This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Politics News

ಕಾಂಗ್ರೆಸ್ ನವರಿಗೆ ನಾಚಿಕೆ ಆಗಲ್ವಾ, ಮಾನ ಮರ್ಯಾದೆ ಇದ್ಯಾ?: ಕಾಂಗ್ರೆಸ್ ವಿರುದ್ಧ ಆರ್ ಅಶೋಕ್ ಕಿಡಿ

ಕಾಂಗ್ರೆಸ್ ನವರಿಗೆ ನಾಚಿಕೆ ಆಗಲ್ವಾ, ಮಾನ ಮರ್ಯಾದೆ ಇದ್ಯಾ?: ಕಾಂಗ್ರೆಸ್ ವಿರುದ್ಧ ಆರ್ ಅಶೋಕ್ ಕಿಡಿ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಡಿಎನ್​ಎಯಲ್ಲೇ ಜಿನ್ನಾ ಸಂಸ್ಕೃತಿ ಅಂಟಿಕೊಂಡಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ವಾಗ್ದಾಳಿ ನಡೆಸಿದರು.

ವಿಧಾನಸೌಧ ಆವರಣದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಮಾನ ಮರ್ಯಾದೆ ಇರುವ ಪಕ್ಷ ದೇಶ ವಿಭಜನೆಯ ಮಾತು ಯಾವತ್ತೂ ಆಡಿರಲಿಲ್ಲ, ಕಾಂಗ್ರೆಸ್ ನವರಿಗೆ ನಾಚಿಕೆ ಆಗಲ್ವಾ, ಮಾನ ಮರ್ಯಾದೆ ಇದ್ಯಾ? ನಮ್ಮ ಹಣ ಎಲ್ಲಾ ಉತ್ತರ ಪ್ರದೇಶಕ್ಕೆ ಹೋಗುತ್ತದೆ ಅಂತಾ ಹೇಳುತ್ತೀರಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಾಂಧಿ ಪ್ರತಿಮೆ ಎದುರು ಹೋರಾಟ ಮಾಡುತ್ತಿದ್ದು, 136 ಜನ ಕಾಂಗ್ರೆಸ್ ಶಾಸಕರು ಸಂಸದ ಡಿ‌ಕೆ ಸುರೇಶ್ ಹೇಳಿಕೆಯನ್ನು ಬೆಂಬಲಿಸಲು ದೆಹಲಿಗೆ ಹೋಗಿದ್ದಾರೆ ಕಾಂಗ್ರೆಸ್​​ನ ಗುರಿ ಪ್ರಧಾನಿ ನರೇಂದ್ರ ಮೋದಿ. ಅವರು ಹತ್ತು ವರ್ಷ ಏನು ಬಿಡುಗಡೆ ಮಾಡಿದ್ದಾರೆ, ನೀವೇನು ಬಿಡುಗಡೆ ಮಾಡಿದ್ದೀರಿ ದಾಖಲೆ‌ ಮುಂದಿಡಿ ಎಂದು ಸವಾಲು ಹಾಕಿದರು.

ಬರಕ್ಕೆ ಹಣ ಬಿಡುಗಡೆ ಮಾಡಲು 9 ತಿಂಗಳು ತೆಗೆದುಕೊಂಡಿದ್ದಾರೆ. ಅದಕ್ಕೆ ದಾಖಲೆ ನನ್ನ ಹತ್ತಿರ ಇದೆ. ರಾಮ ಮಂದಿರ ಆದ ರೀತಿ ನೋಡಿ ಕಾಂಗ್ರೆಸ್​​ನವರು ಹುಚ್ಚರ ರೀತಿ ಬೀದಿ ಬೀದಿ ಅಲೆಯುತ್ತಿದ್ದು, ಕೆರೆಗೋಡು ಪ್ರಕರಣದ ಬಳಿಕ ಇನ್ನೂ ಹುಚ್ಚು ಹತ್ತಿದೆ ಎಂದು ಅವರು ಹೇಳಿದರು.ಸ್ನೇಹಿತ ಸ್ಟಾಲಿನ್​​ಗೆ ನೀರು ಬಿಡುವಾಗ ಬಾಯಿ ಮುಚ್ಚಿಕೊಂಡಿದ್ದರು ಎಂದು ಹೇಳಿದರು.