ಸಮೂದಾಯವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ದೂರಿದರು.
ಸರ್ಕಾರ ರೂಪಿಸಿರುವ ಯೋಜನೆಗಳನ್ನು ಅಲ್ಪಸಂಖ್ಯಾತರಿಗೆ ತಲುಪಿಸಿದಾಗ ಮಾತ್ರ ಸಮಾಜ ಮುಖ್ಯವಾಹಿಸನಿಗೆ ಬರಲು ಸಾಧ್ಯ ಎಂದರಲ್ಲದೆ. ಅಂಗನವಾಡಿಯಿಂದ ಹಿಡಿದು ಶಾಲಾ, ಕಾಲೇಜು ಮಟ್ಟದ ಶಿಕ್ಷಣದವರೆಗೂ ಶಾಲೆ ಬಿಟ್ಟು ಹೊರಗುಳಿಯದಂತೆ ನೋಡಿಕೊಳ್ಳಬೇಕಾಗಿದ್ದು ಅಧಿಕಾರಿಗಳ ಕೆಲಸ ಈ ಬಗ್ಗೆ ಜನರಿಗೆ ಸಮರ್ಪಕ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ತಿಳಿಸಿದರು.
ಎಸ್.ಎಸ್.ಎಲ್.ಸಿ ಯಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಎಷ್ಟು ಜನ ಉತ್ತಿರ್ಣರಾಗಿದ್ದಾರೆ ಅದರಲ್ಲಿ ಎಷ್ಟು ಜನ ಪಿ.ಯು ಪ್ರವೇಶ ಪಡೆದರು ಕಾಲೇಜ ಪ್ರವೇಶ ಪಡೆಯದೆ ಉಳಿದವರು ಎಷ್ಟು ಎಂಬ ಬಗ್ಗೆ ಮಾಹಿತಿ ಇಲ್ಲ. ನಿಖರವಾಗಿ ಶಿಕ್ಷಣ ಇಲಾಖೆ ಈ ಅಂಕಿ ಅಂಶ ನೀಡುತ್ತಿಲ್ಲ ಮಾಹಿತಿ ನೀಡಿದರೆ ಮಕ್ಕಳನ್ನು ಶಾಲೆ ಕಾಲೇಜಿಗೆ ಸೇರಿಸಿ ಮುಖ್ಯ ವಾಹಿನಿಗೆ ತರಲು ಸಾಧ್ಯ ಎಂದರು.
ಇಂದು ಅಲ್ಪಸಂಖ್ಯಾತರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿ ಕುರಿತು ಚರ್ಚೆಗಳು ನಡೆಯುತ್ತಿಲ್ಲ ಆರ್ಥಿಕ ಮತ್ತು ಭೌತಿಕ ಗುರಿ ಸಾಧಿಸಲು ಇಲಾಖೆಗಳು ಶೇ. ೧೫% ರಷ್ಟು ಅನುದಾನ ನೀಡದೆ ವಂಚಿಸುತ್ತಿವೆ ಸರ್ಕಾರದ ಆದೇಶದ ಪ್ರಕಾರ ತಮ್ಮ ಒಟ್ಟು ಬಜೇಟ್ ನಲ್ಲಿ ಶೇ. ೧೫% ರಷ್ಟು ಅನುದಾನವನ್ನು ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಗಳಿಗೆ ನೀಡಬೇಕೆಂಬ ನಿಯಮ ಇದ್ದರೂ ಕಡ್ಡಾಯವಾಗಿ ಜಾರಿಯಾಗುತ್ತಿಲ್ಲ.
ಪ್ರತಿ ಇಲಾಖೆ ತಮ್ಮ ಕ್ರೀಯಾ ಯೋಜನೆಯಲ್ಲಿ ಕನಿಷ್ಠ ಶೇ. ೧೫% ರಷ್ಟು ಅಲ್ಪಸಂಖ್ಯಾತ ಸಮುದಾಯದ ಫಲಾನುಭವಿಗಳಿಗೆ ತಲುಪುವಂತೆ ಯೋಜನೆ ಸಿದ್ಧ ಪಡಿಸುವಲ್ಲಿ ವಿಫಲಗೊಂಡಿದ್ದಾರೆ ಈ ಕುರಿತು ಕರ್ನಾಟಕ ಅಲ್ಪಸಂಖ್ಯಾತ ಆಯೋಗ ಮತ್ತು ರಾಷ್ಟ್ರಿಯ ಅಲ್ಪಸಂಖ್ಯಾತ ಆಯೋಗಗಳಿಗೆ ಮತ್ತು ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯುತ್ತಿರುವದಾಗಿ ತಿಳಿಸಿದರು.
ಅಲ್ಪಸಂಖ್ಯಾತ ಸಮುದಾಯದ ಉನ್ನತಿ ಕರಣಕ್ಕೆ ಉರ್ದು ಶಾಲೆಗಳಿಗೆ ಸಂಪನ್ಮೂಲ ಒದಗಿಸುವಿಕೆ, ಮದರಸಾಗಳ ಆಧುನಿಕರಣ, ವಿಧ್ಯಾರ್ಥಿಗಳಿಗೆ ಸ್ಕಾಲರ್ ಶಿಫ್, ಮೌಲಾನಾ ಆಜಾದ್ ಫೌಂಡೇಶನ್ ಮೂಲಕ ಶಿಕ್ಷಣ ಸಂಸ್ಥೆಗಳಿಗೆ ಮೂಲ ಸೌಕರ್ಯ ಕಲ್ಪಿಸುವದು, ಸ್ವಯಂ ಉದ್ಯೋಗ ಸೃಷ್ಠಿ .ಆರ್ಥಿಕ ಚಟುವಟಿಕೆಗೆ ಸಾಲಯೋಜನೆ, ಕೌಶಲ್ಯ ತರಬೇತಿ, ನೇಮಕಾತಿಗಳು, ವಸತಿ, ಯೋಜನೆಗಳು, ಕೊಳಗೇರಿ ಅಭಿವೃದ್ಧಿ ಪಡಿಸುವಿಕೆಗಾಗಿ ಸ್ಥಳಿಯ ಸಂಸ್ಥೆಗಳಾದ ಗ್ರಾಮ ಪಂಚಾಯತ, ತಾಲೂಕು ಪಂಚಾಯತ, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ ಸೇರಿ ಜಿಲ್ಲಾ ಪಂಚಾಯತ ಇಲಾಖೆಗಳ ಕ್ರೀಯಾ ಯೋಜನೆಯಲ್ಲಿ ಶೇ. ೧೫% ಅಂಶಗಳ ಕಾರ್ಯಕ್ರಮ ಸೇರಿಸಿ ಅನುಷ್ಠಾನಕ್ಕೆ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಜಬ್ಬಾರ ಕಲಬುರ್ಗಿ ಆಗ್ರಹಿಸಿದ್ದಾರೆ.